ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬ್ರಿ ದೇಶಕ್ಕೆ ಕಳಂಕ, ಅದು ಮಸೀದಿಯಲ್ಲ: ಮುಸ್ಲಿಂ ಮುಖಂಡ!

|
Google Oneindia Kannada News

ಲಕ್ನೋ, ಅಕ್ಟೋಬರ್ 05: "ಬಾಬ್ರಿ ಮಸೀದಿ ಈ ದೇಶಕ್ಕೆ ಕಪ್ಪುಚುಕ್ಕೆ. ಅದನ್ನು ಮಸೀದಿ ಎಂದು ಕರೆಯುವುದೇ ಅಪರಾಧ" ಎಂದು ಶಿಯಾ ವಕ್ಫ್ ಬೋರ್ಡ್ ಮುಖಂಡ ವಾಸೀಮ್ ರಿಜ್ವಿ ಹೇಳಿದ್ದಾರೆ.

'ಬಾಬ್ರಿ ಮಸೀದಿಯ ಅಡಿಯಲ್ಲಿ ಹಿಂದು ದೇವಾಲಯದ 265 ಕ್ಕೂ ಹೆಚ್ಚು ಅವಶೇಷಗಳು ಸಿಕ್ಕಿವೆ. ಈ ಮಸೀದಿಯ ಅಡಿಯಲ್ಲಿ ಅಗೆದು ಅವಶೇಷಗಳನ್ನು ಹುಡುಕಿದ ತಂಡದಲ್ಲಿ ಒಟ್ಟು 52 ಮುಸ್ಲಿಮರಿದ್ದರು' ಎಂದೂ ಅವರು ಹೇಳಿದ್ದಾರೆ.

ಮಸೀದಿ ಹಾಗೂ ಇಸ್ಲಾಂ : ನಮಾಜಿಗಿಂತ ಜಮೀನು ಯಾರಿಗೆ ಎಂಬುದು ಮುಖ್ಯ!ಮಸೀದಿ ಹಾಗೂ ಇಸ್ಲಾಂ : ನಮಾಜಿಗಿಂತ ಜಮೀನು ಯಾರಿಗೆ ಎಂಬುದು ಮುಖ್ಯ!

'ಈ ಎಲ್ಲ ದಾಖಲೆಗಳಿಂದಲೇ ಭಾರತೀಯ ಪುರಾತತ್ವ ಇಲಾಖೆ ಈ ಮಸೀದಿಯ ಅಡಿಯಲ್ಲಿ ದೇವಾಲಯವನ್ನು ನೆಲಸಮ ಮಾಡಲಾಗಿದೆ ಎಂಬ ಸತ್ಯವನ್ನು ಕಂಡುಕೊಂಡಿದೆ' ಎಂದು ರಿಜ್ವಿ ಹೇಳಿದರು.

Babri Masjid blot to India: Waseem Rizvi

ಇಲ್ಲಿನ ದೇವಾಲಯಗಳನ್ನು ಧ್ವಂಸ ಮಾಡಿ, ಅದೇ ಜಾಗದಲಿ ಬಾಬ್ರಿ ಮಸೀದಿಯನ್ನು ಕಟ್ಟಲಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ಕೆ.ಕೆ. ಮೊಹಮ್ಮದ್ ಎಂಬುವವರ 'I am Indian' ಎಂಬ ಪುಸ್ತಕದಲ್ಲೂ ಇದನ್ನು ಉಲ್ಲೇಖಿಸಲಾಗಿದೆ' ಎಂದು ರಿಜ್ವಿ ತಿಳಿಸಿದರು.

ನಮಾಜು ಮಾಡಲು ಮಸೀದಿಯೆ ಬೇಕೆ? ಸುಪ್ರೀಂ ತೀರ್ಪು ನಿರೀಕ್ಷಿಸಿನಮಾಜು ಮಾಡಲು ಮಸೀದಿಯೆ ಬೇಕೆ? ಸುಪ್ರೀಂ ತೀರ್ಪು ನಿರೀಕ್ಷಿಸಿ

'ಮಸೀದಿಯಲ್ಲದ ಕಟ್ಟಡವನ್ನು ಮಸೀದಿ ಎಂದು ವಾದಿಸುವುದನ್ನು ಅಲ್ಲಾಹ್ ಸಹ ಒಪ್ಪುವುದಿಲ್ಲ. ಈಗಲೂ ಮುಲ್ಲಾಗಳಿಗೆ ಸಮಯವಿದೆ, ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಕ್ಕೆ' ಎಂದು ಸಹ ಅವರು ಸೂಚಿಸಿದರು.

ಬಾಬ್ರಿ ಮಸೀದಿ ಧ್ವಂಸ: ಟ್ರೆಂಡಿಂಗ್ ಆಯ್ತು 'ಶೌರ್ಯ ದಿವಸ'ಬಾಬ್ರಿ ಮಸೀದಿ ಧ್ವಂಸ: ಟ್ರೆಂಡಿಂಗ್ ಆಯ್ತು 'ಶೌರ್ಯ ದಿವಸ'

ಇತ್ತೀಚೆಗಷ್ಟೇ, 'ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಎಂದಿಗೂ ಮಸೀದಿ ಇರಲೇ ಇಲ್ಲ. ಅದು ಶ್ರೀರಾಮನ ಜನ್ಮಸ್ಥಳವಷ್ಟೆ. ಆದ್ದರಿಂದ ಇಲ್ಲಿ ರಾಮ ದೇವಾಲಯವನ್ನಷ್ಟೇ ಕಟ್ಟಬೇಕು' ಎಂಬ ಹೇಳಿಕೆಯನ್ನು ಸಹ ರಿಜ್ವಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Uttar Pradesh Shia Waqf Board chief Waseem Rizvi has targetted Babri Masjid and accused it of being a blot to the country. He said that it is a crime to call "that blot as a mosque".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X