ರಾಮಜನ್ಮಭೂಮಿ ನಕ್ಷೆ ಹರಿದ ರಾಜೀವ್ ಧವನ್ ವಿರುದ್ಧ ಕ್ರಮಕ್ಕೆ ಆಗ್ರಹ
ಲಕ್ನೋ, ಅಕ್ಟೋಬರ್ 17: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 16 ರಂದು ಸುಪ್ರೀಂ ಕೋರ್ಟ್ ನಲ್ಲಿ ಅಂತಿಮ ವಿಚಾರಣೆ ನಡೆಯುತ್ತಿದ್ದ ವೇಳೆ, ರಾಮಜನ್ಮಸ್ಥಳದ ನಕ್ಷೆಯನ್ನು ಹರಿದುಹಾಕಿದ ಮುಸ್ಲಿಂ ಪರ ವಕೀಲ ರಾಜೀವ್ ಧವನ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅಖಿಲ ಭಾರತ ಹಿಂದು ಮಹಾಸಭಾ (ಎಐಎಸ್ ಎಂ) ಬಾರ್ ಕೌನ್ಸಿಲ್ ಗೆ ಪತ್ರ ಬರೆದಿದೆ.
ಕುನಾಲ್ ಕಿಶೋರ್ ಎಂಬುವವರು ಬರೆದ 'ಅಯೋಧ್ಯೆ ರಿವಿಸಿಟೆಡ್' ಎಂಬ ಪುಸ್ತವನ್ನು ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಕೋರ್ಟಿಗೆ ನೀಡಿದರು. ಈ ದಾಖಲೆಯನ್ನು ಸುನ್ನಿ ವಕ್ಫ್ ಬೋರ್ಡ್ ಪರವಾಗಿ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ರಾಜೀವ್ ಧನವ್ ಅವರು ಬಲವಾಗಿ ಖಂದಿಸಿದರು. ಅವರಿಗೆ ನೀಡಲಾಗಿದ್ದ ಈ ಪುಸ್ತಕದ ಹಾಳೆಗಳನ್ನು ಹರಿಯುವ ಮೂಲಕ ಅವರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.

ಈ ವರ್ತನೆಯಿಂದ ತೀವ್ರವಾಗಿ ಬೇಸರಗೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಕೋರ್ಟಿನಲ್ಲಿ ಇಂಥ ವರ್ತನೆ ಸಹ್ಯವಲ್ಲ, ಇದು ಮುಂದುವರಿದರೆ ನಾನೇ ಇಲ್ಲಿಂದ ಹೊರಹೋಗುತ್ತೇನೆ ಎಂದಿದ್ದರು. ಆದರೆ ನಂತರ ಈ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ ರಾಜೀವ್ ಧವನ್, ತಮಗೆ ಪೇಪರ್ ಗಳನ್ನು ಹರಿಯಲು ಸ್ವತಃ ಸಿಜೆಐ ಅನುಮತಿ ನೀಡಿದ್ದರು ಎಂದಿದ್ದರು. ಅದನ್ನು ರಂಜನ್ ಗೊಗೊಯ್ ಅವರೂ ಒಪ್ಪಿ, ರಾಜೀವ್ ಧವನ್ ಅವರ ಮಾತು ಸತ್ಯ ಎಂದಿದ್ದರು.












Click it and Unblock the Notifications