ಕನೌಜ್ ಜನ ವಿಶ್ವಾಸ ಯಾತ್ರೆ: ವೇದಿಕೆ ಖುರ್ಚಿಗಾಗಿ ಬಡಿದಾಟಿಕೊಂಡ ಬಿಜೆಪಿ ನಾಯಕರು
ಕನೌಜ್ ಡಿಸೆಂಬರ್ 30: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು ಪಕ್ಷಗಳ ಪ್ರಚಾರ ತೀವ್ರಗೊಂಡಿದೆ. ರಾಜಕೀಯ ಪಕ್ಷಗಳಿಂದ ರ್‍ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳು ನಡೆಯುತ್ತಿವೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಜನ ವಿಶ್ವಾಸ ಯಾತ್ರೆಯನ್ನು ಕನೌಜ್ ನಲ್ಲಿ ಪ್ರಾರಂಭಸಿದೆ. ಈ ವೇಳೆ ವೇದಿಕೆ ಹಂಚಿಕೊಳ್ಳುವ ವಿಚಾರದಲ್ಲಿ ಬಿಜೆಪಿ ಮುಖಂಡರು ಪರಸ್ಪರ ವಾಗ್ವಾದ ನಡೆಸಿದ್ದಾರೆ. ತಾವು ಜನನಾಯಕರು ಎನ್ನುವದನ್ನ ಮರೆತು ಕೆಟ್ಟ ಶಬ್ದಗಳಿಂದ ಪರಸ್ಪರ ನಿಂದಿಸತೊಡಗಿದ್ದಾರೆ. ಜಟಾಪಟಿ ಉಲ್ಬಣಿಸಿದ ತಕ್ಷಣ ಒದೆ, ಗುದ್ದಾಟ ಶುರುವಾಗಿ ಕೋಲುಗಳೂ ಹೊರ ಬಂದಿವೆ.
ಕನೌಜ್ ಜಿಲ್ಲೆಯ ಛಿಬ್ರಮೌ ವಿಧಾನಸಭಾ ಕ್ಷೇತ್ರದ ನೆಹರು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಬಿಜೆಪಿಯ ಜನ ವಿಶ್ವಾಸ ಯಾತ್ರೆಯಡಿ ಸಾರ್ವಜನಿಕ ಸಭೆಗೆ ವೇದಿಕೆ ಸಿದ್ಧಪಡಿಸಲಾಗಿತ್ತು. ಈ ವೇಳೆ ವೇದಿಕೆ ಹಂಚಿಕೊಳ್ಳುವ ವಿಚಾರದಲ್ಲಿ ಬಿಜೆಪಿ ಮುಖಂಡರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸುಮಾರು ಒಂದು ಗಂಟೆ ಗದ್ದಲದ ನಂತರ ಸಮಸ್ಯೆಯನ್ನು ಪರಿಹರಿಸಗಿದೆ. ಶಾಸಕಿ ಅರ್ಚನಾ ಪಾಂಡೆ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಬೆಂಬಲಿಗರು ಆರೋಪಿಸಿದ್ದಾರೆ. ಬಿಜೆಪಿಯ ಜನ ವಿಶ್ವಾಸ ಯಾತ್ರೆಯ ಸಂದರ್ಭದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬಿಜೆಪಿಯ ಜನ ವಿಶ್ವಾಸ ಯಾತ್ರೆ ಡಿಸೆಂಬರ್ 29 ರಂದು ಪ್ರಾರಂಭಗೊಂಡು ಛಿಬ್ರಮೌ ಮುಖ್ಯ ರಸ್ತೆಯ ಮೂಲಕ ಪೂರ್ವ ಬೈಪಾಸ್‌ನಲ್ಲಿರುವ ನೆಹರು ಮಹಾವಿದ್ಯಾಲಯವನ್ನು ತಲುಪಿತು. ಇಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರ ಬೆಂಬಲಿಗರು ಹಾಗೂ ಹಾಲಿ ಶಾಸಕರ ನಡುವೆ ವೇದಿಕೆ ಹಂಚಿಕೊಳ್ಳುವ ವಿಚಾರವಾಗಿ ವಾಗ್ವಾದ ನಡೆದಿದೆ. ವಿಷಯ ಹೊತ್ತಿಕೊಂಡ ತಕ್ಷಣ ವೇದಿಕೆಯಲ್ಲೇ ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಹಾಲಿ ಶಾಸಕಿ ಅರ್ಚನಾ ಪಾಂಡೆ ಅವರ ಮಾವ ನಮ್ಮ ಪಕ್ಷದ ಕಾರ್ಯಕರ್ತರಿಗೆ ಥಳಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಪಿನ್ ದ್ವಿವೇದಿ ಆರೋಪಿಸಿದ್ದಾರೆ.

ಇದೇ ವೇಳೆ ಅಬಾಸ್ ವಿಪಿನ್ ದ್ವಿವೇದಿ ಮಾತನಾಡಿ, 'ವೇದಿಕೆ ಹತ್ತಲು ಮುಂದಾದಾಗ ಶಾಸಕರ ಮಾವನ ಮಗ ರವಿ ಚತುರ್ವೇದಿ ತಡೆಯಲು ಯತ್ನಿಸಿದರು. ಜಿಲ್ಲಾ ಉಪಾಧ್ಯಕ್ಷರು ವೇದಿಕೆಯಲ್ಲಿಯೇ ಇರಬೇಕಾದ ಬಗ್ಗೆ ಜಿಲ್ಲಾಧ್ಯಕ್ಷರೊಂದಿಗೆ ಚರ್ಚಿಸಲಾಗಿದೆ. ಆಕೆಯನ್ನು ಬಲವಂತವಾಗಿ ವೇದಿಕೆ ಮೇಲೆ ನಿಲ್ಲಿಸಲು ಯತ್ನಿಸಿದ. ಅವರು ತಮ್ಮ ಕುಟುಂಬ ಸದಸ್ಯರನ್ನು ವೇದಿಕೆಯ ಮೇಲೆ ಕರೆಸಿದರು ಮತ್ತು ನನ್ನ ಮೇಲೆ ಲಾಠಿ ಬೀಸಿದರು. ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈಗ ಪಕ್ಷಕ್ಕಿಂತ ನಮ್ಮ ಜೊತೆಗಿರುವ ಜನರೊಂದಿಗೆ ಮಾತನಾಡುತ್ತೇನೆ. ಆ ಬಳಿಕ ಕೆಲವು ನಿರ್ಧಾರ ಕೈಗೊಳ್ಳಲಾಗುವುದು' ಎಂದರು.
ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಗೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಉತ್ತರಪ್ರದೇಶಕ್ಕೆ ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡಿ ಪ್ರಚಾರದಲ್ಲಿ ತೊಡಗಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಕೂಡ ಪ್ರಚಾರದ ಭರದಲ್ಲಿ ತೊಡಗಿದ್ದಾರೆ. ಇತ್ತ ಎಸ್‌್ಪಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಚುನಾವಣೆಯಲ್ಲಿ ಗೆಲ್ಲಲು ನಾನಾ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಸಣ್ಣ ಸಣ್ಣ ಪಕ್ಷಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಗೆಲುವಿನ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ನಿನ್ನೆ ಅವರು ರಥಯಾತ್ರೆ ಮೂಲಕ ಬೃಹತ್ ಪ್ರಚಾರದಲ್ಲಿ ತೊಡಗಿದ್ದರು. ಜೊತೆಗೆ ಇತ್ತ ಕಾಂಗ್ರೆಸ್ ಕೂಡ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ತನ್ನ ಪಕ್ಷವನ್ನು ಬಲಪಡಿಸಿಕೊಳ್ಳುತ್ತಿದೆ. ಹೀಗೆ ಈ ಬಾರಿ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿವೆ. ಈ ನಡುವೆ ಬಿಜೆಪಿ ನಾಯಕರ ನಡುವಿನ ಗುದ್ದಾಟದ ಬೇರೆ ಪಕ್ಷಕ್ಕೆ ಲಾಭ ತಂದುಕೊಡುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟಿನಲ್ಲಿ ಈ ಬಾರಿ ವಿಧಾನಸಸಭೆ ಚುನಾವಣೆ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ.












Click it and Unblock the Notifications