Get Updates
Get notified of breaking news, exclusive insights, and must-see stories!

ಲಿವ್ ಇನ್ ಸಂಬಂಧ ಅಪರಾಧವಲ್ಲ, ಸಹಮತ ಬಾಳ್ವೆಗೆ ಕೋರ್ಟ್ ಓಕೆ

ಅಲಹಾಬಾದ್(ಪ್ರಯಾಗ್ ರಾಜ್), ಡಿ3: ''ಗಂಡ-ಹೆಂಡತಿ ರೀತಿಯಲ್ಲಿ ಜೋಡಿಯೊಂದು ದೀರ್ಘಕಾಲ ವಾಸಮಾಡುತ್ತಿದ್ದರೆ ಅವರನ್ನು ಕಾನೂನು ಬದ್ಧವಾಗಿ ದಂಪತಿ ಎಂದೇ ಭಾವಿಸಲಾಗುತ್ತದೆ'' ಎಂದು ಸುಪ್ರೀಂಕೋರ್ಟ್ ಅನೇಕ ಬಾರಿ ತೀರ್ಪು ನೀಡಿದೆ. ಈಗ ಲಿವ್ ಇನ್ ಸಂಬಂಧ ಕುರಿತಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಲಿವ್ ಇನ್ ಸಂಬಂಧ ಅಪರಾಧವಲ್ಲ, ವಯಸ್ಕರಿಬ್ಬರು ಸಮಾನ ಮನಸ್ಕರ ಜೊತೆ ಸಹಮತ ಬಾಳ್ವೆ ನಡೆಸಿದರೆ ಅದು ತಪ್ಪಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದೆ.

ಉತ್ತರಪ್ರದೇಶ v/s ಕಾಮಿನಿ ದೇವಿ ಪ್ರಕರಣದಲ್ಲಿ

Live-­in relationship is a relationship which has not been socially accepted in India, unlike many other countries. In the case of Lata Singh vs. State of UP [(2006) 2 SCC (Cri) 478], it was observed that a live­-in relationship between two consenting adults of heterosexual sex does not amount to any offence even though it may be perceived as immoral," ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Live-in relationship not an offence, two consenting adults free to live together: Allahabad HC

ಅಲಹಾಬಾದ್ ಕೋರ್ಟ್ ಜಸ್ಟೀಸ್ ಅಂಜನಿ ಕುಮಾರಿ ಮಿಶ್ರಾ ಹಾಗೂ ಪ್ರಕಾಶ್ ಪಾಡಿಯಾ ಅವರು ಆದೇಶ ನೀಡಿದ್ದಾರೆ.

ಕಾನೂನು ಮದುವೆಯ ಪರವಾಗಿ, ಅಕ್ರಮ ಸಂಬಂಧದ ವಿರುದ್ಧವಾಗಿ ಸದಾ ಕೆಲಸ ಮಾಡುತ್ತದೆ. ದೀರ್ಘಕಾಲದ ಬಂಧ ಇಟ್ಟುಕೊಂಡಿದ್ದರೆ ಅದನ್ನು ಮದುವೆ ಎಂದೇ ಪರಿಗಣಿಸಬೇಕಾಗುತ್ತದೆ. ಲಿವ್ ಇನ್ ಸಂಬಂಧದಲ್ಲಿ ಪುರುಷ ಸಾವಿಗೀಡಾದರೆ ಆತನ ಆಸ್ತಿಗೆ ಮಹಿಳೆ ಉತ್ತರಾಧಿಕಾರಿಯಾಗಿ ಮಾರ್ಪಡುತ್ತಾಳೆ ಎಂದು ಸುಪ್ರೀಂ ಕೋರ್ಟ್ ನ್ಯಾ ಎಂ. ಎ. ಇಕ್ಬಾಲ್ ಮತ್ತು ಅಮೀತ್ ರಾಯ್ ನೇತೃತ್ವದ ವಿಭಾಗೀಯ ಪೀಠವು 2015ರಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಲಾಗಿದೆ.

ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಲಿವ್ ಇನ್ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ್ದರೂ ಭಾರತದ ನಾಗರಿಕ ಸಮಾಜದಲ್ಲಿ ಅನೈತಿಕ ಎಂದೇ ಪರಿಗಣಿಸಲಾಗಿದೆ.

Live-in relationship not an offence, two consenting adults free to live together: Allahabad HC

ಪ್ರಸ್ತುತ ಈ ಪ್ರಕರಣದಲ್ಲಿ ಕಾಮಿನಿ ದೇವಿ ಎಂಬುವರು ಕೋರ್ಟಿಗೆ ಮನವಿ ಸಲ್ಲಿಸಿ, ನನ್ನ ವಿರುದ್ಧವಾಗಿ ನನ್ನ ಕುಟುಂಬದವರು ಹಿರಿಯ ವ್ಯಕ್ತಿಯೊಬ್ಬನನ್ನು ವರಿಸಲು ಒತ್ತಾಯಿಸುತ್ತಿದ್ದಾರೆ. ಇದರಿಂದಾಗಿ ನಾನು ನನ್ನ ಇಚ್ಛೆಗೆ ಅನುಸಾರವಾಗಿ ಅಜಯ್ ಕುಮಾರ್ ಅವರ ಜೊತೆ ವಾಸಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಆಧಾರ್ ಕಾರ್ಡ್ ಮಾಹಿತಿ ಪ್ರಕಾರ ಇಬ್ಬರ ವಯಸ್ಸು ಕ್ರಮವಾಗಿ 24 ಹಾಗೂ 28 ಎಂದು ತಿಳಿದು ಬಂದಿದೆ.

ಇಬ್ಬರಿಗೂ ಅವರ ಪೋಷಕರಾಗಲಿ ಇತರೆ ಸಂಬಂಧಿಕರಾಗಲಿ ಹಿಂಸೆ ನೀಡುವಂತಿಲ್ಲ, ಸಂಬಂಧಪಟ್ಟ ಪೊಲೀಸ್ ಠಾಣೆ(ಜಹನ್ ಗಂಜ್ ಜಿಲ್ಲೆ) ಯವರು ಸೂಕ್ತ ಭದ್ರತೆ ಒದಗಿಸಬೇಕು ಎಂದು ಕೋರ್ಟ್ ಸೂಚಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+