ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಖಿಲೇಶ್ ರಥಯಾತ್ರೆಯಲ್ಲಿ ಅಂಬೇಡ್ಕರ್ ಪ್ರತಿಮೆ ಉಡುಗೊರೆ

|
Google Oneindia Kannada News

ಲಕ್ನೋ ಡಿಸೆಂಬರ್ 29: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಮರಳುವ ಅವಕಾಶವನ್ನು ಹೆಚ್ಚಿಸಲು ರಥಯಾತ್ರೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ರಾಜಕೀಯದಲ್ಲಿ ರಥಯಾತ್ರೆಗೆ ವಿಶೇಷ ರಾಜಕೀಯ ಮಹತ್ವವಿದೆ. ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸುವ ಗುರಿಯನ್ನು ಹೊಂದಿದ ಅಖಿಲೇಶ್ ಯಾದವ್ ಅವರು ಚುನಾವಣಾ ಪ್ರಚಾರದ ಭಾಗವಾಗಿ ರಥಯಾತ್ರೆಯನ್ನು ಮಾಡುತ್ತಿದ್ದಾರೆ.

ಉನ್ನಾವೊದಲ್ಲಿ ಅವರ ರಥಯಾತ್ರೆಗೆ ಅಪಾರ ಜನಸ್ತೋಮವೇ ನೆರೆದು ಅಖಿಲೇಶ್ ಯಾದವ್ ಅವರನ್ನು ಬರಮಾಡಿಕೊಂಡಿದೆ. ಕಣ್ಣಾಯಿಸಿದಲ್ಲೆಲ್ಲ ಜನರೇ ಕಾಣಿಸಿದ ಉನ್ನಾವೋದಲ್ಲಿ ಅಖಿಲೇಶ್ ರಥಯಾತ್ರೆ ನಡೆಸಿದರು. ಈ ವೇಳೆ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಂದ ಉಡುಗೊರೆಗಳನ್ನು ಸ್ವೀಕರಿಸಿದರು. ಸಾರ್ವಜನಿಕರ ಗಮನ ಸೆಳೆದ ಛಾಯಾಚಿತ್ರಗಳಲ್ಲಿ ಭಗವಾನ್ ಹನುಮಾನ್ ಫೋಟೋದ ಉಡುಗೊರೆ ಕೂಡ ಸೇರಿದೆ.

ಭಗವಾನ್ ಹನುಮಂತನ ಛಾಯಾಚಿತ್ರದ ಕೆಳಭಾಗದಲ್ಲಿ ಸಮಾಜವಾದಿ ಪಕ್ಷದ 'ಬೈಸಿಕಲ್' ಚಿಹ್ನೆಯೂ ಇದೆ. ಇದನ್ನು ಅಖಿಲೇಶ್ ಯಾದವ್‌ಗೆ ಉಡುಗೊರೆಯಾಗಿ ನೀಡಿದ ಪಕ್ಷದ ಕಾರ್ಯಕರ್ತನ ಹೆಸರೂ ಇದೆ. ಮತ್ತೊಂದು ಛಾಯಾಚಿತ್ರದಲ್ಲಿ, ಅಖಿಲೇಶ್ ಯಾದವ್ ಭಗವಾನ್ ಹನುಮಂತನ ಪ್ರಸಿದ್ಧ ಆಯುಧವಾದ 'ಗದಾ' (ಗದೆ) ಅನ್ನು ಹಿಡಿದಿದ್ದಾರೆ. ಎಡಗೈಯಲ್ಲಿ ಗದಾ ಹಿಡಿದುಕೊಂಡ ಯಾದವ್ ಉನ್ನಾವೋ ರಸ್ತೆಯಲ್ಲಿ ಬೆಂಬಲಿಗರ ಗುಂಪನ್ನು ಸ್ವಾಗತಿಸಿದರು.

Akhilesh takes Lord Hanuman out on Vijay Yatra
ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿ, ಉತ್ತರ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ಅಖಿಲೇಶ್ ಯಾದವ್ ಪ್ರಜ್ಞಾಪೂರ್ವಕವಾಗಿ ತಮ್ಮ ಗುರುತನ್ನು ಪ್ರದರ್ಶಿಸುತ್ತಿದ್ದಾರೆ. ಬಿಜೆಪಿಯು ಅಖಿಲೇಶ್ ಯಾದವ್ ಮತ್ತು ಅವರ ಪಕ್ಷ ಹಿಂದೂ ಗುರುತನ್ನು ವಿರೋಧಿಸುತ್ತದೆ ಮತ್ತು ಮುಸ್ಲಿಂ ಪರವಾಗಿದೆ ಎಂದಿತ್ತು. ಹೀಗಾಗಿ ಅವರು ಕಾರ್ಯಕರ್ತರು ನೀಡಿದ ಹನುಮಾನ್ ಫೋಟೋ ಹಾಗೂ ಗದೆಯ ಉಡುಗೊರೆತನ್ನು ಸ್ವೀಕರಿಸುವ ಮೂಲಕ ತಮ್ಮನ್ನು ಜಾತ್ಯತೀತ ರಾಜಕಾರಣಿ ಎಂದು ತೋರಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಡುವ ಡಾ ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆಯನ್ನೂ ಅವರು ಕಾರ್ಯಕರ್ತರಿಂದ ಸ್ವೀಕರಿಸಿದರು.

Akhilesh takes Lord Hanuman out on Vijay Yatra
ಮಹಾರಾಷ್ಟ್ರದಲ್ಲಿ ಜನಿಸಿದ ಅಂಬೇಡ್ಕರ್ ಉತ್ತರ ಪ್ರದೇಶದ ಚುನಾವಣೆಗಳಲ್ಲಿ ಆಗಾಗ್ಗೆ ಉಲ್ಲೇಖಿಸಲ್ಪಟ್ಟಿದ್ದಾರೆ. ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಅವರು ದಲಿತರ ಉನ್ನತಿಗೆ ಅಂಬೇಡ್ಕರ್ ನೀಡಿದ ಕೊಡುಗೆಯ ಬಗ್ಗೆ ಧ್ವನಿಯೆತ್ತಿದ್ದಾರೆ. ಇದರೊಂದಿಗೆ ತಮ್ಮನ್ನು ತಾವು ಸಮುದಾಯದ ನಾಯಕಿಯಾಗಿ ಇರಿಸಿಕೊಂಡಿದ್ದಾರೆ. ಹೀಗಾಗಿ ದಲಿತ ಮತದಾರರನ್ನು ಓಲೈಸಲು ಅಖಿಲೇಶ್ ಯಾದವ್ ಅವರಿಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಡಾ ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ನೀಡಲಾಗಿದೆ.

Akhilesh takes Lord Hanuman out on Vijay Yatra
ಉತ್ತರ ಪ್ರದೇಶದ ಎಲ್ಲಾ 403 ವಿಧಾನಸಭಾ ಸ್ಥಾನಗಳಿಗೆ ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ಚುನಾವಣೆ ನಡೆಯಲಿದೆ. ಉತ್ತರಾಖಂಡ್, ಪಂಜಾಬ್, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಲಸಿಕೆ ಹಾಕುವ ಪ್ರಯತ್ನಗಳನ್ನು ಚುರುಕುಗೊಳಿಸುವಂತೆ ಚುನಾವಣಾ ಆಯೋಗವು ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

English summary
Samajwadi Party president Akhilesh Yadav is on a Rath Yatra to boost his chances to return to power in Uttar Pradesh next year. Rath Yatra holds a special political significance in Uttar Pradesh politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X