ಕೊಯ್ಲು ಮಾಡಿದ್ದಾಯ್ತು, ಈಗ ಟ್ರ್ಯಾಕ್ಟರ್ ಓಡಿಸಿದ ಹೇಮಾ ಮಾಲಿನಿ
ಮಥುರಾ, ಏಪ್ರಿಲ್ 5: ಇತ್ತೀಚೆಗಷ್ಟೇ ಗೋವರ್ಧನ ಪ್ರದೇಶದ ಗೋಧಿ ಹೊಲಕ್ಕೆ ತೆರಳಿ ಬೆಳೆಗಳನ್ನು ಕಟಾವು ಮಾಡಿದ್ದಲ್ಲದೆ ತೆನೆಯನ್ನು ಹೊತ್ತಿದ್ದ ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದೆ ಹೇಮಾ ಮಾಲಿನಿ ಶುಕ್ರವಾರ ಹೊಲವೊಂದರಲ್ಲಿ ಟ್ರ್ಯಾಕ್ಟರ್ ಓಡಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಗೋವರ್ಧನ ಪ್ರದೇಶದಲ್ಲಿ ಅವರು ಹೊಲಕ್ಕೆ ತೆರಳಿ ಕೆಲ ಹೊತ್ತು ಟ್ರ್ಯಾಕ್ಟರ್ ಓಡಿಸಿದರು. ಮಹಿಳೆಯರ ಜತೆಗೂಡಿ ಕಟಾವು ಮಾಡಿದ್ದ ಅವರು ವಿರೋಧಿಗಳ ಟೀಕೆಗೆ ಗುರಿಯಾಗಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, 'ನಾನೊಬ್ಬ ನಟಿ, ಸೆಲೆಬ್ರಿಟಿ. ಇದನ್ನು ನಾನು ಮುಂಬೈನಲ್ಲಿ ನೋಡಲು ಸಾಧ್ಯವಿಲ್ಲ. ನಾನು ಹಳ್ಳಿಗಳಿಗೆ ಹೋದಾಗ ಅಲ್ಲಿನ ಪರಿಸರವನ್ನು ಇಷ್ಟಪಡುತ್ತೇನೆ. ಒಂದು ವೇಳೆ ನಾನು ನಟಿಸಿದ್ದರೂ ಅದು ತಮಾಷೆಯಷ್ಟೇ. ಅದರಲ್ಲಿ ತಪ್ಪೇನಿದೆ? ಮುಂಬೈನಲ್ಲಿ ಈ ಚಿತ್ರ ನೋಡಿದ ಎಲ್ಲರೂ ಖುಷಿ ಪಡುತ್ತಿದ್ದಾರೆ. ಧರ್ಮೇಂದ್ರ (ಪತಿ) ತುಂಬಾ ಸಂತೋಷಪಟ್ಟುಕೊಂಡರು. ಬಹಳ ಸುಂದರವಾಗಿದೆ ಎಂದರು' ಎಂಬುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
BJP MP and Mathura candidate Hema Malini drives a tractor in Govardhan pic.twitter.com/ZPmiRLB1qA
— ANI UP (@ANINewsUP) 5 April 2019
'ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಲು ಹೆಮ್ಮೆಯಾಗುತ್ತದೆ. ರಸ್ತೆಗಳಿಗಾಗಿ ಕೋಟ್ಯಂತರ ರೂಪಾಯಿ ವಿನಿಯೋಗಿಸಿದ್ದೇನೆ. ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಕೆಲವು ಕಡೆ ಕಾಂಗ್ರೆಸ್ ನಿರ್ಲಕ್ಷಿಸಿದೆ. ಕಷ್ಟದಲ್ಲಿರುವ ಜನರನ್ನು ಕಂಡಾಗ ನನ್ನ ಕಣ್ಣುಗಳಲ್ಲಿ ನೀರು ಸುರಿಯುತ್ತದೆ' ಎಂದಿದ್ದಾರೆ.












Click it and Unblock the Notifications