ರೌಡಿ ವಿಕಾಸ್ ದುಬೆ ಆಪ್ತ ಅಮರ್ ದುಬೆ ಎನ್‌ಕೌಂಟರ್‌ನಲ್ಲಿ ಹತ್ಯೆ: ಮುಂದಿನ ಸರದಿ?

ಕಾನ್ಪುರ, ಜುಲೈ 8: ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಮಂದಿ ಪೊಲೀಸರನ್ನು ಹತ್ಯೆಗೈದು ಪರಾರಿಯಾಗಿದ್ದ ರೌಡಿ ಶೀಟರ್ ವಿಕಾಸ್ ದುಬೆ ಆಪ್ತ ಅಮರ್‌ ದುಬೆಯನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.

Recommended Video

      INDO-CHINA : We stand with India : Mark Meadows | USA | Oneindia Kannada

      ಉತ್ತರಪ್ರದೇಶದ ಹಮಿರ್ಪುರ್ ನಲ್ಲಿ ಎಸ್‌ಟಿಎಫ್ ಪಡೆ ಎನ್‌ಕೌಂಟರ್ ನಡೆಸಿದ್ದು, ಅಮರ್ ದುಬೆಯನ್ನು ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ. ಪೊಲೀಸರು ಇವನ್ನು ತೆರವುಗೊಳಿಸಿ ದುಬೆ ಅವಿತಿದ್ದ ಮನೆಯತ್ತ ಆಗಮಿಸಲು ಅಣಿಯಾಗುತ್ತಿದ್ದಂತೆಯೇ ಆತನ ಮನೆಯ ಮೇಲಿಂದ ಕ್ರಿಮಿನಲ್‌ಗಳು ಗುಂಡಿನ ಮಳೆಗೆರೆದಿದ್ದಾರೆ. ಆಗ ಗುಂಡೇಟು ತಿಂದ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ 4 ಪೇದೆಗಳು ಅಸುನೀಗಿದ್ದರು.

      ಉತ್ತರಪ್ರದೇಶ ರಾಜ್ಯದಲ್ಲಿ 60 ಅಪರಾಧ ಕೇಸುಗಳಿದ್ದ ವಿಕಾಸ್ ದುಬೆ ಎಂಬ ಪಾತಕಿಯನ್ನು ಬಂಧಿಸಲು ಪೊಲೀಸರು ದಿಕ್ರು ಎಂಬ ಗ್ರಾಮಕ್ಕೆ ಕಳೆದ ಶುಕ್ರವಾರ ನಸುಕಿನ ಜಾವ ತೆರಳಿದಾಗ ಮೊದಲ ಎನ್'ಕೌಂಟರ್ ನಡೆದಿತ್ತು. ಪೊಲೀಸರು ಬರುವ ಸುಳಿವು ಅರಿತಿದ್ದ ವಿಕಾಸ್ ದುಬೆ ಸಹಚರರು, ರಸ್ತೆಗೆ ಅಡ್ಡಲಾಗಿ ಕಲ್ಲು-ಕಟ್ಟಿಗೆಗಳನ್ನು ಇಟ್ಟಿದ್ದರು.

      ಪೊಲೀಸರ ಬಳಿಯಿದ್ದ ಶಸ್ತ್ರಾಸ್ತ್ರ ಹೊತ್ತೊಯ್ದಿದ್ದ ರೌಡಿಗಳು

      ಪೊಲೀಸರ ಬಳಿಯಿದ್ದ ಶಸ್ತ್ರಾಸ್ತ್ರ ಹೊತ್ತೊಯ್ದಿದ್ದ ರೌಡಿಗಳು

      ಕ್ರಿಮಿನಲ್ ಗಳು ಪೊಲೀಸರ ಬಳಿಯಿದ್ದ ಎಕೆ-47 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿದ್ದರು. ಪೊಲೀಸರು ಈ ಹಿಂದೆ ಹೊಂದಿದ್ದ ಶಸ್ತ್ರಾಸ್ತ್ರಗಳು ದುಬೆಗೆ ದೊರೆತಿದ್ದು, ಅವುಗಳನ್ನೇ ಪೊಲೀಸರ ಮೇಲೆ ದಾಳಿ ನಾಡಲು ದುಬೆ ಸಹಚರರು ಬಳಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರೇಮ್ ಪ್ರಕಾಶ್ ಪಾಂಡೆ ಹಾಗೂ ಅತುಲ್ ದುಬೆ ಎಂಬ ಇಬ್ಬರು ಕ್ರಿಮಿನಲ್ ಗಳನ್ನು ಹೊಡೆದುರುಳಿಸಿದ್ದರು.

      8 ಮಂದಿ ಪೊಲೀಸರ ಹತ್ಯೆ ಪ್ರಕರಣ: ವಿಕಾಸ್ ದುಬೆ ಸಂಬಂಧಿ ಬಂಧನ

      8 ಮಂದಿ ಪೊಲೀಸರ ಹತ್ಯೆ ಪ್ರಕರಣ: ವಿಕಾಸ್ ದುಬೆ ಸಂಬಂಧಿ ಬಂಧನ

      ಎಂಟು ಮಂದಿ ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ವಿಕಾಸ್ ದುಬೆ ಸಂಬಂಧಿಯನ್ನು ಬಂಧಿಸಲಾಗಿದೆ.

      ರೌಡಿ ಶೀಟರ್ ವಿಕಾಸ್ ದುಬೆ ಅಡಗಿ ಕುಳಿತಿದ್ದ ಜಾಗದ ಜಾಡು ಹಿಡಿದು 50 ಮಂದಿರ ಇರುವ ಪೊಲೀಸ್ ತಂಡ ತೆರಳಿತ್ತು. ಅದರಲ್ಲಿ ವಿಕಾಸ್ ದುಬೆ ಹಾಗೂ ಆತನ ಸಹಚರರು ಸೇರಿ ಎಂಟು ಮಂದಿ ಪೊಲೀಸರ ಮೇಲೆ ಗುಂಡು ಹಾರಿಸಿ ಹತ್ಯೆ ನಡೆಸಿದ್ದರು.

      ದುಬೆ ಸಂಬಂಧಿ ಶಮಾ ಹಾಗೂ ಸುರೇಶ್ ವರ್ಮಾ , ಕೆಲಸದಾಕೆ ರೇಖಾರನ್ನು ಬಂಧಿಸಲಾಗಿದೆ. ರೇಖಾ ಪತಿ ದಯಾ ಶಂಕರ್ ಅಗ್ನಿಹೋತ್ರಿ ದುಬೆ ಗ್ಯಾಂಗ್‌ನಲ್ಲಿ ಪ್ರಮುಖನಾಗಿದ್ದ.

      ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ರೌಡಿ ಶೀಟರ್ ವಿಕಾಸ್ ದುಬೆ ಪೊಲೀಸರ ಆಯುಧಗಳನ್ನೇ ಬಳಸಿ ಹತ್ಯೆ ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

      ರೌಡಿ ವಿಕಾಸ್ ದುಬೆ ಪೊಲೀಸರ ಆಯುಧಗಳನ್ನೇ ಬಳಸಿ ಹತ್ಯೆ ಮಾಡಿದ್ದ

      ರೌಡಿ ವಿಕಾಸ್ ದುಬೆ ಪೊಲೀಸರ ಆಯುಧಗಳನ್ನೇ ಬಳಸಿ ಹತ್ಯೆ ಮಾಡಿದ್ದ

      ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ರೌಡಿ ಶೀಟರ್ ವಿಕಾಸ್ ದುಬೆ ಪೊಲೀಸರ ಆಯುಧಗಳನ್ನೇ ಬಳಸಿ ಹತ್ಯೆ ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

      54 ವರ್ಷದ ಪೊಲೀಸ್ ಅಧಿಕಾರಿಯೊಬ್ಬರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಐದು ಬಾರಿ ಗುಂಡು ಹಾರಿಸಲಾಗಿದೆ. ಹಣೆ, ಎದೆ, ಹೊಟ್ಟೆ ಹಾಗೂ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ. ಹಾಗೆಯೇ ದೇಹದ ಮೇಲೆ ಅನೇಕ ಗಾಯಗಳಾಗಿದ್ದು, ಹತ್ಯೆ ಮಾಡಿದ ಬಳಿಕ ಹಿಂಸೆ ನೀಡಿದ್ದಾರೋ ಅಥವಾ ಹಿಂಸೆ ನೀಡಿ ಬಳಿಕ ಹತ್ಯೆ ಮಾಡಿದ್ದಾರೋ ಎಂದು ತಿಳಿದುಬಂದಿಲ್ಲ.

      8 ಪೊಲೀಸರನ್ನು ಹತ್ಯೆಗೈದ ರೌಡಿ ಶೀಟರ್ ವಿಕಾಸ್ ದುಬೆ ಮನೆ ನೆಲಸಮ

      8 ಪೊಲೀಸರನ್ನು ಹತ್ಯೆಗೈದ ರೌಡಿ ಶೀಟರ್ ವಿಕಾಸ್ ದುಬೆ ಮನೆ ನೆಲಸಮ

      ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ರೌಡಿ ಶೀಟರ್ ವಿಕಾಸ್ ದುಬೆಯ ಮನೆಯನ್ನು ಕಾನ್ಪುರ ಜಿಲ್ಲಾಡಳಿತ ಶನಿವಾರ ನೆಲಸಮ ಮಾಡಿದೆ.

      ಬಂಧಿಸಲು ಹೋದ ಸಂದರ್ಭದಲ್ಲಿ 8 ಪೊಲೀಸರ ಮೇಲೆ ಗುಂಡು ಹಾರಿಸಿ ಹತ್ಯೆಗೈದು ತಪ್ಪಿಸಿಕೊಂಡಿದ್ದ ರೌಡಿ ಶೀಟರ್ ವಿಕಾಸ್ ದುಬೆಯ ಬಂಗಲೆಯನ್ನು ಕೆಡವಲಾಗಿದೆ.ಚೌಬೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕ್ರು ಪ್ರದೇಶದಲ್ಲಿ ರೌಡಿ ಶೀಟರ್ ವಿಕಾಸ್ ಹಾಗೂ ಆತನ ಸಹಚರರು ಅಡಗಿರುವ ಮಾಹಿತಿ ಪಡೆದು ಪೊಲೀಸರು ಬಂಧನಕ್ಕೆಂದು ತೆರಳಿದ್ದರು. ಓರ್ವ ಡಿವೈಎಸ್‌ಪಿ ಸೇರಿ 8 ಮಂದಿ ಪೊಲೀಸರಿಗೆ ಗುಂಡು ಹಾರಿಸಿದ್ದ.
      ರೌಡಿ ವಿಕಾಸ್ ದುಬೆ ವಿರುದ್ಧ ಬೆದರಿಕೆ, ಅಪಹರಣ, ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.2000ದಲ್ಲಿ ನಡೆದ ಥಾರಾಚಂದ್ ಕಾಲೇಜು ಪ್ರಿನ್ಸಿಪಾಲ್ ಮತ್ತು ಸಹಾಯಕ ಮ್ಯಾನೇಜರ್ ಹತ್ಯೆ ಪ್ರಕರಣದಲ್ಲಿಯೂ ಈತನ ಹೆಸರು ಕೇಳಿ ಬಂದಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+