ಬಾಡಿಗೆ ಮನೆ ನೆಲಮಾಳಿಗೆಯಲ್ಲಿ ಕಾನೂನು ವಿದ್ಯಾರ್ಥಿಯ ಶವ ಪತ್ತೆ

ಗಾಜಿಯಾಬಾದ್, ಅಕ್ಟೋಬರ್ 16: ಕಾಣೆಯಾಗಿದ್ದ ಕಾನೂನು ವಿದ್ಯಾರ್ಥಿಯನ್ನು ಗಾಜಿಯಾಬಾದ್‌ನ ಬಾಡಿಗೆ ಮನೆಯ ನೆಲಮಾಳಿಗೆಯಲ್ಲಿ ಸಮಾಧಿ ಮಾಡಲಾಗಿದೆ.

ನಾಪತ್ತೆಯಾಗಿದ್ದ ಕಾನೂನು ವಿದ್ಯಾರ್ಥಿಯ ಶವವನ್ನು ಸಾಹಿಬಾಬಾದ್‌ನ ಗಿರ್ಧಾರ್ ಎನ್‌ಕ್ಲೇವ್‌ನಲ್ಲಿರುವ ನೆಲಮಾಳಿಗೆಯಲ್ಲಿ ಹೂತುಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 9 ರಿಂದ ಪಂಕಜ್ ಸಿಂಗ್ (29) ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಮಿಶ್ರಾ ತಿಳಿಸಿದ್ದಾರೆ.

ಬಾಡಿಗೆ ಮನೆ ಮಾಲೀಕ ಹರಿಯೊಮ್ ಅಲಿಯಾಸ್ ಮುನ್ನಾ ಅವರು ಕುಟುಂಬದೊಂದಿಗೆ ಶನಿವಾರವೇ ಪರಾರಿಯಾಗಿದ್ದಾರೆ, ಭೂ ಮಾಲೀಕರನ್ನು ಹುಡುಕಾಟದಲ್ಲಿ ಪೊಲೀಸರು ಇರುವುದಾಗಿ ತಿಳಿಸಿದ್ದಾರೆ.

Law Student Found Buried In Ex Landlords Basement

ಕೆಲವು ದಿನಗಳ ಹಿಂದಷ್ಟೇ ಸಿಂಗ್ ಬೇರೆಡೆ ಮನೆ ಮಾಡಿದ್ದರು. ಆರೋಪಿಗಳ ನಾಲ್ಕು ಮಕ್ಕಳು ಸೇರಿದಂತೆ ವಿದ್ಯಾರ್ಥಿಗಳಿಗೆ ಸಿಂಗ್ ಸಹ ಟ್ಯೂಷನ್ ಮಾಡುತ್ತಿದ್ದರು. ಆದರೆ ಆ ಸೈಬರ್‌ನ್ನು ಕಡಿಮೆ ಬೆಲೆಗೆ ಮಾಡುವಂತೆ ಹರಿಯೋಮ್ ಒತ್ತಡ ಹೇರುತ್ತಿದ್ದ ಎನ್ನುವುದು ತಿಳಿದುಬಂದಿದೆ.

ಸಿಂಗ್ ನಾಪತ್ತೆಯಾದ ತಕ್ಷಣವೇ ಅವರ ಸಹೋದರ ಮನೀಶ್ ಸಾಹಿಬಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಂತರ ಸಿಂಗ್ ಅವರ ಶವವನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹೊರತೆಗೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ವರದಿಯ ಪ್ರಕಾರ, ಆತನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಅವರು ಹೇಳಿದರು.

ಸಿಂಗ್ ಸೈಬರ್ ಕೆಫೆ ನಡೆಸುತ್ತಿದ್ದುದನ್ನು ಹರಿಯೋಮ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚಿನ ಹಣ ಗಳಿಕೆಯ ದುರಾಸೆಯಿಂದ ಆತನನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+