ಕಮಲೇಶ್ ಹತ್ಯೆ CCTV ಯಲ್ಲಿ ಸೆರೆ, ಮಹಿಳೆ ತಂದ ಸ್ವೀಟ್ ಬಾಕ್ಸ್ ನಲ್ಲಿತ್ತು ಮೃತ್ಯು!

ಲಕ್ನೋ, ಅಕ್ಟೋಬರ್ 19: ಶುಕ್ರವಾರದಂದು ಉತ್ತರ ಪ್ರದೇಶದ ನಾಕಾ ಎಂಬಲ್ಲಿ ನಡೆದ ಹಿಂದು ಸಮಾಜ ಪಕ್ಷದ ಅಧ್ಯಕ್ಷ ಕಮಲೇಶ್ ತಿವಾರಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಸುಳಿವು ಲಭ್ಯವಾಗಿದೆ.

ಕಮಲೇಶ್ ಅವರ ಮನೆಯ ಹೊರಗೇ ಅವರನ್ನು ಕೊಲೆ ಮಾಡಲಾಗಿದ್ದು, ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿಟಿವಿ ಕ್ಯಾಮರಾ ಫೂಟೇಜ್ ಅನ್ನು ವಶಕ್ಕೆ ಪಡೆದ ಪೊಲೀಸರು ಅದನ್ನು ಪರಿಶೀಲಿಸಿದಾಗ ಕೊಲೆ ನಡೆಯುವ ಮುನ್ನ ಕಮಲೇಶ್ ಮನೆಯ ಬಳಿ ಮೂರು ಆಗಮಿಸಿದ್ದು ಸರೆಯಾಗಿದೆ. ಅದರಲ್ಲಿ ಇಬ್ಬರು ಪುರುಷರಿದ್ದರೆ, ಓರ್ವ ಮಹಿಳೆ ಇದ್ದಾರೆ.

ಮಹಿಳೆ ತಂದಿದ್ದ ಸ್ವೀಟ್ ಬಾಕ್ಸಿನಲ್ಲೇ ಕೊಲೆಗೆ ಬಳಸಲಾಗಿದ್ದ ಆಯುಧವನ್ನು ತರಲಾಗಿತ್ತು ಎಂಬುದು ಸಾಬೀತಾಗಿದೆ.

Array

ಆರೋಪಿಗಳ ಬಂಧನ, ತಪ್ಪೊಪ್ಪಿಕೊಂಡ ಮೂವರು

ಘಟನೆಗೆ ಸಂಬಂಧಿಸಿದಂತೆ ಒಟ್ಟು ಐವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದು, ಅವರಲ್ಲಿ ಮೂವರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮೂವರು ಆರೋಪಿಗಳು ಗುಜರಾತ್ ಮೂಲದವರಾಗಿದ್ದು, ಮೌಲಾನಾ ಮೊಹ್ಸಿನ್ ಶೇಖ್(24), ರಶೀದ್ ಅಹ್ಮದ್ ಪಠಾಣ್ (23) ಮತ್ತು ಫೈಜಾನ್(21) ಎಂದು ಗುರುತಿಸಲಾಗಿದೆ. ಆದರೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ವ್ಯಕ್ತಿಗಳು ತಲೆಮರೆಸಿಕೊಂಡಿದ್ದು, ಕೃತ್ಯದೊಂದಿಗೆ ಸಂಬಂಧ ಹೊಂದಿರುವವರನ್ನು ಮಾತ್ರ ಬಂಧಿಸಲಾಗಿದೆ.

ಶುಕ್ರವಾರ ನಡೆದಿದ್ದೇನು?

ಶುಕ್ರವಾರ ನಡೆದಿದ್ದೇನು?

ಅಕ್ಟೋಬರ್ 18 ರಂದು ಉತ್ತರ ಪ್ರದೇಶದ ನಾಕಾ ಎಂಬಲ್ಲಿ 43 ವರ್ಷ ವಯಸ್ಸಿನ ತಿವಾರಿ ಅವರನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಕಮಲೇಶ್ ಅವರನ್ನು ಕೊಲ್ಲುವ ಉದ್ದೇಶದಿಂದಲೇ ಅವರ ಮನೆಯ ಬಳಿಗೆ ಇಬ್ಬರು ಮುಸ್ಲಿಂ ಧಾರ್ಮಿಕ ಮುಖಂಡರು ಆಗಮಿಸಿದ್ದರು, ಅವರೊಂದಿಗೆ ಓರ್ವ ಮಹಿಳೆಯೂ ಇದ್ದರು ಎಂಬುದು ಈ ವಿಡಿಯೋ ಮೂಲಕ ತಿಳಿದು ಬಂದಿದೆ.

ಸ್ವೀಟ್ ಬಾಕ್ಸ್ ನಲ್ಲಿ ಮೃತ್ಯು!

ಸ್ವೀಟ್ ಬಾಕ್ಸ್ ನಲ್ಲಿ ಮೃತ್ಯು!

ಈ ಮಹಿಳೆ ದೀಪಾವಳಿ ಉಡುಗೊರೆ ಎಂದು ಒಂದು ಸ್ವೀಟ್ ಬಾಕ್ಸ್ ಅನ್ನು ಕಮಲೇಶ್ ಅವರಿಗಾಗಿ ತಂದಿದ್ದರು. ಅದರೊಳಗೆ ಕಮಲೇಶ್ ಅವರನ್ನು ಕೊಲ್ಲಲು ಬಳಸಲಾಗಿದ್ದ ಆಯುಧವನ್ನು ತರಲಾಗಿತ್ತು ಎಂದು ಶಂಕಿಸಲಾಗಿದೆ. ಕೊಲೆಯ ನಂತರ ಮನೆಯ ಬಳಿ ಬಿದ್ದಿದ್ದ ಸ್ವೀಟ್ ಬಾಕ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು ಇದರಲ್ಲಿ ಒಂದು ರಿವಾಲ್ವಾರ್ ಪತ್ತೆಯಾಗಿದೆ. ಜೊತೆಗೆ ಕೊಲೆ ಬಳಸಿದ್ದ ಚಾಕುವನ್ನೂ ಈ ಬಾಕ್ಸ್ ನಲ್ಲಿಯೇ ತರಲಾಗಿತ್ತು ಎಂದು ಶಂಕಿಸಲಾಗಿದ್ದು, ಅದು ಸಿಕ್ಕ ಬಗ್ಗೆ ಮಾಹಿತಿ ಲಭ್ಯವಿಲ್ಲ.

ಕಾರಣವೇನು?

ಕಾರಣವೇನು?

ಇದೊಂದು ಭಯೋತ್ಪಾದಕ ಕೃತ್ಯ ಎಂಬುದನ್ನು ತಳ್ಳಿಹಾಕಕಿರುವ ಪೊಲೀಸರು, 2015 ರಲ್ಲಿ ತಿವಾರಿ ಪ್ರವಾದಿ ಮೊಹಮ್ಮದ್ ಬಗ್ಗೆ ಆಡಿದ್ದ ವಿವಾದಾತ್ಮಕ ಮಾತುಗಳೇ ಅವರ ಕೊಲೆಗೆ ಕಾರಣವಿರಬಹುದು ಎಂದು ಅಂದಾಜಿಸಿದ್ದಾರೆ. ಎಫ್ ಐಆರ್ ನಲ್ಲಿ ಆರೋಪಿ ಎಂದು ಹೆಸರಿಸಲಾಗಿರುವ ಮುಸ್ಲಿಂ ಧಾರ್ಮಿಕ ಮುಖಂಡರು 2016 ರಲ್ಲೇ ಕಮಲೇಶ್ ತಿವಾರಿ ಅವರನ್ನು ಕೊಂದರೆ 51 ಲಕ್ಷ ರೂ. ಬಹುಮಾನ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಾಹುತಿ ಮಾಡಿಕೊಳ್ಳುತ್ತೇವೆಂದ ಪತ್ನಿ

ಆತ್ಮಾಹುತಿ ಮಾಡಿಕೊಳ್ಳುತ್ತೇವೆಂದ ಪತ್ನಿ

ಪತಿಯ ಕೊಲೆಯಿಂದ ಆಘಾತಕ್ಕೊಳಗಾಗಿರುವ ಕಮಲೇಶ್ ಪತ್ನಿ ಕಿರಣ್ ತಿವಾರಿ, ಪೊಲೀಸರಿಗೆ ದೂರು ನೀಡಿದ್ದು, ಈ ಕುರಿತು ತಕ್ಷಣವೇ ತನಿಖೆ ನಡೆಯಬೇಕು. ಇಲ್ಲವೆಂದರೆ ನಾನು ನನ್ನ ಮಕ್ಕಳೊಂದಿಗೆ ಆತ್ಮಾಹುತಿಗೊಳಗಾಗುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+