ನನ್ನ ಮೇಲೆ Acid ಎರಚಲು ಸಂಚು ನಡೆದಿತ್ತು: ನಟಿ ಜಯಪ್ರದಾ

ರಾಂಪುರ(ಉತ್ತರ ಪ್ರದೇಶ), ಏಪ್ರಿಲ್ 04: ಬಿಜೆಪಿ ಅಭ್ಯರ್ಥಿಯಾಗಿ ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಿಂದ ಕಣಕ್ಕಳಿದಿರುವ ನಟಿ ಜಯಪ್ರದ ಅವರು ಬುಧವಾರ ಸಮಾವೇಶವೊಂದರಲ್ಲಿ ಕಣ್ಣೀರಿಟ್ಟು ತಮ್ಮ ದುಃಖ ತೋಡಿಕೊಂಡರು.

"ನನ್ನ ಮೇಲೆ acid ಎರಚಲು ಸಂಚು ನಡೆದಿತ್ತು. ನಾನು ರಾಂಪುರವನ್ನು ಬಿಟ್ಟು ಹೋಗುವಂತೆ ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು. ಆದರೆ ಬಿಜೆಪಿ ನನ್ನೊಂದಿಗೆ ನಿಂತಿದೆ. ನೀವು ನನ್ನೊಂದಿಗಿದ್ದೀರಿ. ಆದ್ದರಿಂದ ನಾನು ಮತ್ತೆ ಈ ಕ್ಷೇತ್ರದಿಂದಲೇ ಚುನಾವಣೆಗೆ ನಿಂತಿದ್ದೇನೆ" ಎಂದು ರಾಮಪುರ ಜನತೆ ಬಳಿ ಜಯಪ್ರದ ನೋವು ಹಂಚಿಕೊಂಡರು.

ಒಂದು ಕಾಲದಲ್ಲಿ ಜಯಪ್ರದಾ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಸಮಾಜವಾದಿ ಪಕ್ಷದ ಆಝಂ ಖಾನ್ ಅವರ ವಿರುದ್ಧ ಜಯಪ್ರದ ಸ್ಪರ್ಧಿಸುತ್ತಿದ್ದು, ಅವರು ಪ್ರಚಾರ ಮಾಡಲಾಗದಂತೆ ಸಮಾಜವಾದಿ ಪಕ್ಷದ ಮುಖಂಡರು ಅಡ್ಡಿಯಾಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Actor Jayaprada expressed her sadness with tears in Rampur rally

57 ವರ್ಷ ವಯಸ್ಸಿನ ಜಯಪ್ರದಾ ಅವರು ಸಮಾಜವಾದಿ ಪಕ್ಷದ ಟಿಕೆಟ್ ನಿಂದಲೇ ಎರಡು ಬಾರಿ (2004,2009) ರಾಂಪುರದ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದ್ದರು. ಆದರೆ, 2010ರಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಜತೆಗಿನ ಕಿತ್ತಾಟದಿಂದಾಗಿ ರಾಜ್ಯ ಸಭಾ ಸದಸ್ಯ ಅಮರ್ ಸಿಂಗ್ ಜತೆಯಲ್ಲಿಯೇ ಜಯಪ್ರದಾ ಅವರನ್ನು ಎಸ್ ಪಿ ಉಚ್ಛಾಟಿಸಿತ್ತು.

ತೆಲಗುದೇಶಂ ಪಕ್ಷದ ಮೂಲಕ ರಾಜಕೀಯ ಬದುಕು ಆರಂಭಿಸಿದ್ದ ಜಯಪ್ರದ, ಎಸ್ಪಿ ಯಿಂದ ಉಚ್ಛಾಟನೆಗೊಂಡ ನಂತರ ಎನ್ ಡಿಎ ಯತ್ತ ಒಲವು ತೋರಿದ್ದರು. ಕನ್ನಡ, ತೆಲುಗು, ಹಿಂದಿ ಸೇರಿದಂತೆ 70 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಜಯಪ್ರದಾ, ಅವರು 2014ರಲ್ಲಿ ರಾಷ್ಟ್ರೀಯ ಲೋಕದಳ ಟಿಕೆಟ್ ಪಡೆದು ಬಿಜ್ನೋರ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+