ಪತ್ರಕರ್ತರು ಸತ್ಯ ಬರೆದರೆ ಮೋದಿ ಹೊಡೆಯುತ್ತಾರೆ: ರಾಹುಲ್ ಗಾಂಧಿ

ಅಮೇಥಿ, ಏಪ್ರಿಲ್ 22: ಪತ್ರಕರ್ತರು ತಮ್ಮ ಮನದ ಮಾತನ್ನು ಬರೆದುಬಿಟ್ಟರೆ, ಮೋದಿ, ಅವರಿಗೆ ಕೋಲು ತೆಗೆದುಕೊಂಡು ಹೊಡೆಯುತ್ತಾರೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಉಮೇದುವಾರಿಕೆ ಸಲ್ಲಿಸಿರುವ ಅಮೇಥಿಯಲ್ಲಿ ಇಂದು ಬೃಹತ್ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು. ಈ ಸಮಯ ರಾಹುಲ್ ಗಾಂಧಿ ಚೌಕೀದಾರ್ ಎಂದರೆ ಜನ 'ಚೋರ್‌ ಹೇ' ಎಂದರು ಈ ಸಮಯ ಎದುರಿಗಿದ್ದ ಪತ್ರಕರ್ತರು ನಗುತ್ತಿದ್ದರು ಇದನ್ನು ಕಂಡು ರಾಹುಲ್ ಗಾಂಧಿ ಮೇಲಿನಂತೆ ಹೇಳಿದರು.

'ಪರ್ತಕರ್ತರು ನಗುತ್ತಿದ್ದಾರೆ, ಅವರ ನಗುವಿಗೆ ಕಾರಣ ನಾನು ಹೇಳುತ್ತೇನೆ, ಪತ್ರಕರ್ತರು ತಮ್ಮ ಮನದ ಮಾತು ಬರೆದರೆ ಮೋದಿ ಎರಡು ಏಟು ಹೊಡೆಯುತ್ತಾರೆ, ಹಾಗಾಗಿ ಅವರು ಮೋದಿ ಅವರ ಮನದ ಮಾತನ್ನು ನಗುತ್ತಲೇ ವರದಿ ಮಾಡಬೇಕಾಗಿ ಬಂದಿದೆ ಎಂದು ರಾಹುಲ್ ಗಾಂಧಿ ಹೇಳಿದರು.

If Journalists write truth then Modi will hit them: Rahul Gandhi

ಮುಂದುವರೆದು ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ 'ಚಿಂತೆ ಮಾಡಬೇಡಿ, 2019ರ ಚುನಾವಣೆ ನಂತರ ನೀವು ಭಯಬಿಟ್ಟು ನಿಮ್ಮ ವೃತ್ತಿ ಮಾಡಬಹುದಾಗಿರುತ್ತದೆ, ಆಗ ನಮ್ಮ ಬಗ್ಗೆಯೂ ಟೀಕೆ ಮಾಡುವಹಾಗಿದ್ದರೆ ಮಾಡಿ ಚಿಂತೆ ಇಲ್ಲ' ಎಂದು ರಾಹುಲ್ ಗಾಂಧಿ ಹೇಳಿದರು.

ಮೋದಿ ವಿರುದ್ಧ ಬರೆದರೆ ಅಥವಾ ವರದಿ ಮಾಡಿದರೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಅವರು ಹೇಳುವ ಯತ್ನವನ್ನು ತಮ್ಮ ಭಾಷಣದಲ್ಲಿ ಮಾಡಿದರು.

ರಾಹುಲ್ ಗಾಂಧಿ ಅವರು ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಅವರಿಗೆ ಎದುರಾಗಿ ಬಿಜೆಪಿಯ ಸ್ಮೃತಿ ಇರಾನಿ ಅವರು ಸ್ಪರ್ಧಿಸಿದ್ದಾರೆ. ರಾಹುಲ್ ಗಾಂಧಿ ಅವರು ಅಮೇಥಿ ಜೊತೆಗೆ ಕೇರಳದ ವೈನಾಡಿನಿಂದಲೂ ಚುನಾವಣೆಗೆ ಸ್ಪರ್ಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+