ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪಶ್ಚಿಮ ಯುಪಿಯಲ್ಲಿ ಕಪ್ಪು ಬಾವುಟ, ಕಲ್ಲು ತೂರಾಟ
ಲಕ್ನೋ ಜನವರಿ 30: ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಪಶ್ಚಿಮ ಯುಪಿಯ ಹಳ್ಳಿಗಳಲ್ಲಿ ಬಿಜೆಪಿ ಸ್ಪರ್ಧಿಗಳ ಬೆಂಗಾವಲು ಪಡೆಗಳಿಗೆ ಕಪ್ಪು ಬಾವುಟ ತೋರಿಸಿ, ಕಲ್ಲು ಎಸೆದು ದಾಳಿಗೆ ಪ್ರಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಂಥಹ ಹನ್ನೆರಡು ಘಟನೆಗಳು ಇತ್ತೀಚೆಗೆ ಪಶ್ಚಿಮ ಯುಪಿಯಲ್ಲಿ ವರದಿಯಾಗಿವೆ.
ಜನವರಿ 24 ರಂದು ಸಂಜೆ ಚುರ್ ಗ್ರಾಮದಲ್ಲಿ ಬಿಜೆಪಿ ಸಿವಾಲ್ಖಾಸ್ ಅಭ್ಯರ್ಥಿ ಮಣಿಂದರ್‌ಪಾಲ್ ಸಿಂಗ್ ಮೇಲೆ ದಾಳಿಗೆ ಮಾಡಲಾಗಿದೆ. ಪ್ರಕರಣದಲ್ಲಿ 20 ಜನರನ್ನು ಹೆಸರಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನೂ 65 ಮಂದಿಯನ್ನು ಗುರುತಿಸಲಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗ್ ದೂರು ದಾಖಲಿಸಿಕೊಳ್ಳದಿದ್ದರೂ, ಪೊಲೀಸರು ಗುರುವಾರ ಸ್ವತ: ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಆರ್‌ಎಲ್‌ಡಿ ಧ್ವಜವಿಡಿದು ಹಲ್ಲೆ
ಘಟನೆ ಬಗ್ಗೆ ದಿ ಸಂಡೆ ಎಕ್ಸ್‌ಪ್ರೆಸ್‌ಗೆ ಮಾತನಾಡಿ ಸಿಂಗ್, "ನನ್ನನ್ನು ಹಿಂಬಾಲಿಸಿದ ಏಳು ಕಾರುಗಳು ಕಲ್ಲು ತೂರಾಟದಲ್ಲಿ ಹಾನಿಗೊಳಗಾಗಿದ್ದರೂ ನಾನು ದೂರು ದಾಖಲಿಸಿಲ್ಲ. ಯೇ ಹಮಾರೇ ಹಿ ಲೋಗ್ ಹೈ, ಮೈನೆ ಉನ್ಕೋ ಮಾಫ್ ಕರ್ ದಿಯಾ. ಲೋಕತಂತ್ರ ಮೇ ವೋಟ್ ಮಾಂಗ್ನೇವಾಲೋನ್ ಸೇ ಐಸಿ ಘಟ್ನಾ ನಹಿಂ ಹೋನಿ ಚಾಹಿಯೇ (ಇವರು ನಮ್ಮದೇ ಜನರು, ಮತ್ತು ನಾನು ಅವರನ್ನು ಕ್ಷಮಿಸುತ್ತೇನೆ. ಆದರೆ ಪ್ರಜಾಪ್ರಭುತ್ವದಲ್ಲಿ ಮತ ಕೇಳುವವರಿಗೆ ಇಂತಹ ಘಟನೆಗಳು ಸಂಭವಿಸಬಾರದು)" ಎಂದಿದ್ದಾರೆ.
ಕಲ್ಲು ತೂರಾಟ ನಡೆಸಿದ ವ್ಯಕ್ತಿಗಳು ರಾಷ್ಟ್ರೀಯ ಲೋಕದಳದ (ಆರ್‌ಎಲ್‌ಡಿ) ಧ್ವಜಗಳನ್ನು ಹಿಡಿದುಕೊಂಡು ಹೋಗುತ್ತಿದ್ದರು. ಅವರನ್ನು ಗುರುತಿಸಲಾಗುತ್ತಿದೆ ಎಂದು ಪೊಲೀಸ್ ಎಫ್‌ಐಆರ್ ಹೇಳುತ್ತದೆ. "ಲಭ್ಯವಿರುವ ವಿಡಿಯೋ ತುಣುಕಿನ ಮೂಲಕ ನಾವು ಅವರನ್ನು ಗುರುತಿಸುತ್ತಿದ್ದೇವೆ ಮತ್ತು ಕ್ರಮ ಕೈಗೊಳ್ಳುತ್ತೇವೆ" ಎಂದು ಸರ್ಧಾನ ಪೊಲೀಸ್ ಠಾಣೆಯ ಉಸ್ತುವಾರಿ ಲಕ್ಷ್ಮಣ್ ವರ್ಮಾ ಹೇಳಿದ್ದಾರೆ.

ಬಿಜೆಪಿ ಮತಗಳಿಗೆ ಕತ್ತರಿ
2017 ರ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮ ಯುಪಿಯನ್ನು ಮುನ್ನಡೆಸಿದ್ದರೆ, ಈ ಬಾರಿ ಕಠಿಣ ಹೋರಾಟವನ್ನು ಎದುರಿಸುತ್ತಿದೆ. ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ವರ್ಷವಿಡೀ ಪ್ರತಿಭಟನೆಗಳ ನಂತರ ಮೋದಿ ಸರ್ಕಾರ ಅವನ್ನು ರದ್ದುಪಡಿಸಿದೆ. ದೀರ್ಘಕಾಲದ ಪ್ರತಿಭಟನೆಯಲ್ಲಿ ಹಲವಾರು ರೈತರು ಪ್ರಾಣ ಬಿಟ್ಟಿದ್ದಾರೆ. ಇದರಿಂದಾಗಿ ಬಿಜೆಪಿ ಸರ್ಕಾರದ ವಿರುದ್ಧ ರೈತರು ಕೋಪಗೊಂಡಿದ್ದಾರೆ.
ಇದಿಂದಾಗಿ ಸಮಾಜವಾದಿ ಪಕ್ಷ ಮತ್ತು ಆರ್‌ಎಲ್‌ಡಿ ರಚಿಸಿದ ಮೈತ್ರಿಕೂಟದೊಂದಿಗೆ ಕ್ರಮವಾಗಿ ಯಾದವರು, ಮುಸ್ಲಿಮರು ಮತ್ತು ಜಾಟ್ ಮತಗಳು ಸೇರ್ಪಡೆಗೊಂಡಿವೆ. ಇದು ಬಿಜೆಪಿ ಮತಗಳಿಗೆ ಕತ್ತರಿ ಹಾಕಬಹುದು. 2013 ರ ಮುಜಾಫರ್‌ನಗರ ಗಲಭೆಗಳಿಂದಾಗಿ ಮುಸ್ಲಿಮರು ಮತ್ತು ಜಾಟ್‌ಗಳನ್ನು ದೂರ ತಳ್ಳಿದ್ದವು. ಇದು 2017 ರಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಈ ಪ್ರದೇಶದಲ್ಲಿ ವಿರೋಧವನ್ನು ಹೊಂದಿದ್ದಾರೆ. ಹೀಗಾಗಿ ಶಾ ದೆಹಲಿಯಲ್ಲಿ ಜಾಟ್ ನಾಯಕರೊಂದಿಗೆ ಸಭೆ ನಡೆಸಿದರು ಮತ್ತು ಪ್ರದೇಶದ ಮೂಲಕ ಮನೆ ಮನೆಗೆ ಪ್ರಚಾರ ಮಾಡುತ್ತಿದ್ದಾರೆ.

ರೈತರು ಪ್ರತಿಭಟನೆ ವಿರುದ್ಧ ಟೀಕೆ
ಗುರುವಾರ ಸಂಜೆ ಹಾಲಿ ಬಿಜೆಪಿ ಶಾಸಕ ಹಾಗೂ ಮುಝಾಫರ್‌ನಗರದ ಖತೌಲಿಯಿಂದ ಸ್ಪರ್ಧಿಸಿದ್ದ ವಿಕ್ರಮ್ ಸೈನಿ ಅವರ ಕ್ಷೇತ್ರದ ಭೈಂಸಿ ಗ್ರಾಮದಲ್ಲಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ರೈತರ ಗುಂಪು ಕೂಗಿದೆ." ನೀವು ಐದು ವರ್ಷಗಳ ನಂತರ ಬಂದಿದ್ದೀರಿ" ಎಂದು ಪ್ರತಿಭಟನಾಕಾರರು ಕೂಗಿದ್ದಾರೆ. ಆಂದೋಲನವು ಉತ್ತುಂಗದಲ್ಲಿದ್ದಾಗ ದೆಹಲಿಯ ಗಡಿಯಲ್ಲಿರುವ ಸಿಂಘುವಿನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವುದನ್ನು ಸೈನಿ ಟೀಕಿಸಿದ್ದರು. ಕೆಲವು ದಿನಗಳ ಹಿಂದೆ ಇದೇ ಕ್ಷೇತ್ರದ ಮುನ್ನಾವರ್ ಕಲಾನ್‌ನಲ್ಲಿ ಸೈನಿ ಇದೇ ರೀತಿಯ ಪ್ರತಿಭಟನೆಯನ್ನು ಎದುರಿಸಿದ್ದರು. ಈ ಬಗ್ಗೆ ಸೈನಿ ಅವರನ್ನು ಹೇಳಿದಾಗ, "ಹೊಸದೇನೂ ಇಲ್ಲ. ಪ್ರಚಾರದ ವೇಳೆ ಇಂತಹ ಘಟನೆಗಳು ನಡೆಯುತ್ತವೆ" ಎಂದಿದ್ದಾರೆ.

ಗ್ರಾಮ ಪ್ರವೇಶಕ್ಕೆ ಅಡ್ಡಿ
ಬಾಗ್‌ಪತ್‌ನ ಚಪ್ರೌಲಿಯ ಬಿಜೆಪಿ ಸ್ಪರ್ಧಿ ಸಹೇಂದ್ರ ರಾಮಲ ಅವರಿಗೆ ಶುಕ್ರವಾರ ದಹಾ ಗ್ರಾಮದಲ್ಲಿ ಕಪ್ಪು ಬಾವುಟ ತೋರಿಸಲಾಯಿತು ಮತ್ತು ಅದೇ ದಿನ ನಿರುಪಾದ ಗ್ರಾಮಕ್ಕೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಬಿಜ್ನೋರ್‌ನ ತಹರ್‌ಪುರ ಗ್ರಾಮದಲ್ಲಿ ಬುಧವಾರ ಮಾತನಾಡಿದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್, ಜನರ ಕೋಪವು ಮಾನ್ಯವಾಗಿದೆ. ಸರ್ಕಾರದ ಪ್ರತಿನಿಧಿಗಳು ತಮ್ಮ ದೂರುಗಳನ್ನು ನಿರ್ಲಕ್ಷಿಸಿದರೆ ರೈತರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

'ನಾವು ಯಾರನ್ನೂ ಬೆಂಬಲಿಸುವುದಿಲ್ಲ'
BKU ಯಾವ ಕಡೆಗೆ ವಾಲುತ್ತದೆ ಎಂದು ಎಲ್ಲರೂ ಕಾಯುತ್ತಿರುವಾಗ, ಪಕ್ಷವು ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಟಿಕಾಯತ್ ಪುನರುಚ್ಚರಿಸಿದರು. ಆದರೆ, ರೈತರು ತಮ್ಮ ಇಳುವರಿಯನ್ನು ಯಾವ ಬೆಲೆಗೆ ಮಾರಾಟ ಮಾಡಲು ಬಿಜೆಪಿ ಸೂಚನೆ ನೀಡುತ್ತದೆಯೋ ಅದಕ್ಕೆ ಸಮ್ಮತಿ ಇದ್ದರೆ ಬಿಜೆಪಿಗೆ ಮತ ಹಾಕಬಹುದು ಎಂದು ಅವರು ಹೇಳಿದರು.

ದಾಳಿಕೋರರ ಕೈಯಲ್ಲಿ ಆರ್‌ಎಲ್‌ಡಿ ಧ್ವಜ
ರೈತರ ಪ್ರತಿಭಟನೆಯ ಹಿಂದೆ ಪ್ರತಿಪಕ್ಷಗಳ ಕೈವಾಡವಿದೆ ಎಂದು ಪಶ್ಚಿಮ ಯುಪಿ ಬಿಜೆಪಿ ಉಪಾಧ್ಯಕ್ಷ ಮನೋಜ್ ಪೋಸ್ವಾಲ್ ಹೇಳಿದ್ದಾರೆ. ''ಹೆಚ್ಚಿನ ದಾಳಿಕೋರರು ಆರ್‌ಎಲ್‌ಡಿ ಅಥವಾ ವಿರೋಧ ಪಕ್ಷಗಳ ಧ್ವಜಗಳನ್ನು ಹೊತ್ತಿದ್ದಾರೆ. ಇದು ಮುಂಬರುವ ಚುನಾವಣಾ ಕದನದಲ್ಲಿ ಸೋಲುತ್ತಿರುವ ಅವರ ಹತಾಶೆಯನ್ನು ತೋರಿಸುತ್ತದೆ. ಇದು ಅವರ ಪಕ್ಷದ ಕಾರ್ಯಕರ್ತರ ಮೇಲೆ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರ ಹಿಡಿತವನ್ನು ದುರ್ಬಲಗೊಳಿಸುವುದನ್ನು ಪ್ರತಿಬಿಂಬಿಸುತ್ತದೆ,'' ಎಂದು ಅವರು ಹೇಳಿದರು.

ಪಕ್ಷದ ಧ್ವಜವಿಡಿದು ದಾಳಿ ಮಾಡಲು ಹೇಗೆ ಸಾಧ್ಯ?
"ಒಬ್ಬ ತನ್ನ ಪಕ್ಷದ ಧ್ವಜವನ್ನು ಹಿಡಿದಿರುವಾಗ ಹೇಗೆ ದಾಳಿ ಮಾಡುತ್ತಾನೆ?" ಎಂದು ಆರ್‌ಎಲ್‌ಡಿ ಹಿರಿಯ ನಾಯಕ ರಾಜ್‌ಕುಮಾರ್ ಸಂಗ್ವಾನ್ ಪ್ರತಿಕ್ರಿಯಿಸಿದ್ದಾರೆ. ದಾಳಿಕೋರರು ಪಕ್ಷದ ಬಾವುಟವಿಡಿದು ಯಾಕೆ ದಾಳಿ ಮಾಡುತ್ತಾರೆ. ಇದು ಸುಳ್ಳು ಆರೋಪ. ಇದೊಂದು ಪಿತೂರಿ ಎಂದಿದ್ದಾರೆ.












Click it and Unblock the Notifications