ಯುಪಿ ಎಎಪಿ ಅಭ್ಯರ್ಥಿಗೆ ಚುನಾವಣಾ ನಾಮಪತ್ರ ತಿರಸ್ಕಾರ: ಆತ್ಮಹತ್ಯೆಗೆ ಯತ್ನ
ಲಕ್ನೋ ಜನವರಿ 24: ಚುನಾವಣಾಧಿಕಾರಿ ತನ್ನ ಚುನಾವಣಾ ನಾಮಪತ್ರವನ್ನು ತಿರಸ್ಕರಿಸಿದ್ದರಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಎಎಪಿ ಅಭ್ಯರ್ಥಿ ಜೋಗಿಂದರ್ ಸಿಂಗ್ ಅವರು ಸೋಮವಾರ ಮುಜಾಫರ್‌ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ತನ್ನ ಬಟ್ಟೆಯ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ. ಅವರು ಮಿರಾನ್‌ಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದರು. ಆದರೆ ನಾಮಪತ್ರದಲ್ಲಿ ಲೋಪಗಳಿದ್ದರಿಂದ ಚುನಾವಣಾಧಿಕಾರಿ ಚುನಾವಣಾ ನಾಮಪತ್ರವನ್ನು ತಿರಸ್ಕರಿಸಿದ್ದರು. ಇದಕ್ಕೆ ಮನನೊಂದ ಅಭ್ಯರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಪೊಲೀಸರು ಆತನನ್ನು ತಡೆಯುವ ಮೂಲಕ ಆತ್ಮಹತ್ಯೆಯ ಪ್ರಯತ್ನವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದಾಗ್ಯೂ, ಅವರ ಆತ್ಮಹತ್ಯೆಯ ಪ್ರಯತ್ನದ ಬಳಿಕ ಜೋಗಿಂದರ್ ಸಿಂಗ್ ಅವರು ತಮ್ಮ ನಾಮಪತ್ರವನ್ನು ಭರ್ತಿ ಮಾಡುವಲ್ಲಿನ ತಪ್ಪನ್ನು ಸರಿಪಡಿಸಲು ಅವಕಾಶವನ್ನು ನೀಡಲಿಲ್ಲ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಕುಳಿತರು.
ವಿಡಿಯೋ: ಟಿಕೆಟ್ ಸಿಗದೆ ಬೇಸರಗೊಂಡ ಎಸ್‌ಪಿ ಕಾರ್ಯಕರ್ತ ಆತ್ಮಾಹುತಿಗೆ ಯತ್ನ
ಜೋಗಿಂದರ್ ಸಿಂಗ್ ಅವರ ನಾಮಪತ್ರವನ್ನು ಭರ್ತಿ ಮಾಡುವಲ್ಲಿ ಕೆಲವು ನಿರ್ಣಾಯಕ ಲೋಪಗಳಿಂದಾಗಿ ಚುನಾವಣಾಧಿಕಾರಿ ಜಯೇಂದ್ರ ಕುಮಾರ್ ತಿರಸ್ಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮಾಜಿ ಸೈನಿಕ ಜೋಗಿಂದರ್ ಸಿಂಗ್ ಅವರು ಮುಜಾಫರ್‌ನಗರ ಜಿಲ್ಲೆಯ ಮಿರನ್‌ಪುರ (ಮೀರಾಪುರ) ವಿಧಾನಸಭಾ ಸ್ಥಾನಕ್ಕೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

ಹೀಗಾಗಿ ಲಕ್ನೋದ ವಿಕ್ರಮಾದಿತ್ಯ ಮಾರ್ಗದಲ್ಲಿರುವ ಎಸ್‌ಪಿ ಪಕ್ಷದ ಪ್ರಧಾನ ಕಚೇರಿಯ ಮುಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಸ್ಥಳದಲ್ಲಿದ್ದ ಜನರು ಮತ್ತು ಪೊಲೀಸ್ ಅಧಿಕಾರಿಗಳು ಸಕಾಲದಲ್ಲಿ ಆತನನ್ನು ತಡೆದು ಜೀವ ಉಳಿಸಿದ್ದಾರೆ. ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
समाजवादी पार्टी के नेता ठाकुर आदित्य ने लखनऊ स्थित पार्टी कार्यालय के बाहर आत्मदाह की कोशिश की. आरोप लगाया कि पांच साल से पार्टी के लिए मेहनत की और अब टिकट काट दिया. pic.twitter.com/kdy5PsqjDy
— Himanshu Mishra 🇮🇳 (@himanshulive07) January 16, 2022
ವಿಡಿಯೊದಲ್ಲಿ, ಠಾಕೂರ್ ಪಕ್ಷವು ತನ್ನ ಟಿಕೆಟ್ ಅನ್ನು ಲೂಟಿ ಮಾಡಿ ಅದನ್ನು ಹೊರಗಿನವರಿಗೆ ನೀಡಿದೆ ಎಂದು ಆರೋಪಿಸುವುದನ್ನು ಕೇಳಬಹುದು. ಅವರು ಯಾವುದೇ ಕ್ರಿಮಿನಲ್ ದಾಖಲೆಯನ್ನು ಹೊಂದಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಭಾವುಕರಾದ ಆದಿತ್ಯ ಠಾಕೂರ್ ಅವರು ಐದು ವರ್ಷಗಳ ಕಾಲ ಪಕ್ಷಕ್ಕಾಗಿ ಶ್ರಮಿಸಿದರು ಮತ್ತು ಈಗ ಅವರ ಟಿಕೆಟ್ ಕಡಿತಗೊಂಡಿದೆ ಎಂದು ಆರೋಪಿಸಿದರು.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 11 ಜಿಲ್ಲೆಗಳಲ್ಲಿ ಒಟ್ಟು 58 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 10 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications