ಯೋಗಿಗೆ ಅಭಿನಂದಿಸಿದ ಮುಲಾಯಂ ಸೊಸೆ ಅಪರ್ಣಾ ಯಾದವ್‌ಗೆ ನೆಟ್ಟಿಗರ ಪ್ರಶ್ನೆಗಳಿವು
ಲಕ್ನೋ ಮಾರ್ಚ್ 25: ಬಿಜೆಪಿಯ ಭರ್ಜರಿ ಗೆಲುವಿನ ನಂತರ ಯೋಗಿ ಆದಿತ್ಯನಾಥ್ (ಮಾರ್ಚ್ 25) ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಯೋಗಿ ಪ್ರಮಾಣ ವಚನದ ನಂತರ ಸಚಿವ ಸಂಪುಟ ರಚನೆಯ ಚರ್ಚೆ ಬಿಸಿ ಬಿಸಿಯಾಗಿದೆ. ಈ ನಡುವೆ ಎಸ್‌ಪಿ ಪಕ್ಷ ತೊರೆದು ಬಿಜೆಪಿ ಸೇರಿದ, ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಅವರಿಗೆ ಬಿಜೆಪಿಯಲ್ಲಿ ಯಾವ ಸ್ಥಾನ ನೀಡಲಾಗುತ್ತದೆ ಎನ್ನುವ ಬಗ್ಗೆ ಕೂಡ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅಪರ್ಣಾ ಯಾದವ್ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಿದ್ದು ಈ ಟ್ವೀಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಿದ ಅಪರ್ಣಾ ಯಾದವ್, "ನೀವು ಭಾರತೀಯ ಜನತಾ ಪಕ್ಷದಲ್ಲಿ ಉತ್ತರ ಪ್ರದೇಶದ ಸಿಎಂ ಆಗಿ ಮರು ಆಯ್ಕೆಯಾದ ಉತ್ತರ ಪ್ರದೇಶದ ಯಶಸ್ವಿ ಮುಖ್ಯಮಂತ್ರಿ, ಗೌರವಾನ್ವಿತ ಯೋಗಿ ಆದಿತ್ಯನಾಥ್ ಜಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು" ಎಂದು ಬರೆದಿದ್ದಾರೆ. ಅಪರ್ಣಾ ಯಾದವ್ ಅವರ ಈ ಪೋಸ್ಟ್‌ಗೆ ಜನರು ಹಲವಾರು ರೀತಿಯ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದರು ಮತ್ತು ಕೆಲವರು ಅವರಿಗೆ ನಿಮಗೆ ಯಾವ ಸ್ಥಾನ ಸಿಕ್ಕಿದೆ ಎಂದು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು.
ಬಳಕೆದಾರರಿಗೆ ಪ್ರತಿಕ್ರಿಯೆ ಏನು?
ನೀವು ಸಚಿವರಾಗಲಿರುವ ಕಾರಣ ನಿಮಗೂ ಅನೇಕ ಶುಭಾಶಯಗಳು ಎಂದು ಆಚಾರ್ಯ ಗೋವಿಂದ್ ಠಾಕೂರ್ ಪ್ರತಿಕ್ರಿಯಿಸಿದ್ದಾರೆ.

ಅಪರ್ಣಾ ಜೀ, ನೀವು ತಪ್ಪಾದ ಪಕ್ಷಕ್ಕೆ ಬಂದಿದ್ದೀರಿ ಎಂದು ನವನೀತ್ ರಾಜ್ ಎಂಬುವವರು ಬರೆದಿದ್ದಾರೆ.
ನೀವು ಇಲ್ಲಿ ಯಾವುದೇ ಸ್ಥಾನವನ್ನು ಕಾಣುವುದಿಲ್ಲ. ನಿಮಗೆ ಅಸ್ತಿತ್ವವೇ ಇಲ್ಲ ಮೇಡಂ ಎಂದು ರಿಚಾ ಯಾದವ್ ಎಂಬ ಬಳಕೆದಾರರು ಬರೆದುಕೊಂಡಿದ್ದಾರೆ.
ಕನಿಷ್ಠ ಪಕ್ಷ ಮುಲಾಯಂ ಸಿಂಗ್ ಯಾದವ್ ಅವರ ಬಗ್ಗೆಯಾದರೂ ಯೋಚಿಸಿರಬಹುದಿತ್ತು ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.

ನೀವು ಸಕಾಲದಲ್ಲಿ ಬಿಜೆಪಿಗೆ ಸೇರಿರುವುದು ಒಳ್ಳೆಯದಾಗಿದೆ. ನೀವು ಬಿಜೆಪಿಯಲ್ಲಿ ಇರುವುದನ್ನು ಕಂಡು ಜನ ಎಷ್ಟು ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದು ಅಖಿಲೇಶ್ ಯಾದನ್, ಅವರ ಚಿಕ್ಕಪ್ಪ ಮತ್ತು ಸ್ವಾಮಿ ಪ್ರಸಾದ್ ಅವರನ್ನು ಕೇಳಿ ಎಂದು ಅರವಿಂದ್ ಎಂಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ನೀವೂ ಯುಪಿ ಡೆಪ್ಯುಟಿ ಸಿಎಂ ಆಗಲಿದ್ದೀರಿ ಎಂಬುದು ನಿಮ್ಮ ಪೋಸ್ಟರ್ ನಿಂದ ಕಾಣುತ್ತಿದೆ ಎಂದು ದೀನಾನಾಥ್ ಬರೆದುಕೊಂಡಿದ್ದಾರೆ.
ಸೂರತ್ ವರದಿಯಲ್ಲಿ ನೀವು ಸಂಪುಟದಲ್ಲಿ ಏನು ಪಡೆಯುತ್ತಿದ್ದೀರಿ ಎಂದು ಬರೆಯಲಾಗಿದೆ? ನಿಮಗೂ ಏನಾದರೂ ಸಿಕ್ಕಿದೆಯೇ? ಎಂದು ಆದಿಲ್ ಎಂಬ ಬಳಕೆದಾರ ಕೇಳುತ್ತಾನೆ.
ಸುರೇಂದ್ರ ಪಾಠಕ್ ಬರೆಯುತ್ತಾರೆ - ನೀವು ಪಕ್ಷವನ್ನು ತೊರೆದ ರೀತಿಯಲ್ಲಿ ನೋಡಿದರೆ ಯೋಗಿ ಸರ್ಕಾರದಲ್ಲಿ ನಿಮ್ಮನ್ನು ಮಂತ್ರಿ ಮಾಡಬಹುತ್ತಾರೆಂದು ಭಾವಿಸಲಾಗಿತ್ತು. ಸಚಿವ ಸಂಪುಟದಲ್ಲಿ ನಿಮಗೆ ಯಾವ ಹುದ್ದೆ ನೀಡಲಾಗುತ್ತಿದೆ' ಎಂದು ಶಿವಕುಮಾರ್ ಮುದಗಲ್ ಪ್ರತಿಕ್ರಿಯಿಸಿದರು.
2017 ರಲ್ಲಿ ಬಿಜೆಪಿ ಭದ್ರಕೋಟೆ ಎಂದು ಪರಿಗಣಿಸಲಾದ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಿಂದ ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಅಪರ್ಣಾ ತಮ್ಮ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರು ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ ಜೋಶಿ ವಿರುದ್ಧ 33,796 ಮತಗಳ ಅಂತರದಿಂದ ಸೋತಿದ್ದಾರೆ. ಸಮಾಜವಾದಿ ಪಕ್ಷದ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟ ಅಪರ್ಣಾ ಯಾದವ್ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದರು. ಚುನಾವಣಾ ಹೊಸ್ತಿಲಲ್ಲಿ ಅಪರ್ಣಾ ಬಿಜೆಪಿ ಸೇರಿದ್ದು ಪಕ್ಷಕ್ಕೆ ಭಾರೀ ಹಿನ್ನಡೆಯಾಗಿತ್ತು. ಜೊತೆಗೆ ಅಪರ್ಣಾ ಯಾದವ್ ಗೆ ಬಿಜೆಪಿಯಲ್ಲಿ ಉನ್ನತ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆದರೆ ಬಿಜೆಪಿಯಲ್ಲಿ ಅಪರ್ಣಾ ಯಾದವ್ ಅವರಿಗೆ ಯಾವ ಸ್ಥಾನ ಸಿಗಲಿದೆ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.












Click it and Unblock the Notifications