ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ಪೂಜೆ: 'ಬಾಬ್ರಿ ಮಸೀದಿ ಇತ್ತು, ಮುಂದೆಯೂ ಇರಲಿದೆ'- ಓವೈಸಿ

|
Google Oneindia Kannada News

ಲಕ್ನೌ, ಆಗಸ್ಟ್ 5: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಇಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುತ್ತಿದೆ. ಪ್ರಧಾನಿ ಮೋದಿ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಿದ್ದಾರೆ.

Recommended Video

Ayodhya ರಾಮನ ದೇವಸ್ಥಾನ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇಟ್ಟ ಮೋದಿ. | Oneindia Kannada

ಆದರೆ ಮತ್ತೊಂದೆಡೆ 'ಬಾಬರಿ ಮಸೀದಿ ಘಟನೆಯನ್ನು ಅಯೋಧ್ಯೆಯ ಪರಂಪರೆಯಿಂದ ಅಳಿಸಲಾಗುವುದಿಲ್ಲ' ಎಂದು ಎಐಎಂಐಎಂ ನಾಯಕ ಹಾಗೂ ಹೈದರಾಬಾದ್‌ನ ಲೋಕಸಭಾ ಸಂಸದ ಅಸಾದುದ್ದೀನ್ ಒವೈಸಿ ಬುಧವಾರ ಹೇಳಿದ್ದಾರೆ.

ಅಯೋಧ್ಯೆ ಪೂಜೆ: 'ಹಗಿಯಾ ಸೋಫಿಯಾ' ಘಟನೆ ನೆನಪಿಸಿದ ಮುಸ್ಲಿಂ ಸಂಘಟನೆಅಯೋಧ್ಯೆ ಪೂಜೆ: 'ಹಗಿಯಾ ಸೋಫಿಯಾ' ಘಟನೆ ನೆನಪಿಸಿದ ಮುಸ್ಲಿಂ ಸಂಘಟನೆ

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಒವೈಸಿ ಬಾಬ್ರಿ ಜಿಂದಾ ಹೈ (ಬಾಬ್ರಿ ಈಸ್ ಅಲೈವ್) ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ, 'ಬಾಬ್ರಿ ಮಸೀದಿ ಇತ್ತು, ಮತ್ತು ಇರುತ್ತದೆ.' ಎಂದು ಟ್ವೀಟ್ ಮಾಡಿದ್ದಾರೆ.

Aimim Leader Asaduddin Owaisi Said That Babri Masjid Thi, Hai Aur Rahegi

ಇದಕ್ಕೂ ಮುಂಚೆ ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಭಾಗವಹಿಸುವುದನ್ನು ಒವೈಸಿ ಖಂಡಿಸಿದ್ದರು. 'ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಈ ಕಾರ್ಯಕ್ರಮಕ್ಕೆ ಹಾಜರಾದರೆ ಅದು ದೇಶಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ' ಎಂದು ಒವೈಸಿ ಹೇಳಿದ್ದರು.

Aimim Leader Asaduddin Owaisi Said That Babri Masjid Thi, Hai Aur Rahegi

ನಾನು ಬದುಕುವವರೆಗೂ ಈ ಘಟನೆಯನ್ನು ಮುಚ್ಚಿಡಲಾಗುವುದಿಲ್ಲ ಎಂದು ಹೇಳಿರುವ ಒವೈಸಿ 'ನನ್ನ ಕುಟುಂಬ, ನನ್ನ ಜನರು ಮತ್ತು ಭಾರತದ ಜನರಿಗೆ ಬಾಬ್ರಿ ಮಸೀದಿ ಕೆಡವಿ ರಾಮ ಮಂದಿರ ಕಟ್ಟಲಾಗಿದೆ ಎಂದು ಹೇಳುತ್ತೇನೆ. 1992 ರ ಡಿಸೆಂಬರ್ 6 ರಂದು ಮಸೀದಿ ಅಲ್ಲಿತ್ತು... ಅದನ್ನು ಕೆಡವಲಾಯಿತು ... ಒಂದು ವೇಳೆ ಮಸೀದಿ ನೆಲಸಮ ಆಗಿರಲಿಲ್ಲ ಅಂದಿದ್ದರೆ ಈ ಸ್ಥಳದಲ್ಲಿ ರಾಮ ಮಂದಿರದ ಭೂಮಿ ಪೂಜೆ ನಡೆಸಲಾಗುತ್ತಿರಲಿಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

English summary
AIMIM leader Asaduddin Owaisi on Wednesday tweet that 'Babri Masjid thi, hai aur rahegi inshallah'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X