ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಗಿ, ಪೆನ್ಸಿಲ್ ಬೆಲೆ ಏರಿಕೆ ಬಗ್ಗೆ ಮೋದಿಗೆ ಪತ್ರ ಬರೆದ 6ರ ಪೋರಿ

|
Google Oneindia Kannada News

ಇತ್ತೀಚಿನ ಪುಟ್ಟ ಮಕ್ಕಳು ಪ್ರಶ್ನೆ ಮಾಡುವ ಜ್ಞಾನವನ್ನ ಮೆಚ್ಚಬೇಕಾದ ವಿಚಾರ. ಹೀಗೊಂದು ಪುಟ್ಟ ಬಾಲಕಿ ಪ್ರಧಾನಿ ಮೋದಿ ಅವರಿಗೆ ಪ್ರಶ್ನೆ ಮಾಡಿದ್ದಾಳೆ. ಪ್ರಧಾನಿ ಮೋದಿಗೆ 6 ವರ್ಷದ ಬಾಲಕಿ ಬರೆದ ಪತ್ರ ವೈರಲ್ ಆಗಿದೆ. ಪತ್ರದಲ್ಲಿ ಬಾಲಕಿ ಮ್ಯಾಗಿ ಮತ್ತು ಪೆನ್ಸಿಲ್ ಬೆಲೆ ಏರಿಕೆ ಬರೆದಿದ್ದಾಳೆ.

1ನೇ ತರಗತಿ ಓದುತ್ತಿರುವ ಪುಟ್ಟ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಪೆನ್ಸಿಲ್ ಮತ್ತು ಮ್ಯಾಗಿ ಬೆಲೆ ಏರಿಕೆಯಿಂದ ತಾನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಂಚಿಕೋಮಡಿದ್ದಾಳೆ. ಉತ್ತರ ಪ್ರದೇಶದ ಕನೌಜ್‌ನ ಕೃತಿ ದುಬೆ ಎಂಬ ಆರು ವರ್ಷದ ಬಾಲಕಿ ಈ ಪತ್ರ ಬರೆದಿದ್ದು, ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

6-year-old girl wrote a letter to Modi about the increase in Maggi and pencil prices

ಕೃತಿ ದುಬೆ ಉತ್ತರ ಪ್ರದೇಶದ ಕನೌಜ್‌ನ ಛಿಬ್ರಮೌ ಮೂಲದವರು. ಪ್ರಧಾನಿ ಮೋದಿಗೆ ಹಿಂದಿಯಲ್ಲಿ ಪತ್ರ ಬರೆದು ತಮ್ಮ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಇಂಗ್ಲಿಷ್‌ನಲ್ಲಿ ಭಾಷಾಂತರಿಸಿದ ಈಗ ವೈರಲ್ ಆಗಿರುವ ಪತ್ರದಲ್ಲಿ, "ನನ್ನ ಹೆಸರು ಕೃತಿ ದುಬೆ. ನಾನು 1 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಕೆಲವು ವಸ್ತುಗಳ ಬೆಲೆಗಳು ಅಪಾರವಾಗಿ ಹೆಚ್ಚಾಗಿದೆ. ನನ್ನ ಪೆನ್ಸಿಲ್ ಮತ್ತು ಎರೇಸರ್ ಕೂಡ ದುಬಾರಿಯಾಗಿದೆ ಮತ್ತು ಮ್ಯಾಗಿ ಬೆಲೆಯೂ ಹೆಚ್ಚಾಗಿದೆ. ಈಗ ಪೆನ್ಸಿಲ್ ಕೇಳಿದರೆ ಅಮ್ಮ ಹೊಡೆಯುತ್ತಾಳೆ. ನಾನು ಏನು ಮಾಡಲಿ? ಇತರ ವಿದ್ಯಾರ್ಥಿಗಳು ಸಹ ನನ್ನ ಪೆನ್ಸಿಲ್ ಅನ್ನು ಕದಿಯುತ್ತಾರೆ'' ಎಂದು ಬರೆದಿದ್ದಾರೆ.

6-year-old girl wrote a letter to Modi about the increase in Maggi and pencil prices

ಮ್ಯಾಗಿ ಬೆಲೆ 70 ಗ್ರಾಂ ಪೌಚ್‌ಗೆ 14 ರೂ.ಗೆ ಏರಿಕೆಯಾಗಿದ್ದು, 32 ಗ್ರಾಂ ಪ್ಯಾಕೆಟ್‌ಗೆ 7 ರೂ. ಆಗಿದೆ. ಪತ್ರವನ್ನು "ಪ್ರಧಾನ ಮಂತ್ರಿ ಜೀ" ಎಂದು ಸಂಬೋಧಿಸಲಾಗಿದೆ ಮತ್ತು ಅರೋನ್ ಹ್ಯಾರಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಒಮ್ಮೆ ನೋಡಿ:

ವಕೀಲರಾಗಿರುವ ಆಕೆಯ ತಂದೆ ವಿಶಾಲ್ ದುಬೆ, "ಇದು ನನ್ನ ಮಗಳ 'ಮನ್ ಕಿ ಬಾತ್'. ಇತ್ತೀಚಿಗೆ ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಿದ್ದಕ್ಕೆ ತಾಯಿ ಗದರಿಸಿದಾಗ ಆಕೆ ಸಿಟ್ಟಾದಳು," ಎಂದು ಅವರು ಬರೆದಿದ್ದಾರೆ.

English summary
A 6-year-old girl who wrote a letter to Modi about the increase in Maggi and pencil prices has gone viral. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X