ಬಕ್ರೀದ್ ವಿಶೇಷ: ಈ ಬಾರಿ ಸಲ್ಮಾನ್ ಖಾನ್ ಹೆಸರಿನ ಮೇಕೆಗೆ ಬೇಡಿಕೆ
Recommended Video
ಲಕ್ನೋ, ಆಗಸ್ಟ್ 12: ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್ ಅಥವಾ ಈದ್ ಉಲ್ ಜುಹಾ ವಿಶೇಷವಾಗಿ ಎಲ್ಲ ಜುಮಾ ಮಸೀದಿ ಮತ್ತು ಪ್ರಮುಖ ಈದ್ಗಾ ಮೈದಾನಗಳಲ್ಲಿ ಈದ್ ನಮಾಝ್ ಮತ್ತು ಖುತುಬಾಕ್ಕೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಬಕ್ರೀದ್ ಬಂದರೆ ಸಲ್ಮಾನ್, ಶಾರುಖ್, ಸೇರಿದಂತೆ ಬಾಲಿವುಡ್ ಸ್ಟಾರ್ ನಟರ ಹೆಸರಿನ ಕುರಿ, ಮೇಕೆಗಳಿಗೆ ಎಲ್ಲಿಲ್ಲದ ಬೇಡಿಕೆ ಹುಟ್ಟುತ್ತದೆ. ಬಕ್ರೀದ್ ಗಾಗಿ ಬಜಾರಿನಲ್ಲಿ ಮಾರಾಟ ಮಾಡಲು ವಿಶೇಷವಾಗಿ ಮೇಕೆಗಳನ್ನು ಸಾಕಲಾಗುತ್ತದೆ.
ಈ ಬಾರಿ ಸಲ್ಮಾನ್ ಖಾನ್' ಹೆಸರಿನ ಮೇಕೆಯೊಂದಕ್ಕೆ ಭಾರಿ ಬೇಡಿಕೆ ಬಂದಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರ ಗೋರಖ್ ಪುರದಲ್ಲಿರುವ ಮೇಕೆಯೊಂದರ ಬೆಲೆ ಸುಮಾರು 8 ಲಕ್ಷ ರು ಎಂದು ಅದನ್ನು ಸಾಕಿದವರು ನಿಗದಿ ಮಾಡಿದ್ದಾರೆ. ಸುಮಾರು 95 ರಿಂದ 100 ಕೆಜಿ ತೂಗುವ ಈ ಮೇಕೆ ಬೆಲೆ ಇನ್ನಷ್ಟು ಏರಿಕೆಯಾಗಿ, ಅಂತಿಮವಾಗಿ ಎಷ್ಟಕ್ಕೆ ಮಾರಾಟವಾಗುವುದೋ ಗೊತ್ತಿಲ್ಲ.

ಬಕ್ರೀದ್ ಗಾಗಿ ಕುರಿ, ಮೇಕೆಗಳ ಸಂತೆಯಲ್ಲಿ ಮಾರಾಟಕ್ಕೆ ಬಂದಾಗ ಈ ಸಲ್ಮಾನ್ ಮೇಕೆ ಬೆಲೆ 8 ಲಕ್ಷ ರು ಎಂದು ನಿಗದಿ ಮಾಡಲಾಗಿದೆ. "ಹ್ಯಾಂಡ್ ಸಮ್ ಸ್ಟಾರ್ ನಟನಂತೆ ನಮ್ಮ ಮೇಕೆಯೂ ನೋಡಲು ಸುಂದರವಾಗಿದೆ. ದಷ್ಟಪುಷ್ಟವಾಗಿದೆ. ಸಲ್ಮಾನ್ ಹೆಸರಿರುವುದಕ್ಕೆ ಮಾತ್ರ ಮೇಕೆ ಬೆಲೆ ಹೆಚ್ಚಾಗಿಲ್ಲ. ಈ ಮೇಕೆ ಮೇಲಿರುವ ಕಪ್ಪು ಬಣ್ಣದ ಮಚ್ಚೆಗಳು ಕಾರಣವಾಗಿದೆ" ಎಂದು ಮೇಕೆ ಮಾಲೀಕರು ಎಎನ್ಐ ಜೊತೆ ಮಾತನಾಡುತ್ತಾ ಹೇಳಿದರು.
"ಸಲ್ಮಾನ್ ಮೇಕೆ ಮೇಲಿರುವ ಮಚ್ಚೆಗಳನ್ನು ಕೂಡಿಸಿ ಓದಿದರೆ ಅರೇಬಿಕ್ ಭಾಷೆಯಲ್ಲಿ 'ಅಲ್ಲಾಹ್' ಎಂದಾಗುತ್ತದೆ. ಇಂಥ ಮೇಕೆಯನ್ನು ಇರಿಸಿಕೊಂಡವರಿಗೆ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ, ಇದನ್ನು ನಮ್ಮ ಮನೆಯ ಸದಸ್ಯನಾಗಿ, ನಮ್ಮ ಸೋದರನಂತೆ ಸಾಕಿದ್ದೇವೆ. ನಮ್ಮಂತೆ ಹಾಸಿಗೆ, ದಿಂಬು ಮೇಲೆ ಮಲಗುತ್ತದೆ, ನಮ್ಮಂತೆ ಎಲ್ಲವನ್ನು ತಿನ್ನುತ್ತಾನೆ, ಬೇರೆ ಮೇಕೆಗಳಂತೆ ಹುಲ್ಲು, ಎಲೆಗಳನ್ನು ತಿನ್ನಲು ಕೊಟ್ಟಿಲ್ಲ. ಚಿಪ್ಸ್, ಟಾಫಿ, ಒಣ ಹಣ್ಣುಗಳನ್ನು ನೀಡಿ ಬೆಳೆಸಿದ್ದೇವೆ, ಪ್ರತಿ ದಿನ ಸುಮಾರು 700 ರಿಂದ 800 ರು ಖರ್ಚು ಮಾಡಿದ್ದೇವೆ" ಎಂದು ಮೇಕೆ ಮಾಲೀಕರು ಹೇಳಿದರು.












Click it and Unblock the Notifications