ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಶಂಕಿತ ಆಸ್ಪತ್ರೆಯಿಂದ ಜೂಟ್, ಮನೆಯಲ್ಲೇ ಅರೆಸ್ಟ್!

|
Google Oneindia Kannada News

ಲಕ್ನೋ, ಮಾರ್ಚ್.17: ಕೊರೊನಾ ವೈರಸ್ ಎಂದರೆ ಜನರು ಬೆಚ್ಚಿ ಬೀಳುತ್ತಿದ್ದಾರೆ. ಉತ್ತರ ಪ್ರದೇಶದ ಮೀರ್ಜಾಪುರ್ ನಲ್ಲಿ ಕೊರೊನಾ ವೈರಸ್ ಸೋಂಕು ಶಂಕಿತನು ಐಸೋಲೇಟೆಡ್ ವಾರ್ಡ್ ನಿಂದಲೇ ಪರಾರಿ ಆಗಿರುವ ಘಟನೆ ನಡೆದಿದೆ. ಹೀಗೆ ಎಸ್ಕೇಪ್ ಆಗಿದ್ದ ವ್ಯಕ್ತಿಯನ್ನು ಪೊಲೀಸರು ಮತ್ತೆ ಆತನ ಮನೆಯಲ್ಲಿ ಪತ್ತೆ ಮಾಡಿದ್ದಾನೆ.

ನೇಪಾಳದಿಂದ ಆಗಮಿಸಿದ ವ್ಯಕ್ತಿಯಲ್ಲಿ ತೀವ್ರಜ್ವರ ಕಾಣಿಸಿಕೊಂಡ ಹಿನ್ನೆಲೆ ಜಿಲ್ಲಾಸ್ಪತ್ರೆಯ ಐಸೋಲೇಟೆಡ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಹಿನ್ನೆಲೆ ಶಂಕಿತನ ರಕ್ತ ಮತ್ತು ಗಂಟಲು ದ್ರವ್ಯದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ.

ಪೇಶೆಂಟ್ ನಂ.31; ದೇಶಾದ್ಯಂತ ಕೊರೊನಾ ವೈರಸ್ ಹರಡಲು ಈತನೇ ಕಾರಣ!ಪೇಶೆಂಟ್ ನಂ.31; ದೇಶಾದ್ಯಂತ ಕೊರೊನಾ ವೈರಸ್ ಹರಡಲು ಈತನೇ ಕಾರಣ!

ಇನ್ನು, ವಿದೇಶಗಳಿಂದ ಆಗಮಿಸಿದ ಮತ್ತಿಬ್ಬರಲ್ಲಿ ಕೊರೊನಾ ವೈರಸ್ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದ್ದು ಶಂಕಿತರನ್ನು ಐಸೋಲೇಟೆಡ್ ವಾರ್ಡ್ ನಲ್ಲಿ ದಾಖಲು ಮಾಡಲಾಗಿದೆ. ಇದರಲ್ಲಿ ಒಬ್ಬ ದುಬೈ ಮತ್ತು ಜಪಾನ್ ನಿಂದ ಆಗಮಿಸಿದ್ದ ಎಂದು ತಿಳಿದು ಬಂದಿದೆ.

Coronavirus Suspected Man Escaped From Isolated Ward In Uttar Pradesh

ಸೋಮವಾರ ರಾತ್ರಿ 8 ಗಂಟೆಗೆ ಆಸ್ಪತ್ರೆಯಿಂದ ಜೂಟ್:

ಕಳೆದ ಮಾರ್ಚ್.16ರ ಸೋಮವಾರ ರಾತ್ರಿ.8 ಗಂಟೆ ವೇಳೆಗೆ ಆಸ್ಪತ್ರೆಯ ಐಸೋಲೇಟೆಡ್ ವಾರ್ಡ್ ನಿಂದ ಶಂಕಿತ ಕೊರೊನಾ ವೈರಸ್ ಸೋಂಕಿತನು ಪರಾರಿಯಾಗಿದ್ದನು. ಈ ವಿಚಾರ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಜಿಲ್ಲಾಡಳಿತದ ಅಧಿಕಾರಿಗಳು ಆತನ ಮನೆಯಲ್ಲಿಯೇ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಇನ್ನು, ಮಂಗಳವಾರದ ಅಂಕಿ-ಅಂಶಗಳ ಪ್ರಕಾರ 598 ಜನರ ರಕ್ತ ಮತ್ತು ಗಂಟಲು ದ್ರವ್ಯದ ಮಾದರಿ ಪರೀಕ್ಷೆ ಬಳಿಕ 13 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಉಳಿದಂತೆ 107 ಜನರ ವೈದ್ಯಕೀಯ ತಪಾಸಣಾ ವರದಿ ಬರಬೇಕಿದೆ.

English summary
Coronavirus Suspected Man Escaped From Isolated Ward In Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X