ಈಗ ಚಿಕನ್‌ಗಿಂತ ಹಲಸಿನ ಹಣ್ಣೇ ಕಾಸ್ಟ್ಲಿ, ಕಾರಣ ಏನು?
ಲಕ್ನೋ, ಮಾರ್ಚ್ 11: ವೆಜ್‌ಗಿಂತ ನಾನ್ ವೆಜ್ ಕಾಸ್ಟ್ಲಿ ಇತ್ತು. ಆದರೆ, ಈಗ ಅದು ಉಲ್ಟಾ ಆಗಿದೆ. ಹಲಸಿನ ಹಣ್ಣಿನ ಬೆಲೆಗಿಂತ ಚಿಕನ್ ಬೆಲೆಯೇ ಕಡಿಮೆಯಾಗಿದೆ.
ಕೊರೊನಾ ವೈರಸ್ ಭೀತಿಯಿಂದ ಚಿಕನ್ ತಿನ್ನುವವರ ಸಂಖ್ಯೆ ಕಡಿಮೆಯಾಗಿದೆ. ಚಿಕನ್ ತಿನ್ನುವುದರಿಂದ ಕೊರೊನಾ ವೈರಸ್ ಹರಡುತ್ತದೆ ಎನ್ನುವ ಸುದ್ದಿ ಹಬ್ಬಿದೆ. ಹೀಗಾಗಿ ಚಿಕನ್ ಪ್ರಿಯರು ಅದರಿಂದ ಆದಷ್ಟು ಅಂತರ ಕಂಡುಕೊಂಡಿದ್ದಾರೆ. ಬೇಡಿಕೆ ಕಡಿಮೆ ಇರುವ ಕಾರಣ ಸಾಮಾನ್ಯವಾಗಿ ಬೆಲೆಯೂ ಇಳಿಕೆ ಕಂಡಿದೆ.
ಚಿಕನ್ ಬೆಲೆ ಇಳಿಕೆ ಮಾರಾಟಗಾರರಿಗೆ ನಷ್ಟ ಉಂಟು ಮಾಡಿದೆ. ಎಷ್ಟೋ ಜನರು ಕೋಳಿಗಳ ಮಾರಣಹೋಮ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ಚಿಕನ್ ಬೆಲೆಗಿಂತ ಒಂದು ಕೆಜಿ ಹಲಸಿನ ಹಣ್ಣಿನ ಬೆಲೆಯೇ ಜಾಸ್ತಿ ಇದೆ. ಚಿಕನ್ ಬದಲು ಜನರು ಹಲಸಿನ ಹಣ್ಣಿನ ಮೊರೆ ಹೋಗುತ್ತಿದ್ದಾರೆ.

ಹಲಸಿನ ಹಣ್ಣಿಗೆ 120, ಚಿಕನ್‌ಗೆ 80 ರೂಪಾಯಿ
ಲಕ್ನೋದಲ್ಲಿ ಸದ್ಯ ಒಂದು ಕೆಜಿ ಚಿಕನ್ ಬೆಲೆ 80 ರೂಪಾಯಿ ಇದೆ. ಆದರೆ, ಹಲಸಿನ ಹಣ್ಣಿನ ಬೆಲೆ 120 ಆಗಿದೆ. ಚಿಕನ್‌ಗಿಂತ ಹಲಸಿನ ಹಣ್ಣು ದುಬಾರಿಯಾಗಿದೆ. ಸಾಮಾನ್ಯವಾಗಿ ಒಂದು ಕೆಜಿ ಹಲಸಿನ ಹಣ್ಣಿನ ಬೆಲೆ 50 ರೂಪಾಯಿ ಇತ್ತು. ಆದರೆ, ಇದಕ್ಕಿದ್ದ ಹಾಗೆ 120% ರಷ್ಟು ಬೆಲೆ ಏರಿಕೆ ಕಂಡಿದೆ.

ಚಿಕನ್ ಬೆಲೆ ಕಡಿಮೆ ಆಯ್ತು
ಸಾಮಾನ್ಯ ದಿನಗಳನ್ನು ಒಂದು ಕೆಜಿ ಚಿಕನ್ ಬೆಲೆ 160 ರಿಂದ 180 ರೂಪಾಯಿ ಇರುತ್ತದೆ. ಆದರೆ, ಇದೀಗ ಚಿಕನ್ ಬೆಲೆ ಅರ್ಥದಷ್ಟು ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ಚಿಕನ್ 80 ರೂಪಾಯಿಗೆ ಸಿಗುತ್ತಿದೆ. ಚಿಕನ್ ತಿಂದರೆ, ಕೊರೊನಾ ವೈರಸ್ ಬರುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹಬ್ಬಿದ್ದು, ಚಿಕನ್ ಬೇಡಿಕೆ ಕಡಿಮೆಯಾಗಿದೆ.

ಹಲಸಿನ ಹಣ್ಣಿನ ಬಿರಿಯಾನಿ
ಚಿಕನ್ ತಿನ್ನುವುದರಿಂದ ಕೊರೊನಾ ಬರುತ್ತದೆ ಎನ್ನುವ ಭೀತಿಯಲ್ಲಿರುವ ಜನರು ಹಲಸಿನ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಹಲಸಿನ ಹಣ್ಣಿನ ಬಿರಿಯಾನಿ ರುಚಿ ನೋಡುತ್ತಿದ್ದಾರೆ. ಲಕ್ನೋ ಭಾಗದಲ್ಲಿ ಹಲಸಿನ ಹಣ್ಣಿನ ಬಿರಿಯಾನಿ ತುಂಬ ಫೇಮಸ್ ಆಗಿದೆ. ಬಿರಿಯಾನಿ ಪ್ರಿಯರು ಸದ್ಯಕ್ಕೆ ಹಲಸಿನ ಹಣ್ಣಿನ ಬಿರಿಯಾನಿ ತಿಂದು ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ.

ತಪ್ಪು ಕಲ್ಪನೆ ಬಿಡಿ ಎಂದು ಮೇಳ
ಚಿಕನ್‌ನಿಂದ ಕೊರೊನಾ ಬರಬಹುದು ಎನ್ನುವ ಸುದ್ದಿ ದೇಶಾದ್ಯಂತ ಹಬ್ಬಿದೆ. ಇದು ಚಿಕನ್ ಮಾರಾಟಗಾರರಿಗೆ ದೊಡ್ಡ ತಲೆನೋವಾಗಿದೆ. ಜನರ ಈ ಕಲ್ಪನೆ ಹೊಗಲಾಡಿಸಲು ಗೋರಖ್‌ಪುರದಲ್ಲಿ ಒಂದು ಮೇಳವನ್ನು ಏರ್ಪಡಿಸಲಾಗಿತ್ತು. ಇಲ್ಲಿ 30 ರೂಪಾಯಿಗೆ ಚಿಕನ್ ಮಾರಾಟ ಮಾಡಿದರು. ಚಿಕನ್‌ನಿಂದ ಕೊರೊನಾ ಬರುವುದಿಲ್ಲ ಎಂದು ತಿಳಿಸಿದರು.

ಕೋಳಿಗಳ ಮಾರಣಹೋಮ
ಚಿಕನ್ ಬೆಲೆ ಬಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಹೀಗಾಗಿ, ಚಿಕನ್ ಮಾರಾಟಗಾರರಿಗೆ, ಕೋಳಿ ಸಾಗಣೆ ಮಾಡುವವರಿಗೆ ತುಂಬ ನಷ್ಟವಾಗುತ್ತದೆ. ಇದರಿಂದ ಅನೇಕ ಕಡೆ ಕೋಳಿಗಳ ಮಾರಣಹೋಮ ಮಾಡಲಾಗಿದೆ. ಬೆಳಗಾವಿ, ಶಿವಮೊಗ್ಗ, ಕೋಲಾರ ಜಿಲ್ಲೆಗಳಲ್ಲಿ ನೂರಾರೂ ಕೋಳಿಗಳನ್ನು ಜೀವಂತ ಸಮಾಧಿ ಮಾಡಲಾಗಿದೆ.











Click it and Unblock the Notifications