ಕಸ ಸುಟ್ಟಿದ್ದಕ್ಕಾಗಿ ಮಥುರಾದಲ್ಲಿ 16 ರೈತರ ಬಂಧನ

ಲಕ್ನೋ, ನವೆಂಬರ್ 20: ಉತ್ತರ ಪ್ರದೇಶ ಮಥುರಾ ಜಿಲ್ಲೆಯಲ್ಲಿ ಕಸ ಸುಟ್ಟಿದ್ದಕ್ಕಾಗಿ 16 ರೈತರನ್ನು ಬಂಧಿಸಲಾಗಿದ್ದು, ಕರ್ತವ್ಯ ಮರೆತ ಇಬ್ಬರು ಕಂದಾಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ (ಜಿಲ್ಲಾಧಿಕಾರಿ) ಸರ್ವಜ್ಞ ರಾಮ್ ಮಿಶ್ರಾ ಅವರು ಕಸ ಸುಟ್ಟ ತಪ್ಪಿತಸ್ಥ ರೈತರಿಗೆ ಒಟ್ಟು 13.05 ಲಕ್ಷ ರೂಪಾಯಿಗಳನ್ನು ತಹಶೀಲ್ದಾರ್ ಮೂಲಕ ದಂಡ ವಿಧಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 300 ಕಡೆ ಕಸ ಸುಡುವ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ, ರೈತರು ತಮ್ಮ ಬೆಳೆಯ ಅವಶೇಷಗಳನ್ನು ಸುಡುವುದನ್ನು ತಡೆಯಲು ವಿಫಲರಾದ ಕಾರಣ ಇಬ್ಬರು ಕಂದಾಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತೀಳಿಸಿದರು. ಕಸ ಸುಡುವುದನ್ನು ತಡೆಗಟ್ಟಲು ರೈತರಿಗೆ ಸಂಪೂರ್ಣ ಅವಕಾಶ ನೀಡಿದ್ದು, ಕಸ ಸುಟ್ಟವರು ಕಂಡುಬಂದಲ್ಲಿ ಅವರ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

16 Farmers Arrested In Mathura For Stubble Burning

ಕಿಸಾನ್ ಪಾಠಶಾಲಾಗಳ ಮೂಲಕ ಕಸ-ಕಡ್ಡಿ ಸುಡುವಿಕೆಯ ಅಪಾಯಕಾರಿ ಪರಿಣಾಮಗಳ ಬಗ್ಗೆ ಮತ್ತು ಅವುಗಳ ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ತಿಳಿಸಲಾಗಿದೆ. ಈ ಕಿಸಾನ್ ಪಾಠಶಾಲಾಗಳು ಕಸ ಸುಡುವ ಪ್ರಕರಣಗಳನ್ನು ಕಡಿಮೆ ಮಾಡಲು ಸಹಾಯ ಮಾಡಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕಳೆದ ವರ್ಷ ಉಪಗ್ರಹ ಚಿತ್ರಗಳನ್ನು ಬಳಸಿ 1,046 ಕಸ ಸುಡುವ ಪ್ರಕರಣಗಳನ್ನು ಗುರುತಿಸಿದ್ದೇವು, ಈ ವರ್ಷದಲ್ಲಿ 459 ಪ್ರಕರಣಗಳಿಗೆ ಇಳಿದಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+