ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪಲ್ ಉದ್ಯೋಗಿ ಹತ್ಯೆ ಕೇಸ್ ಮುಚ್ಚಿ ಹಾಕಲು ಯತ್ನ: ಉ.ಪ್ರದೇಶ ಸಚಿವ ಆರೋಪ

|
Google Oneindia Kannada News

ಲಕ್ನೋ, ಅಕ್ಟೋಬರ್ 1: ಆಪಲ್‌ನ ಉದ್ಯೋಗಿ ವಿವೇಕ್ ತಿವಾರಿ ಅವರ ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಕ್ಕೆ ತಮ್ಮ ಸಹಮತ ಇದೆ ಎಂದು ಉತ್ತರ ಪ್ರದೇಶದ ಕಾನೂನು ಮತ್ತು ಸಂಸದೀಯ ಸಚಿವ ಬ್ರಿಜೇಶ್ ಪಾಠಕ್ ಹೇಳಿದ್ದಾರೆ.

'ಈ ಪ್ರಕರಣವನ್ನು ಮುಚ್ಚಿಹಾಕಲು ಕಳಂಕಿತ ಪೊಲೀಸರು ಪ್ರಯತ್ನಿಸುತ್ತಿರುವುದು ನನಗೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದನ್ನೂ ಕೂಡ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಲಿದೆ. ಈ ವಿಚಾರದಲ್ಲಿ ಕುಟುಂಬದವರು ಹೇಳಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ. ಕೆಲವು ಪೊಲೀಸರು ಅದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಎಫ್‌ಐಆರ್‌ಅನ್ನು ತಪ್ಪಾದ ರೀತಿಯಲ್ಲಿ ಬರೆಯಲಾಗಿದೆ. ಪೊಲೀಸರ ವಿರುದ್ಧವೂ ತನಿಖೆ ನಡೆಯಲಿದೆ' ಎಂದು ಅವರು ಹೇಳಿದ್ದಾರೆ.

Apple ಸೇಲ್ಸ್ ಮ್ಯಾನೇಜರ್ ನನ್ನು ಕೊಂದ ಪೊಲೀಸ್ ಪೇದೆ Apple ಸೇಲ್ಸ್ ಮ್ಯಾನೇಜರ್ ನನ್ನು ಕೊಂದ ಪೊಲೀಸ್ ಪೇದೆ

ಆಪಲ್ ಕಂಪೆನಿಯಲ್ಲಿ ಸೇಲ್ಸ್ ಎಕ್ಸಿಕ್ಯುಟಿವ್ ಆಗಿರುವ ವಿವೇಕ್ ಅವರ ಕಾರನ್ನು ಶನಿವಾರ ಬೆಳಗಿನ ಜಾವ ಪೊಲೀಸರು ತಡೆಯಲು ಪ್ರಯತ್ನಿಸಿದ್ದರು. ಆದರೆ, ಅವರು ಕಾರು ನಿಲ್ಲಿಸದೆ ಮುಂದೆ ಸಾಗಿದ್ದಾಗ ಪೊಲೀಸರು ಗುಂಡು ಹಾರಿಸಿದ್ದರು. ವಿವೇಕ್ ಅವರ ಕತ್ತಿಗೆ ಗುಂಡು ತಗುಲಿ ಅವರು ಮೃತಪಟ್ಟಿದ್ದರು.

apple executive vivek tiwari police trying to cover up brijesh pathak

ಗುಂಡು ಹಾರಿಸಿದ ಕಾನ್‌ಸ್ಟೆಬಲ್ ಮತ್ತು ಆತನ ಜತೆಗಿದ್ದ ಮತ್ತೊಬ್ಬ ಕಾನ್‌ಸ್ಟೆಬಲ್ ಇಬ್ಬರೂ ಮದ್ಯಸೇವನೆ ಮಾಡಿದ್ದರು ಎಂಬುದು ದೃಢಪಟ್ಟಿತ್ತು.

ಇಬ್ಬರೂ ಕಾನ್‌ಸ್ಟೆಬಲ್‌ಗಳ ಹೆಸರು ಉಲ್ಲೇಖಿಸಿ ತಿವಾರಿ ಅವರ ಪತ್ನಿ ಶನಿವಾರ ಗೊಮ್ಟಿ ನಗರ್ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಎಫ್‌ಐಆರ್ ದಾಖಲಿಸಿದ್ದಾರೆ.

ಘಟನೆ ವೇಳೆ ತಿವಾರಿ ಅವರ ಜತೆಗಿದ್ದ ಸನಾ ಖಾನ್ ಮೊದಲ ದೂರು ಸಲ್ಲಿಸಿದ್ದರು. ಅದರಲ್ಲಿ ಯಾವುದೇ ಹೆಸರನ್ನು ಉಲ್ಲೇಖಿಸಿರಲಿಲ್ಲ. ಈ ಎಫ್‌ಐಆರ್ ದುರ್ಬಲವಾಗಿದೆ ಎಂದು ತಿವಾರಿ ಅವರ ಕುಟುಂಬದ ಸದಸ್ಯರು ತಳ್ಳಿಹಾಕಿದ್ದರು.

ಆಪಲ್ ಉದ್ಯೋಗಿ ಹತ್ಯೆ : ಕೋಟಿ ರುಪಾಯಿ ಪರಿಹಾರ ಕೇಳಿದ ಪತ್ನಿಆಪಲ್ ಉದ್ಯೋಗಿ ಹತ್ಯೆ : ಕೋಟಿ ರುಪಾಯಿ ಪರಿಹಾರ ಕೇಳಿದ ಪತ್ನಿ

ತಿವಾರಿ ಅವರ ಮೇಲೆ ಗುಂಡು ಹಾರಿಸಿ ಕೊಂದ ಕಾನ್‌ಸ್ಟೆಬಲ್ ಪ್ರಶಾಂತ್ ಚೌಧರಿ ಸೇರಿದಂತೆ ಆರೋಪಿ ಕಾನ್‌ಸ್ಟೆಬಲ್‌ಗಳನ್ನು ಪ್ರಕರಣದಿಂದ ಬಚಾವಾಗುವಂತೆ ನೆರವಾಗಲು ಲಕ್ನೋ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

apple executive vivek tiwari police trying to cover up brijesh pathak

ಆರೋಪಿಗಳನ್ನು ಬಂಧಿಸಿರುವುದಾಗಿ ಲಕ್ನೋ ಪೊಲೀಸ್ ಮುಖ್ಯಸ್ಥರು ಪ್ರಕಟಿಸಿದ್ದರೂ, ಪೊಲೀಸರು ಸುಳ್ಳು ಹೇಳುತ್ತಿರುವುದಕ್ಕೆ ಪುರಾವೆಗಳಿವೆ ಎಂದು ಹೇಳಿದ್ದಾರೆ.

ಸೋಶಿಯಲ್ ಮಿಡಿಯಾ ಐಕಾನ್, ರೂಪದರ್ಶಿ ತರಾ ಬರ್ಬರ ಹತ್ಯೆಸೋಶಿಯಲ್ ಮಿಡಿಯಾ ಐಕಾನ್, ರೂಪದರ್ಶಿ ತರಾ ಬರ್ಬರ ಹತ್ಯೆ

ಸಮೀಪದಿಂದಲೇ ಗುಂಡು
ವಿವೇಕ್ ತಿವಾರಿ ಅವರ ಮೇಲೆ ನಾಲ್ಕೈದು ಅಡಿಗಳ ಅಂತರದ ಅತಿ ಸಮೀಪದಿಂದ (ಪಾಯಿಂಟ್ ಬ್ಲಾಂಕ್ ರೇಂಜ್) ಗುಂಡು ಹಾರಿಸಲಾಗಿದೆ ಎಂಬುದನ್ನು ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ.

ಪೊಲೀಸ್ ಠಾಣೆಗೆ ಪ್ರಿಯತಮೆಯ ರುಂಡ ಹಿಡಿದು ತಂದ ಯುವಕ!ಪೊಲೀಸ್ ಠಾಣೆಗೆ ಪ್ರಿಯತಮೆಯ ರುಂಡ ಹಿಡಿದು ತಂದ ಯುವಕ!

ಕಾರು ನಿಲ್ಲಿಸದೆ ಮುಂದೆ ಹೋಗಿದ್ದ ತಿವಾರಿ, ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಗುಂಡು ಹಾರಿಸಿದ್ದಾಗಿ ಪೊಲೀಸರು ಆರಂಭದಲ್ಲಿ ಹೇಳಿಕೆ ನೀಡಿದ್ದರು.

apple executive vivek tiwari police trying to cover up brijesh pathak

ತಿವಾರಿ ಅವರ ಮುಖದ ಎಡಭಾಗದಲ್ಲಿ ಮೇಲಿನಿಂದ ಕೆಳಕ್ಕೆ ಗುಂಡು ಹೊಕ್ಕಿದೆ. ಇದರರ್ಥ ವಿವೇಕ್ ಅವರಿಗಿಂತ ಕಾನ್‌ಸ್ಟೆಬಲ್ ಎತ್ತರದ ಸ್ಥಾನದಿಂದ ಗುಂಡು ಹಾರಿಸಿದ್ದಾರೆ ಎಂದು ವರದಿ ತಿಳಿಸಿದೆ.

English summary
Uttar Pradesh Minister Brijesh Pathak agreed with the family of apple executive Vivek Tiwari's allegation on police that they are trying to cover up the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X