ಗಾಂಧಿ ಕುಟುಂಬದಿಂದ ಜನರಿಗೆ ಮೋಸ: ಸ್ಮೃತಿ ಇರಾನಿ

ಲಕ್ನೋ, ಮೇ 31; "ಗಾಂಧಿ ಕುಟುಂಬವು ದಶಕಗಳ ಕಾಲ ಅಮೇಥಿಯನ್ನು ರಾಜಕೀಯಕ್ಕಾಗಿ ಬಳಸಿಕೊಂಡಿದೆ. ತನ್ನ ಬೊಕ್ಕಸವನ್ನು ತುಂಬಿಸಿಕೊಂಡಿದೆ. ಆದರೆ ಅಮೇಥಿಯ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ,'' ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿರುವ ಸ್ಮೃತಿ ಇರಾನಿ, "ಗಾಂಧಿ ಕುಟುಂಬವು ದಶಕಗಳಿಂದ ಅಮೇಥಿಯಿಂದ ರಾಜಕೀಯ ಮಾಡಿತು. ಆದರೆ ಕ್ಷೇತ್ರದ ಜನರನ್ನು ಬಡವರಾಗೇ ಉಳಿಯುವಂತೆ ಮಾಡಿತು. ಹಾಗೂ ಕುಟುಂಬದ ಮುಂದೆ ಕೈಕಟ್ಟಿ ನಿಲ್ಲುವಂತೆ ಮಾಡಿತು,'' ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 8 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಅಮೇಥಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, "ಗಾಂಧಿ ಕುಟುಂಬವು ತನ್ನ ಸ್ವಾರ್ಥಕ್ಕೆ ಇಲ್ಲಿನ ಜನರನ್ನು ಬಳಿಸಿಕೊಂಡಿತು. ಅವರು ಜನರ ಹೊಟ್ಟೆ ತುಂಬಿಸುವ ಪ್ರಯತ್ನ ಮಾಡದೆ, ತಮ್ಮ ಬೊಕ್ಕಸವನ್ನು ತುಂಬಿಸಿಕೊಂಡರು,'' ಎಂದು ಟೀಕಿಸಿದರು.

2019ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿಯನ್ನು ಸ್ಮೃತಿ ಇರಾನಿ ಸೋಲಿಸಿದ್ದರು. ರಾಹುಲ್ ಗಾಂಧಿ ಕೇರಳದ ವಯನಾಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.

ಮೋಜು ಮಸ್ತಿಯಲ್ಲಿ ರಾಹುಲ್ ಗಾಂಧಿ

ಮೋಜು ಮಸ್ತಿಯಲ್ಲಿ ರಾಹುಲ್ ಗಾಂಧಿ

"2019ಕ್ಕೂ ಮುನ್ನ ಅಮೇಥಿಗೆ ರಾಹುಲ್ ಗಾಂಧಿ ಭೇಟಿ ನೀಡಲೇ ಇಲ್ಲ. ಕೇವಲ ವಿದೇಶ ಪ್ರವಾಸ ಮಾಡುತ್ತಾ ಮೋಜು ಮಸ್ತಿಯಲ್ಲಿ ಕಳೆದರು. ಒಮ್ಮೆಯೂ ಅಮೇಥಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಮಾತನಾಡಲಿಲ್ಲ. ನಾನು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಂಸತ್ ನಲ್ಲಿ ಪ್ರಸ್ತಾಪಿಸಿದಾಗ, ಇದನ್ನು ಹತ್ತಿಕ್ಕಲು ಹಲವು ಪ್ರಯತ್ನಗಳು ನಡೆದವು,'' ಎಂದು ಸ್ಮೃತಿ ಇರಾನಿ ಆರೋಪಿಸಿದರು.

ಗಾಂಧಿ ಕುಟುಂಬದಿಂದ ಜನರಿಗೆ ಮೋಸ

ಗಾಂಧಿ ಕುಟುಂಬದಿಂದ ಜನರಿಗೆ ಮೋಸ

"ಅಮೇಥಿ ಜನರನ್ನು ಸದಾ ಗಾಂಧಿ ಕುಟುಂಬ ಮೋಸ ಮಾಡುತ್ತಾ ಬಂದಿತು. ಈ ಬಗ್ಗೆ ತಮ್ಮ ಕುಟುಂಬದ ವಿರುದ್ಧ ಸ್ಥಳೀಯರಿಗೆ ಅಸಮಾಧಾನ ಎದ್ದಿದೆ ಎಂದು ಅರಿವಾಗುತ್ತಿದ್ದಂತೆ ಅಮೇಥಿ ಬಿಟ್ಟು ರಾಹುಲ್ ಗಾಂಧಿ ಕೇರಳಗೆ ತೆರಳಿದರು. 2019ರಲ್ಲಿ ಕೇರಳದಿಂದ ಸ್ಪರ್ಧಿಸಿದರು,'' ಎಂದು ಸ್ಮೃತಿ ಇರಾನಿ ಹೇಳಿದರು.

ಮೆಡಿಕಲ್ ಕಾಲೇಜಿನ ಆಸೆ ಹುಸಿ

ಮೆಡಿಕಲ್ ಕಾಲೇಜಿನ ಆಸೆ ಹುಸಿ

"ಮುಶಿಗಂಜ್ ನಲ್ಲಿ ಮೆಡಿಕಲ್ ಕಾಲೇಜ್ ತೆರೆಯಲಾಗುವುದು ಎಂದು ಬಡ ರೈತರನ್ನು ನಂಬಿಸಿ, ಅವರಿಂದ ಗಾಂಧಿ ಕುಟುಂಬ ಜಮೀನು ಪಡೆಯಿತು. ಅಮೇಥಿ ಜನರಿಗೆ ಮೆಡಿಕಲ್ ಕಾಲೇಜನ ಆಸೆ ತೋರಿಸಿ, ಅಲ್ಲಿ ಗೆಸ್ಟ್ ಹೌಸ್ ನಿರ್ಮಿಸಿತು. ನಂತರ ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಮತ್ತು ಪಾಸ್‌ಪೋರ್ಟ್ ಕೇಂದ್ರವನ್ನು ನಿರ್ಮಿಸಿದರು,'' ಎಂದು ಸಚಿವರು ಹೇಳಿದರು.

ಕಾಂಗ್ರೆಸ್ ಬಗ್ಗೆ ಜನರಿಗೆ ನಂಬಿಕೆ ಇಲ್ಲ

ಕಾಂಗ್ರೆಸ್ ಬಗ್ಗೆ ಜನರಿಗೆ ನಂಬಿಕೆ ಇಲ್ಲ

"ಕಾಂಗ್ರೆಸ್‌ನ ಸಿದ್ಧಾಂತ ಮತ್ತು ಕಾರ್ಯಚಟುವಟಿಕೆಗಳ ಕಾರಣ ಆ ಪಕ್ಷದ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹಲವು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದೆ,'' ಎಂದುಸ್ಮೃತಿ ಇರಾನಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+