ಧರಿಸಿದ್ದ ದಿರಿಸು ತೆಗೆದು ವಿಮಾನದಲ್ಲಿ ಬೆತ್ತಲೆಯಾದ ಪ್ರಯಾಣಿಕ
ಲಖನೌ, ಡಿಸೆಂಬರ್ 30: ದುಬೈನಿಂದ ಲಖನೌಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ವಿಲಕ್ಷಣ ಘಟನೆ ವರದಿಯಾಗಿದೆ. ವಿಮಾನದಲ್ಲಿ ಬರುವಾಗ ಧರಿಸಿದ್ದ ಬಟ್ಟೆ ಬಿಚ್ಚಿ, ಬೆತ್ತಲೆಯಾಗಿ ನಡೆದಾಡಿದ್ದಾನೆ. IX 194 ವಿಮಾನದಲ್ಲಿ ಹೀಗಾಗಿದ್ದು, ಅದರಲ್ಲಿ 150 ಮಂದಿ ಪ್ರಯಾಣ ಮಾಡುತ್ತಿದ್ದರು.
ಕೆಲ ಕ್ಷಣಗಳಲ್ಲೇ ವಿಮಾನದೊಳಗಿನ ಸಿಬ್ಬಂದಿ ಹೊದಿಕೆಯಿಂದ ಆತನನ್ನು ಮುಚ್ಚಿದ್ದಾರೆ. ಆ ನಂತರ ಲಖನೌ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣಕ್ಕೆ ಬಂದು ವಿಮಾನ ಇಳಿದಿದೆ. ಆ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಒಪ್ಪಿಸಲಾಗಿದೆ. "ವಿಮಾನದ ಕ್ಯಾಪ್ಟನ್ ನಿರ್ದೇಶನದ ಮೇರೆಗೆ ವಿಮಾನ ಯಾನ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದು, ತನಿಖೆ ನಡೆಯುತ್ತಿದೆ" ಎಂದು ಮಾಧ್ಯಮಗಳಿಗೆ ತಿಳಿಸಲಾಗಿದೆ.

ಆ ಪ್ರಯಾಣಿಕ ಹೀಗೆ ವಿಮಾನ ಯಾನದ ಮಧ್ಯದಲ್ಲಿ ಬೆತ್ತಲಾಗಿದ್ದಕ್ಕೆ ಹಾಗೂ ನಡೆದಾಡಿದ್ದು ಏಕೆ ಎಂಬುದು ನಂತರ ತಿಳಿದುಬಂದಿದೆ. ಆದರೆ ಅಂತರರಾಷ್ಟ್ರೀಯ ವಿಮಾನದಲ್ಲಿ ಇಂಥ ಘಟನೆ ನಡೆದಿರುವ ಬಗ್ಗೆ ಉಳಿದ ಪ್ರಯಾಣಿಕರು ಆತಂಕಕ್ಕೆ ಈಡಾಗಿದ್ದರು.
ದುಬೈನಲ್ಲಿ ಆತ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿದ್ದ ಪಾಕಿಸ್ತಾನ ಮೂಲದ ಸಹೋದ್ಯೋಗಿಗಳು ಹೊಡೆಯುತ್ತಿದ್ದರು, ಹಿಂಸೆ ನೀಡುತ್ತಿದ್ದರು. ಇದರಿಂದ ಬೇಸತ್ತು, ಕೆಲಸಕ್ಕೆ ರಾಜೀನಾಮೆ ನೀಡಿ, ವಾಪಸಾಗುತ್ತಿದ್ದ ಈ ವ್ಯಕ್ತಿ ಹತಾಶೆಯಿಂದ ಹೀಗೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ನಾನು ಈ ರೀತಿ ಮಾಡಬಾರದಿತ್ತು ಎಂದು ಕ್ಷಮೆ ಕೇಳಿದ್ದಾನೆ.












Click it and Unblock the Notifications