ಪ್ರಿಯಾಂಕ ಎಲ್ಲಿಂದ ಸ್ಪರ್ಧೆ? ಇನ್ನಷ್ಟು ಗೊಂದಲ ಹುಟ್ಟುಹಾಕಿದ ಕಾಂಗ್ರೆಸ್ ಟ್ವೀಟ್
ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಪ್ರಿಯಾಂಕ ಗಾಂಧಿ ವಾಧ್ರಾ ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರದಲ್ಲಿನ ಗೊಂದಲ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರ ಟ್ವೀಟ್ ನಿಂದ ಇನ್ನಷ್ಟು ಹೆಚ್ಚಾಗಿದೆ.
ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾರೋಗ್ಯದಿಂದ ಸ್ಪರ್ಧಿಸುತ್ತಿಲ್ಲ, ಅವರ ಜಾಗದಲ್ಲಿ ಅಂದರೆ ಪೂರ್ವ ಉತ್ತರಪ್ರದೇಶದ ರಾಯ್ ಬರೇಲಿಯಿಂದ ಪ್ರಿಯಾಂಕ ಸ್ಪರ್ಧಿಸಲಿದ್ದಾರೆಂದು ಸುದ್ದಿಯಾಗಿತ್ತು.
ಆದರೆ, ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಮಾಡಿರುವ ಟ್ವೀಟ್, ಪ್ರಿಯಾಂಕ, ರಾಯ್ ಬರೇಲಿ ಅಥವಾ ಅಮೇಥಿ ಎರಡೂ ಕ್ಷೇತ್ರವನ್ನು ಬಿಟ್ಟು ಇನ್ನೊಂದು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರಾ ಎನ್ನುವ ಚರ್ಚೆ ಹುಟ್ಟುಹಾಕುವಂತೆ ಮಾಡಿದೆ.

ಪ್ರಿಯಾಂಕ ಸ್ಪರ್ಧೆಯ ವಿಚಾರದಲ್ಲಿ ಟ್ವೀಟ್ ಮಾಡಿರುವ ಕಪಿಲ್ ಸಿಬಲ್, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಬ್ಬರೂ, ' ಕಾಂಗ್ರೆಸ್ ಮುಕ್ತ್ ಭಾರತ್' ಎಂದು ಹೇಳುತ್ತಿರುತ್ತಾರೆ.
Modiji and Amit Shah called for a :
— Kapil Sibal (@KapilSibal) January 24, 2019
Congress mukt Bharat
With the entry of Priyanka Gandhi in UP (East) will we see a :
.............mukt Varanasi ?
.............mukt Gorakhpur ?
ಆದರೆ, ಈಗ ಪ್ರಿಯಾಂಕ ಆಗಮನದಿಂದ ... ಮುಕ್ತ್ ವಾರಣಾಸಿ?, ... ಮುಕ್ತ್ ಗೋರಖಪುರ? ಎಂದು ಟ್ವೀಟ್ ಮಾಡುವ ಮೂಲಕ, ಪ್ರಿಯಾಂಗ ಆ ಎರಡು ಕ್ಷೇತ್ರದಲ್ಲಿ ಎಲ್ಲಾದರೂ ಒಂದರಿಂದ ಸ್ಪರ್ಧಿಸಲಿದ್ದಾರಾ ಎನ್ನುವ ಕುತೂಹಲ ಕಾರ್ಯಕರ್ತರ ವಲಯದಲ್ಲಿ ಮೂಡುವಂತೆ ಮಾಡಿದ್ದಾರೆ.
ಕಳೆದ ಚುನಾವಣೆಯಲ್ಲಿ ವಾರಣಾಸಿಯಿಂದ ನರೇಂದ್ರ ಮೋದಿ ಮತ್ತು ಗೋರಖಪುರದಿಂದ ಯೋಗಿ ಆದಿತ್ಯನಾಥ್ ಆಯ್ಕೆಯಾಗಿದ್ದರು. ಯೋಗಿ, ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ನಡೆದ ಮರುಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಪ್ರವೀಣ್ ಕುಮಾರ್ ನಿಷಾದ್ ಸಂಸದರಾಗಿ ಆಯ್ಕೆಯಾಗಿದ್ದರು.












Click it and Unblock the Notifications