'ಮೋದಿ ಮತ್ತೊಮ್ಮೆ' ಎಂದು ಮುಲಾಯಂ ಸಿಂಗ್ ಹೇಳಿದ್ದೇಕೆ? ಕಾರಣ ನೀಡಿದ ಸೊಸೆ!

ಲಕ್ನೋ, ಫೆಬ್ರವರಿ 14: 'ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿ' ಎಂದು ಹಾರೈಸಿದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಮಾತಿಗೆ ಕಾರಣವೇನು ಎಂಬ ಬಗ್ಗೆ ಅವರ ಸೊಸೆ ಅಪರ್ಣಾ ಯಾದವ್ ಮಾತನಾಡಿದ್ದಾರೆ.

"ನಮ್ಮ ಮಾವ ಏನೇ ಮಾತನಾಡಿದರೂ ಅದಕ್ಕೆ ಅರ್ಥವಿರುತ್ತದೆ. ಅವರು ಯಾರಿಗೂ ಕೇಡು ಬಯಸುವುದಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದೇ ಆಶೀರ್ವಾದ ಮಾಡುತ್ತಾರೆ. ಹಾಗೆಯೇ ಅವರು ಮಾತನಾಡಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ' ಎಂದು ಅಪರ್ಣಾ ಯಾದವ್ ಹೇಳಿದರು.

"ಮಾವ ಹೇಳಿದ ಮಾತ್ರಕ್ಕೆ ಮೋದಿ ಗೆದ್ದೇ ಬಿಡುತ್ತಾರೆ ಎಂದು ಹೇಳುವುದಕ್ಕಾಗುವುದಿಲ್ಲ. ಅದನ್ನು ಚುನಾವಣೆ ನಿರ್ಧರಿಸುತ್ತದೆ" ಎಂದು ಹೇಳುವುದಕ್ಕೆ ಅವರು ಮರೆಯಲಿಲ್ಲ.

Aparna Yadav says, Why Mulayam Singh wishes Modi to be PM again?

ಬುಧವಾರ ಸಂಸತ್ತಿನಲ್ಲಿ ಮಾತನಾಡುತ್ತಿದ್ದ 79 ರ ಮುಲಾಯಂ ಸಿಂಗ್ ಯಾದವ್, "ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡೊಯ್ಯುತ್ತಿರುವ ನರೇಂದ್ರ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ. ನನಗೆ ಭರವಸೆ ಇದೆ ನೀವು ಮತ್ತೊಮ್ಮೆ ಪ್ರಧಾನಿಯಾಗುತ್ತೀರಿ, ಅದೇ ನನ್ನ ಹಾರೈಕೆ" ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+