ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜ ಸೇವಕ ಎಂಬ ಮುಖವಾಡ ಹೊತ್ತ ಕ್ರಿಮಿನಲ್ ಅಭ್ಯರ್ಥಿಗಳು

|
Google Oneindia Kannada News

ನವದೆಹಲಿ, ಜನವರಿ 21: ಚುನಾವಣೆ ಎದುರಿಸುತ್ತಿರುವ ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಗೊಂದಲದಲ್ಲಿವೆ. ಆಯೋಗದ ಕಠಿಣ ನಿಯಮಗಳನ್ನು ಮುಂದಿಟ್ಟುಕೊಂಡು ಕ್ರಿಮಿನಲ್ ಅಭ್ಯರ್ಥಿಗಳನ್ನು ವಾಮಮಾರ್ಗಗಳ ಮೂಲಕ ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ತಂತ್ರಗಾರಿಕೆ ಕಂಡು ಬಂದಿದೆ. ಕ್ರಿಮಿನಲ್ ಪೂರ್ವಾಪರ ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಲವಾರು ಪ್ರಮುಖ ತಂತ್ರ ಹೂಡುತ್ತಿದ್ದು, ಇದರಲ್ಲಿ ಜನಪ್ರಿಯತೆ, ಸಾಮಾಜಿಕ ಚಟುವಟಿಕೆಗಳು, ಸ್ವೀಕಾರಾರ್ಹತೆ ಮತ್ತು ಸಾಂಕ್ರಾಮಿಕ ಸಮಯದಲ್ಲಿ ದೀನದಲಿತ ಮತ್ತು ದುರ್ಬಲ ವರ್ಗಗಳಿಗೆ ಒದಗಿಸಿದ ಸೇವೆಗಳು ಸೇರಿಸಲಾಗುತ್ತಿದೆ. ಇವು ಆಯ್ಕೆಯ ಮಾನದಂಡ ಎನ್ನಲಾಗುತ್ತಿದ್ದು, ಸಮಾಜ ಸೇವಕ ಎಂಬ ಮುಖವಾಡ ಹೊತ್ತ ಕ್ರಿಮಿನಲ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬ ವರದಿ ಬಂದಿದೆ.

ಚುನಾವಣಾ ಆಯೋಗ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ರಾಜಕೀಯ ಪಕ್ಷಗಳು ಕ್ರಿಮಿನಲ್ ಹಿನ್ನಲೆಯುಳ್ಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾರಣಗಳನ್ನು ಸ್ಪಷ್ಟವಾಗಿ ತಿಳಿಸಬೇಕಾಗಿದೆ. ನಿಶ್ಚಿತ ಸ್ವರೂಪದಲ್ಲಿ, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ನಿರ್ದಿಷ್ಟ ಅಭ್ಯರ್ಥಿಗೆ ಇನ್ನೊಬ್ಬರಿಗಿಂತ ಏಕೆ ಆದ್ಯತೆ ನೀಡಲಾಗಿದೆ ಎಂಬ ಮಾಹಿತಿಯನ್ನು ಪಕ್ಷಗಳು ಒದಗಿಸಬೇಕಾಗುತ್ತದೆ.

ಉತ್ತರ ಪ್ರದೇಶ ಚುನಾವಣೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಮನೇಕಾ-ವರುಣ್ ಔಟ್! ಉತ್ತರ ಪ್ರದೇಶ ಚುನಾವಣೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಮನೇಕಾ-ವರುಣ್ ಔಟ್!

ಮಾರ್ಗಸೂಚಿಗಳನ್ನು ಅನುಸರಿಸಿ, ಸಮಾಜವಾದಿ ಪಕ್ಷ(ಎಸ್‌ಪಿ) ಮತ್ತು ಭಾರತೀಯ ಜನತಾ ಪಕ್ಷ(ಬಿಜೆಪಿ) ಕ್ರಿಮಿನಲ್ ಪೂರ್ವಾಪರ ಹೊಂದಿರುವ ಅಭ್ಯರ್ಥಿಗಳ ವಿವರಗಳನ್ನು ಇಸಿಗೆ ಒದಗಿಸಿವೆ ಮತ್ತು ಅವುಗಳನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಇರಿಸಿದೆ.

Elections 2022: Parties Cite Social Service for Fielding ‘Tarnished’ Candidates

ಆಗ್ರಾದ (ಉತ್ತರ) ಎಸ್‌ಪಿ ಅಭ್ಯರ್ಥಿ ಜ್ಞಾನೇಂದ್ರ ಅವರು 'ಸಾಂಕ್ರಾಮಿಕ ಸಮಯದಲ್ಲಿ ಬಡವರಿಗಾಗಿ ಸಾಕಷ್ಟು ಮಾನವೀಯ ಕೆಲಸ ಮಾಡಿದ್ದಾರೆ' ಎಂದು ಹೇಳಲಾಗುತ್ತಿದೆ.

ಮೀರತ್ ದಕ್ಷಿಣದ ತನ್ನ ಅಭ್ಯರ್ಥಿ ಸೋಮೇಂದ್ರ ತೋಮರ್ ಅವರು 'ವಿದ್ಯಾರ್ಹತೆಯುಳ್ಳ ವ್ಯಕ್ತಿ ಮತ್ತು ಡಾಕ್ಟರೇಟ್ ಪದವಿ ಹೊಂದಿದ್ದಾರೆ ಎಂದು ಬಿಜೆಪಿ ಹೇಳುತ್ತದೆ. ರಾಜಕೀಯ ವೈಷಮ್ಯದಿಂದ ಅವರು ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾರೆ.

ಆಗ್ರಾ (ಉತ್ತರ) ಕ್ಷೇತ್ರದ ಪಕ್ಷದ ಅಭ್ಯರ್ಥಿ ಜ್ಞಾನೇಂದ್ರ ಅವರ ವಿಷಯದಲ್ಲಿ, ಅವರು ಸಾಕಷ್ಟು ಮಾನವೀಯ ಕೆಲಸ ಮಾಡಿದ್ದಾರೆ ಎಂದು ಎಸ್‌ಪಿ ಹೇಳಿದೆ. "ಅವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಸೇವೆಗಳನ್ನು ಸಲ್ಲಿಸಿದ್ದಾರೆ, ಬಡವರು ಮತ್ತು ಹಿಂದುಳಿದ ಜನರಿಗೆ ಒದಗಿಸಿದ್ದಾರೆ" ಎಂದು ಪಕ್ಷವು ನಮೂನೆಯಲ್ಲಿ ಉಲ್ಲೇಖಿಸಿದೆ. "ಅಪರಾಧದ ಸ್ವರೂಪ" ಎಂಬ ಅಂಕಣದ ಅಡಿಯಲ್ಲಿ ಪಕ್ಷವು "ಅಪರಾಧ" ಎಂದು ಉಲ್ಲೇಖಿಸಿದೆ.

ಅದೇ ರೀತಿ, ಮೀರತ್ ದಕ್ಷಿಣದ ಅಭ್ಯರ್ಥಿ ಮೊಹಮ್ಮದ್ ಆದಿಲ್ ಪ್ರಕರಣದಲ್ಲಿ, ಎಸ್ಪಿ ಸಮರ್ಥನೆ ನೀಡಿದ್ದು, "ಅವರು ಯಾವಾಗಲೂ ನಿರ್ಗತಿಕರಿಗೆ ಕಂಬಳಿಗಳನ್ನು ಹಂಚುವಂತೆ ಸಮಾಜದ ಒಳಿತಿಗಾಗಿ ಕೆಲಸ ಮಾಡಿದ್ದಾರೆ. ಅವರದು ಜನಪ್ರಿಯ ಚಿತ್ರಣ. ಸಾಂಕ್ರಾಮಿಕ ಸಮಯದಲ್ಲಿ ಅವರು ತಮ್ಮ ಪ್ರದೇಶದಲ್ಲಿ ಆಮ್ಲಜನಕ, ಹಾಸಿಗೆಗಳು ಮತ್ತು ಔಷಧಿಗಳನ್ನು ವ್ಯವಸ್ಥೆ ಮಾಡುವ ಮೂಲಕ ಬಡವರಿಗೆ ಸಹಾಯ ಮಾಡಿದರು. ಆದಿಲ್ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಉಲ್ಲೇಖಿಸಿದೆ.

Recommended Video

ಪಂಜಾಬ್ ಕಾಂಗ್ರೆಸ್ ನಲ್ಲಿ CM ಅಭ್ಯರ್ಥಿ ಗೊಂದಲ:ಸಿಧು ಚನ್ನಿ ನಡುವೆ ರೇಸ್ | Oneindia Kannada

ಎಸ್ಪಿ ಒದಗಿಸಿದ 20 ಕ್ಕೂ ಹೆಚ್ಚು ಅಭ್ಯರ್ಥಿಗಳ ವಿವರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪಕ್ಷವು ಸಾಮಾನ್ಯವಾಗಿ ಸಾಂಕ್ರಾಮಿಕ ಸಮಯದಲ್ಲಿ ಅವರ ಸಾಮಾಜಿಕ ಸೇವೆಯ ಬಗ್ಗೆ ಮಾತನಾಡಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಹಲವು ಕಾರಣಗಳನ್ನು ನೀಡಿದೆ.

English summary
Elections 2022: Political parties in poll-bound Uttar Pradesh have made a range of overriding reasons for fielding candidates having criminal antecedents, which include popularity, social activities, acceptability and the services provided to the downtrodden and weaker sections during the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X