ನೀರವ್ ಮೋದಿ ವಿರುದ್ಧ ಬಂಧನದ ವಾರೆಂಟ್
ಲಂಡನ್, ಮಾರ್ಚ್ 18 : ದೇಶಭ್ರಷ್ಟ ಉದ್ಯಮಿ, ಪಿಎನ್‌ಬಿ ವಂಚನೆ ಪ್ರಕರಣದ ರೂವಾರಿ ನೀರವ್ ಮೋದಿ ವಿರುದ್ಧ ಲಂಡನ್ ಕೋರ್ಟ್ ಬಂಧನದ ವಾರೆಂಟ್ ಹೊರಡಿಸಿದೆ. ಮಾ.25ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.
ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಜಾರಿ ನಿರ್ದೇಶನಾಲಯ ಕೋರಿಕೆಯನ್ನು ಸಲ್ಲಿಸಿದೆ. ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟೇಟ್ ಬಂಧನದ ವಾರೆಂಟ್ ಹೊರಡಿಸಿದ್ದು, ಸ್ಥಳೀಯ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಜಾರಿ ನಿರ್ದೇಶನಾಲಯ ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಮಾರ್ಚ್ ಮೊದಲ ವಾರದಲ್ಲಿ ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ಕೋರ್ಟ್ ಬಂಧನದ ವಾರೆಂಟ್ ಹೊರಡಿಸಿ, ಅರ್ಜಿ ವಿಚಾರಣೆ ಮುಂದೂಡಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಧಾನ ಆರೋಪಿ ನೀರವ್ ಮೋದಿ ಪ್ರಸ್ತುತ ಪಶ್ಚಿಮ ಲಂಡನ್‌ನ 80 ಲಕ್ಷ ಪೌಂಡ್ ಬೆಲೆಯ ಐಷಾರಾಮಿ ಬಂಗಲೆಯಲ್ಲಿ ವಾಸವಾಗಿದ್ದಾರೆ. ಭಾರತ ನೀರವ್ ಮೋದಿ ಗಡಿಪಾರಿಗೆ ಮನವಿ ಸಲ್ಲಿಸಿದೆ ಎಂದು ಯುಕೆಯ ಗೃಹ ಕಾರ್ಯದರ್ಶಿ ಸಾಜಿದ್ ಜಾವೇದ್ ಕೋರ್ಟ್‌ಗೆ ಹೇಳಿದ್ದಾರೆ.
ನೀರವ್ ಮೋದಿಗೆ ಸೇರಿದ ಮುಂಬೈನ ಕಿಹಿಮ್ ಬೀಚ್ ಬಳಿಯ 30 ಸಾವಿರ ಚದರ ಅಡಿಯ ಬೃಹತ್ ಬಂಗಲೆಯನ್ನು ಮಹಾರಾಷ್ಟ್ರದ ರಾಯಗಡ ಜಿಲ್ಲಾಡಳಿತ ನೆಲಸಮಗೊಳಿಸಿತ್ತು. ಈ ಬಂಗಲೆಯನ್ನು ನೀರವ್ ಮೋದಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದರು.












Click it and Unblock the Notifications