Get Updates
Get notified of breaking news, exclusive insights, and must-see stories!

ಬಿಹಾರದ ನಂತರ ಇದೀಗ ಉತ್ತರ ಪ್ರದೇಶದ ಗಂಗಾ ತೀರದಲ್ಲಿ ತೇಲುತ್ತಿವೆ ಹೆಣಗಳ ರಾಶಿ

ನವದೆಹಲಿ, ಮೇ 11: ಬಿಹಾರದ ಬಳಿಕ ಇದೀಗ ಉತ್ತರ ಪ್ರದೇಶದ ಗಂಗಾ ತಟದಲ್ಲಿ ಹೆಣಗಳ ರಾಶಿ ತೇಲುತ್ತಿವೆ. ಸೋಮವಾರವಷ್ಟೇ ಬಿಹಾರದ ಬಕ್ಸಾರ್‌ನಲ್ಲಿ ಗಂಗಾ ನದಿ ತೀರದಲ್ಲಿ ಸುಮಾರು 150ಕ್ಕೂ ಹೆಚ್ಚು ಶವಗಳು ತೇಲುತ್ತಿರುವ ಸುದ್ದಿ ವರದಿಯಾಗಿತ್ತು. ಇದೀಗ ಉತ್ತರ ಪ್ರದೇಶದ ಗಂಗಾ ನದಿ ತೀರದಲ್ಲಿ ಕೂಡ ಶವಗಳು ತೇಲುತ್ತಿವೆ.

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಂಗಳವಾರ ಈ ಘಟನೆಯನ್ನು ದುರದೃಷ್ಟಕರ ಎಂದು ಹೇಳಿದ್ದರು. ಬಿಹಾರದ ಬಕ್ಸಾರ್ ಪ್ರದೇಶದಲ್ಲಿ ಗಂಗಾದಲ್ಲಿ ತೇಲುತ್ತಿರುವ ಶವಗಳ ಘಟನೆ ದುರದೃಷ್ಟಕರ.

ಇದು ಖಂಡಿತವಾಗಿಯೂ ತನಿಖೆಯ ವಿಷಯವಾಗಿದೆ. ಮೋದಿ ಸರ್ಕಾರ ಸ್ವಚ್ಛ 'ತಾಯಿ' ಗಂಗಾಗೆ ಬದ್ಧವಾಗಿದೆ. ಈ ಘಟನೆ ಅನಿರೀಕ್ಷಿತವಾಗಿದೆ. ಸಂಬಂಧಪಟ್ಟ ರಾಜ್ಯಗಳು ತಕ್ಷಣದ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಶೇಖಾವತ್ ಟ್ವೀಟ್ ಮಾಡಿದ್ದರು.

Human Corpses Float, Pile Up At Ganga Bank, This Time In Uttar Pradesh

ಮೃತದೇಹಗಳು ಎಲ್ಲಿಂದ ಬರುತ್ತಿವೆ ಎಂದು ತಿಳಿಯುವ ಸಲುವಾಗಿ ನಮ್ಮ ಅಧಿಕಾರಿಗಳು ಸ್ಥಳದಲ್ಲಿ ಟಿಕಾಣಿ ಹೂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿವೆ ಎಂದು ಘಾಜಿಪುರದ ಜಿಲ್ಲಾಧಿಕಾರಿ ಸಂಸದ ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.

ಗಂಗೆಯಲ್ಲಿ ತೇಲುತ್ತಿರುವ ಮಾನವ ಶರೀರಗಳನ್ನು ನೋಡಿ ಆತಂಕಕ್ಕೀಡಾಗಿದ್ದೇವೆ. ತಮಗೆ ಎಲ್ಲಿ ರೋಗ ಹರಡುತ್ತದೆ ಎಂಬ ಭಯ ಕಾಡುತ್ತಿದೆ. ಇದು ಕೋವಿಡ್ ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಗಂಗೆಯಲ್ಲಿ ಮೃತದೇಹಗಳು ತೇಲುತ್ತಿವೆ.

ಅಲ್ಲದೆ ಉಬ್ಬಿದ, ಕೊಳೆತ ಶವಗಳಿಂದ ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ದೂರಿದ್ದು ಅಧಿಕಾರಿಗಳ ಅಸಮರ್ಥತೆಗೆ ಆರೋಪಿಸಿದ್ದಾರೆ. ನಾವು ಈ ಬಗ್ಗೆ ಆಡಳಿತಕ್ಕೆ ಮಾಹಿತಿ ನೀಡಿದ್ದೇವೆ, ಆದರೆ ಅವರಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ನಾವು ಕೊರೊನಾವೈರಸ್ ಸೋಂಕಿಗೆ ಒಳಗಾಗುವ ಭೀತಿ ಇದೆ ಎಂದು ನಿವಾಸಿ ಅಖಂಡ್ ಎಎನ್‌ಐಗೆ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+