ಬಾಬ್ರಿ ಮಸೀದಿ ಧ್ವಂಸವಾಗಿ 26 ವರ್ಷ: ಅಯೋಧ್ಯೆಯಲ್ಲಿ ಬಿಗಿ ಭದ್ರತೆ

ಅಯೋಧ್ಯೆ, ಡಿಸೆಂಬರ್ 06: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿಯ ಧ್ವಂಸವಾಗಿ ಇಂದಿಗೆ 26 ವರ್ಷಗಳು ಸಂದಿವೆ. ಬಾಬ್ರಿ ಮಸೀದಿ ಧ್ವಂಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

ರಾಮ ಹುಟ್ಟಿದ ಸ್ಥಳದಲ್ಲಿ ನಿರ್ಮಿಸಿದ್ದ ಮಸೀದಿಯನ್ನು 1992 ರಲ್ಲಿ ಹಿಂದುಪರ ಸಂಘಟನೆಯ ಕಾರ್ಯಕರ್ತರು, ಕರಸೇವಕರು ಕೆಡವಿದ್ದರು.

Babri mosque demolition anniversary: Security tightened in Ayodhya

ಮೂಲತಃ ರಾಮ ಜನಿಸಿದ ಭೂಮಿಯಲ್ಲಿ, ಅಂದು ನಿರ್ಮಿಸಲಾಗಿದ್ದ ರಾಮನ ದೇವಸ್ಥಾನವನ್ನು ಕೆಡವಿ ಹದಿನಾರನೇ ಶತಮಾನದ ಮೋಘಲ್ ದೊರೆ ಬಾಬರ್ ನೇತೃತ್ವದಲ್ಲಿ ನಿರ್ಮಿಸಲಾಯಿತೆಂಬುದು ಮೂಲವಾದ. ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ.

ಆದರೆ ಮೊದಲು ರಾಮ ಮಂದಿರವಿದ್ದ ಜಾಗದಲ್ಲಿ, ಮತ್ತೆ ರಾಮಮಂದಿರ ನಿರ್ಮಿಸುವ ಬಗ್ಗೆ ಪ್ರಸ್ತುತ ಎನ್ ಡಿಎ ಸರ್ಕಾರ ಚಿಂತಿಸುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಬಾಬ್ರಿ ಮಸೀದಿ ಧ್ವಂಸ ದಿನದಂದು ಅತೀ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಹಲವು ಹಿಂದುಪರ ಸಂಘಟನೆಗಳು ಈ ದಿನವನ್ನು 'ಶೌರ್ಯ ದಿವಸ್' ಎಂದು ಆಚರಿಸುವುದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+