ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಘಾಜಿಯಾಬಾದ್: ಲಿಫ್ಟ್‌ನಲ್ಲಿ ಮಗುವಿಗೆ ಕಚ್ಚಿದ ನಾಯಿ

|
Google Oneindia Kannada News

ಘಾಜಿಯಾಬಾದ್ ಸೆಪ್ಟೆಂಬರ್ 06: ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಿಂದ ಆಘಾತಕಾರಿ ಮತ್ತು ಆತಂಕಕಾರಿ ವಿಡಿಯೋವೊಂದು ಬೆಳಕಿಗೆ ಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ನಂತರ ಬಳಕೆದಾರರು ಮಹಿಳೆ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ತನ್ನ ಸಾಕು ನಾಯಿಯೊಂದಿಗೆ ಲಿಫ್ಟ್‌ನಲ್ಲಿ ಹೋಗುತ್ತಿದ್ದಾರೆ. ಈ ವೇಳೆ ಲಿಫ್ಟ್‌ನಲ್ಲಿದ್ದ ಮಗುವನ್ನು ನಾಯಿ ಕಚ್ಚಿದೆ. ಆಶ್ಚರ್ಯವೆಂದರೆ ನಾಯಿ ಕಚ್ಚಿದ ನಂತರ ಮಗು ನೋವಿನಿಂದ ನರಳುತ್ತಲೇ ಇರುತ್ತದೆ. ಆದರೆ ಮಹಿಳೆ ಆ ಮಗುವಿನ ಸ್ಥಿತಿಯ ಬಗ್ಗೆ ಕೇಳುವುದಿಲ್ಲ.

ವಿಡಿಯೋ ಹೊರಬಿದ್ದ ಬಳಿಕ ಸಂತ್ರಸ್ತ ಮಗುವಿನ ಪೋಷಕರ ದೂರಿನ ಮೇರೆಗೆ ಪೊಲೀಸರು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣವು ಗಾಜಿಯಾಬಾದ್ ಜಿಲ್ಲೆಯ ರಾಜನಗರ ವಿಸ್ತರಣೆಯ ಚಾರ್ಮ್ಸ್ ಕ್ಯಾಸಲ್ ಅಪಾರ್ಟ್‌ಮೆಂಟ್‌ಗೆ ಸಂಬಂಧಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿರುವ ವಿಡಿಯೊದ ಘಟನೆ ಸೆಪ್ಟೆಂಬರ್ 05 ಸೋಮವಾರ ಸಂಜೆ 06 ಗಂಟೆಗೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸುದ್ದಿ ಪ್ರಕಾರ 09 ವರ್ಷದ ಬಾಲಕ ಟ್ಯೂಷನ್ ಮುಗಿಸಿಕೊಂಡು ಅಪಾರ್ಟ್‌ಮೆಂಟ್‌ ಲಿಫ್ಟ್ ನಿಂದ ಮನೆಗೆ ಮರಳುತ್ತಿದ್ದನು.

ಅಷ್ಟರಲ್ಲಿ ಮಹಿಳೆಯೊಬ್ಬಳು ತನ್ನ ಮುದ್ದಿನ ನಾಯಿಯೊಂದಿಗೆ ಲಿಫ್ಟ್‌ಗೆ ಬರುತ್ತಾಳೆ. ಲಿಫ್ಟ್‌ನ ಸಿಸಿಟಿವಿಯಲ್ಲಿ ನಾಯಿಯು ಮಗುವನ್ನು ಸೊಂಟದ ಬಳಿ ಕಚ್ಚಿರುವುದು ತೋರಿಸುತ್ತದೆ. ಅದರ ನಂತರ ಮಗು ನೋವಿನಿಂದ ನರಳಲು ಪ್ರಾರಂಭಿಸುತ್ತದೆ. ಆಶ್ಚರ್ಯದ ಸಂಗತಿಯೆಂದರೆ ಮಹಿಳೆ ಮಗುವಿನ ಯೋಗಕ್ಷೇಮದ ಬಗ್ಗೆ ಏನ್ನನ್ನೂ ಕೇಳಲಿಲ್ಲ ಮತ್ತು ಮೌನವಾಗಿ ಲಿಫ್ಟ್‌ನಿಂದ ಇಳಿದು ಹೋಗುತ್ತಾಳೆ. ಮಗುವಿನ ತಂದೆಯ ದೂರಿನ ಮೇರೆಗೆ ಪೊಲೀಸರು ಮಗುವಿನ ವೈದ್ಯಕೀಯ ಪರೀಕ್ಷೆಯ ನಂತರ ಎಫ್‌ಐಆರ್ ದಾಖಲಿಸಿದ್ದಾರೆ.

Ghaziabad: Child bitten by dog in lift

ಪೊಲೀಸ್ ತನಿಖೆ ಆರಂಭ

ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಪೋಷಕರ ದೂರು ಹಾಗೂ ವೈರಲ್ ವಿಡಿಯೋ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ನಾಯಿಯಿಂದ ಅಪಾರ್ಟ್‌ಮೆಂಟ್‌ ಜನರು ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Ghaziabad: Child bitten by dog in lift

ಅಪಾರ್ಟ್‌ಮೆಂಟ್‌ ಜನರು ಕೂಡ ನಾಯಿಯ ಬಗ್ಗೆ ಅನೇಕರು ಮಹಿಳೆಯರಿಗೆ ದೂರು ನೀಡಿದ್ದರೂ ಮಹಿಳೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಇದೀಗ ಲಿಫ್ಟ್‌ನಲ್ಲಿ ಬಾಲಕಿನಿಗೆ ಕಚ್ಚಿದ ಬಳಿಕ ವಿಷಯ ಬೆಳಕಿಗೆ ಬಂದಿದೆ.

English summary
A child was bitten by a dog while traveling in a lift in Ghaziabad district of Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X