ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌: ಕೊರೊನಾ ಸೋಂಕಿತರಿಗೆ ಎರಡು ವಿಭಿನ್ನ ಲಸಿಕೆಗಳ ಪ್ರಯೋಗ

|
Google Oneindia Kannada News

ಲಂಡನ್,ಫೆಬ್ರವರಿ 04: ಬ್ರಿಟನ್‌ನಲ್ಲಿ ಕೊರೊನಾ ಸೋಂಕಿತರ ಮೇಲೆ ಎರಡು ವಿಭಿನ್ನ ಲಸಿಕೆಗಳನ್ನು ಪ್ರಯೋಗಿಸಲಾಗುತ್ತಿದೆ.

13 ತಿಂಗಳ ಅಧ್ಯಯನ ಸಂದರ್ಭದಲ್ಲಿ ವಿಭಿನ್ನ ಲಸಿಕೆಗಳು ಮತ್ತು ರೋಗಿಯ ಪ್ರತಿರೋಧಕ ಶಕ್ತಿಯ ಬಗ್ಗೆ ವಿಶ್ಲೇಷಣೆ ನಡೆಸಲಾಗುವುದು. ಪ್ರಾಥಮಿಕ ಹಂತದ ಫಲಿತಾಂಶವನ್ನು ಈ ವರ್ಷದ ಅಂತ್ಯಕ್ಕೆ ದೊರೆಯುವ ಹಾಗೆ ಮಾಡಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಕೊರೊನಾ ಪೀಡಿತರಲ್ಲಿ ಕಾಣಿಸಿಕೊಳ್ಳುತ್ತಿದೆ ಮತ್ತೊಂದು ಮಾದರಿಯ ಸೋಂಕು, ಎಷ್ಟು ಅಪಾಯಕಾರಿ ಗೊತ್ತೇ?ಕೊರೊನಾ ಪೀಡಿತರಲ್ಲಿ ಕಾಣಿಸಿಕೊಳ್ಳುತ್ತಿದೆ ಮತ್ತೊಂದು ಮಾದರಿಯ ಸೋಂಕು, ಎಷ್ಟು ಅಪಾಯಕಾರಿ ಗೊತ್ತೇ?

ಮೊದಲು ಅಥವಾ ಎರಡನೇ ಡೋಸ್ ನೀಡುವ ಸಂದರ್ಭದಲ್ಲಿ ವಿಭಿನ್ನ ಲಸಿಕೆಗಳನ್ನು ನೀಡಲಾಗುತ್ತದೆ. ಮೊದಲ ಡೋಸ್ ಅನ್ನು ಆಸ್ಟ್ರಾಜೆನೆಕಾ ನೀಡಿದರೆ ಎರಡನೇ ಡೋಸ್‌ಆಗಿ ಫೈಜರ್ ಲಸಿಕೆ ನೀಡಲಾಗುತ್ತದೆ ಹೀಗೆ ವಿಭಿನ್ನ ಲಸಿಕೆಗಳನ್ನು ನೀಡಲಾಗುತ್ತದೆ.

UK Begins World-First Alternate Dosing Covid-19 Vaccine Trial

ಸಂಪೂರ್ಣವಾಗಿ ಅಧ್ಯಯನ ನಡೆಸಿದ ಬಳಿಕ ಮತ್ತೊಂದು ಸಂಶೋಧಕರು ಹಾಗೂ ತಜ್ಞರು ಸುರಕ್ಷಿತವಾಗಿದೆ ಎಂದು ಅನುಮೋದನೆ ನೀಡಿದ ಬಳಿಕವೇ ಈ ರೀತಿಯ ಲಸಿಕೆಯ ಪ್ರಯೋಗಕ್ಕೆ ಒಪ್ಪಿಗೆ ನೀಡಲಾಗುವುದು ಎಂದು ಸಚಿವ ನಧಿಮ್ ಝಹಾವಿ ತಿಳಿಸಿದ್ದಾರೆ.

ಈ ಪ್ರಯೋಗಕ್ಕೆ ಸರ್ಕಾರವು 70 ಲಕ್ಷ ಪೌಂಡ್ ಅನುದಾನ ನೀಡಿದೆ. ಬ್ರಿಟನ್‌ನ ಎಂಟು ರಾಷ್ಟ್ರೀಯ ಆರೋಗ್ಯ ಸಂಶೋಧನಾ ಸಂಸ್ಥೆಗಳಲ್ಲಿ ಈ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗಿದೆ. ಒಂದೇ ಲಸಿಕೆಗಿಂತ ವಿಭಿನ್ನ ಲಸಿಕೆಗಳು ಕೊರೊನಾ ವೈರಸ್ ವಿರುದ್ಧ ಪ್ರತಿರೋಧಕ ಶಕ್ತಿ ಸೃಷ್ಟಿಸುವ ಈ ಪರಿಣಾಮಗಳನ್ನು ಪ್ರಯೋಗಗಳ ಮೂಲಕ ವಿಶ್ಲೇಷಿಸಲಾಗುತ್ತದೆ.

ಇದೊಂದು ಮಹತ್ವದ ಕ್ಲಿನಿಕಲ್ ಪ್ರಯೋಗವಾಗಿದೆ, ಲಸಿಕೆಯ ಸುರಕ್ಷತೆಯ ಬಗ್ಗೆಯೂ ಮಹತ್ವದ ಮಾಹಿತಿ ಲಭ್ಯವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

English summary
Health chiefs in the UK on Thursday began what they have described as a world-first clinical trial of patients who will receive different Covid-19 vaccines for their first or second dose, to detect its impact on immunity against coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X