• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮದುವೆಗೆ ಒಪ್ಪಿಲ್ಲ ಎಂದು ಬೆಂಕಿ ಹಚ್ಚಿ ವಿದ್ಯಾರ್ಥಿನಿ ಕೊಲೆ

|

ಲಕ್ನೋ, ಫೆಬ್ರವರಿ 4: ಮದುವೆಯಾಗಲು ಒಪ್ಪಲಿಲ್ಲ ಎಂದು ಬಿಎಸ್‌ಸಿ ವಿದ್ಯಾರ್ಥಿನಿಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ರಾಯ್ ಬರೇಲಿಯ ಹರ್‌ಚಾಂದ್‌ಪುರದಲ್ಲಿ ನಡೆದಿದೆ.

ಹರಚಾಂದ್‌ಪುರದಲ್ಲಿ ಗುರುತೇ ಸಿಗದ ರೀತಿಯಲ್ಲಿ ಸುಟ್ಟ ಶವವೊಂದು ಪತ್ತೆಯಾಗಿತ್ತು. ಬಳಿಕ ಇದು ವಿದ್ಯಾರ್ಥಿನಿಯ ಶವ ಎಂದು ತಿಳಿದುಬಂದಿದೆ.

ಪತ್ನಿ ರುಂಡದೊಂದಿಗೆ ಪೊಲೀಸ್‌ ಠಾಣೆಗೆ ಹೋಗಿ ರಾಷ್ಟ್ರಗೀತೆ ಹಾಡಿದ

ಕಾಲೇಜಿನಿಂದ ಆಕೆಯನ್ನು ಅಪಹರಿಸಿದ್ದರು. ಬಚ್ರಾವಾನ್‌ ಪ್ರದೇಶದ ರಸ್ತೆಯ ಮಧ್ಯದಲ್ಲಿ ಯುವತಿಯ ಶವವಿಟ್ಟು ಪೋಷಕರು ಪ್ರತಿಭಟನೆ ಮಾಡುತ್ತಿದ್ದಾರೆ.

ಶನಿವಾರ ಆಕೆ ಕಾಲೇಜಿಗೆ ಹೋಗಿದ್ದವಳು ವಾಪಸ್ ಮನೆಗೆ ಬಂದಿಲ್ಲ. ಪೋಷಕರು ಅತುಲ್ ಗುಪ್ತಾ ಎನ್ನುವವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಆತ ತನ್ನ ಮಗಳಿಗೆ ಪ್ರೊಪೋಸ್ ಮಾಡಿದ್ದ ಎಂದು ತಿಳಿಸಿದ್ದು ಆತನ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

ಕಳೆದ ಒಂದು ತಿಂಗಳ ಹಿಂದಷ್ಟೇ ಹೈದರಾಬಾದಿನಲ್ಲಿ ಪಶುವೈದ್ಯೆ ಮೇಲೆ ಕಾಮುಕರು ಅತ್ಯಾಚಾರ ನಡೆಸಿ ಆಕೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು.

English summary
21-year-old missing BSc student whose unrecognizably-burnt body was found on Saturday evening from Harchandpur in Rae Bareli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X