Get Updates
Get notified of breaking news, exclusive insights, and must-see stories!

ಭಾರತೀಯರು ಹೆಚ್ಚಾಗಿ ಬ್ರಿಟನ್‌ನಲ್ಲಿ ಓದಲು ಬಯಸೋದ್ಯಾಕೆ? ಅಂಥದ್ದೇನು ವಿಶೇಷತೆ ಇದೆ ಯುಕೆಯಲ್ಲಿ?

ವಿಶ್ವಶ್ರೇಷ್ಠ ಶಿಕ್ಷಣ ಸಂಸ್ಥೆಗಳು ಈಗ ಭಾರತದಲ್ಲಿ ಬಹಳಷ್ಟಿವೆ. ಆದರೂ ವಿದೇಶಗಳಲ್ಲಿ ಓದಲು ಬಯಸುವ ಭಾರತೀಯರು ಕಡಿಮೆ ಇಲ್ಲ. ಅದಕ್ಕೆ ಕಾರಣವೂ ಇದೆ. ಪ್ರಪಂಚದ ಅತ್ಯಂತ ಶ್ರೇಷ್ಠ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿ ಅಮೆರಿಕ ಮತ್ತು ಬ್ರಿಟನ್‌ನಲ್ಲೇ ಇರುವುದು. ಜರ್ಮನಿ, ಜಪಾನ್, ಚೀನಾ, ನೆದರ್‌ಲೆಂಡ್ಸ್, ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮೊದಲಾದ ದೇಶಗಳಲ್ಲೂ ಭಾರತಿಯರು ಓದಲು ಹೋಗುತ್ತಾರೆ.

ಈ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಓದಲು ಬಯಸುವವರಲ್ಲಿ ಯಾವ ದೇಶದಲ್ಲಿ ಓದುವುದು ಸೂಕ್ತ ಎಂದು ನಿರ್ಧರಿಸುವಾಗ ಗೊಂದಲವಾಗಬಹುದು. ಬಹಳ ವಿದ್ಯಾರ್ಥಿಗಳು ತಮ್ಮ ನೆಂಟರಿಷ್ಟರು ಇರುವ ಮತ್ತು ಸ್ನೇಹಿತರು ಓದಲು ಹೋಗಿರುವ ದೇಶಗಳಲ್ಲಿ ಓದಲು ನಿರ್ಧರಿಸುತ್ತಾರೆ. ಆದರೆ, ಉತ್ತಮ ಶಿಕ್ಷಣ ವ್ಯವಸ್ಥೆ, ಗುಣಮಟ್ಟದ ವಿದ್ಯಾಭ್ಯಾಸ, ಗುಣಮಟ್ಟದ ಜೀವನ, ಸುರಕ್ಷಿತ ವಾತಾವರಣ ಇತ್ಯಾದಿ ಅನೇಕ ಅಂಶಗಳು ಪ್ರಮುಖ ಮಾನದಂಡವಾಗಬೇಕು. ಈ ವಿಚಾರದಲ್ಲಿ ಬ್ರಿಟನ್ ದೇಶ ಬಹಳ ಮಂದಿಗೆ ಫೇವರಿಟ್ ಎನಿಸಿದೆ.

ಬ್ರಿಟನ್ ದೇಶದಲ್ಲಿ ಬಹಳ ಹಳೆಯ ಹಾಗೂ ಉತ್ಕೃಷ್ಟ ಎನಿಸಿರುವ ಶಿಕ್ಷಣ ಸಂಸ್ಥೆಗಳು ಇವೆ. ಇಲ್ಲಿ ಕಲಿತ ವಿದ್ಯಾರ್ಥಿಗೆ ಉದ್ಯೋಗದಲ್ಲಿ ಹೆಚ್ಚು ಪ್ರಾಶಸ್ತ್ಯ ಸಹಜವಾಗಿ ಸಿಗುತ್ತದೆ. ಭಾರತೀಯ ವಿದ್ಯಾರ್ಥಿಗಳಿಗೂ ಬ್ರಿಟನ್ ಹೆಚ್ಚು ಪ್ರಾಶಸ್ತ್ಯ ನೀಡುತ್ತದೆ. ಸ್ಟಡಿ ವೀಸಾಗೆ ಅರ್ಜಿ ಸಲ್ಲಿಸುವ ಭಾರತೀಯರ ವಿದ್ಯಾರ್ಥಿಗಳ ಪೈಕಿ ಶೇ. 96 ರಷ್ಟು ಮಂದಿಗೆ ಬ್ರಿಟನ್ ಅನುಮೋದನೆ ಕೊಡುತ್ತದೆ.

ಹೀಗಾಗಿ, ಬ್ರಿಟನ್ ದೇಶಕ್ಕೆ ಓದಲು ಮುಗಿಬೀಳುವ ಭಾರತೀಯರ ಸಂಖ್ಯೆ ಹೆಚ್ಚೇ ಇರುತ್ತದೆ. ಬ್ರಿಟನ್ ದೇಶಕ್ಕೆ ಓದಲು ಭಾರತೀಯರು ಹೋಗುವುದು ಸುಲಭವಾಗಿ ವೀಸಾ ಸಿಗುತ್ತದೆ ಎಂಬ ಕಾರಣವೊಂದಕ್ಕೇ ಅಲ್ಲ, ಇನ್ನೂ ಅನೇಕ ವಿಚಾರದಲ್ಲಿ ಬ್ರಿಟನ್ ವಿದ್ಯಾಭ್ಯಾಸಕ್ಕೆ ಆಕರ್ಷಕ ಸ್ಥಳ ಎನಿಸಿದೆ.

ಬ್ರಿಟನ್ ಯಾಕೆ ಬೇಕು?

ಬ್ರಿಟನ್ ಯಾಕೆ ಬೇಕು?

ಇತರ ಕೆಲ ಪ್ರಮುಖ ದೇಶಗಳಿಗೆ ಹೋಲಿಸಿದರೆ ಬ್ರಿಟನ್‌ನಲ್ಲಿ ವಿದ್ಯಾಭ್ಯಾಸ ವೆಚ್ಚ ಸರಾಸರಿಯಾಗಿ ತುಸು ಕಡಿಮೆಯೇ. ಅಲ್ಲದೇ ಬ್ರಿಟನ್‌ನಲ್ಲಿ ಮಾಸ್ಟರ್ಸ್ ಪದವಿಗೆ ಬಹಳ ಆಯ್ಕೆಗಳಿವೆ. ಉತ್ತಮ ಗುಣಮಟ್ಟದಲ್ಲಿ ಇರುವ ಫಾಸ್ಟ್ ಟ್ರ್ಯಾಕ್ ಕೋರ್ಸ್‌ಗಳು ಬ್ರಿಟನ್ ಶಿಕ್ಷಣ ಕ್ಷೇತ್ರದ ಹೈಲೈಟ್.ಬೇರೆ ದೇಶಗಳಲ್ಲಿ ಮಾಸ್ಟರ್ಸ್ ಪದವಿ ಮಾಡಲು ಸುಮಾರು 2 ವರ್ಷ ತಗುಲುತ್ತದೆ. ಆದರೆ, ಬ್ರಿಟನ್‌ನಲ್ಲಿ ಒಂದೇ ವರ್ಷದಲ್ಲಿ ಅದೇ ಕೋರ್ಸ್ ಪೂರೈಸಬಹುದು.

ಇದರಿಂದ ವಿದ್ಯಾರ್ಥಿಗೆ ಕೋರ್ಸ್ ವೆಚ್ಚ ತಗ್ಗುವುದಲ್ಲದೇ ಬೇಗ ಉದ್ಯೋಗ ಮಾರುಕಟ್ಟೆಗೆ ಧುಮುಕಬಹುದು.

ಬ್ರಿಟನ್‌ನಲ್ಲಿ ಸಾಮಾನ್ಯವಾಗಿ ಪದವಿ ಕೋರ್ಸ್‌ಗಳು 3-4 ವರ್ಷ ಆಗುತ್ತವೆ. ಆದರೆ, ಒಂದು ಅಥವಾ ಎರಡು ವರ್ಷಗಳಲ್ಲೂ ಈ ಕೋರ್ಸ್‌ಗಳನ್ನು ನೀಡುವ ಶಿಕ್ಷಣ ಸಂಸ್ಥೆಗಳು ಬ್ರಿಟನ್‌ನಲ್ಲಿ ಇವೆ. ಹೀಗಾಗಿ ಬ್ರಿಟನ್‌ನಲ್ಲಿ ಬಹಳ ಬೇಗ ಶಿಕ್ಷಣ ಪೂರೈಸಿ ವೃತ್ತಿಜೀವನ ಆರಂಭಿಸುವ ಅವಕಾಶ ಹೆಚ್ಚಿರುತ್ತದೆ.

ಬ್ರಿಟನ್ ಸಂಸ್ಕೃತಿ

ಬ್ರಿಟನ್ ಸಂಸ್ಕೃತಿ

ಯಾವುದೇ ದೇಶವಾದರೂ ವಿದೇಶಿಯರನ್ನು ಓದಲು ಆಕರ್ಷಿಸಬೇಕಾದರೆ ವಾತಾವರಣ ಬಹಳ ಮುಖ್ಯ. ಇಲ್ಲಿ ವಾತಾವರಣ ಎಂದರೆ ಪರಿಸರ, ಹವಾಗುಣದ್ದು ಮಾತ್ರವಲ್ಲ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪರಿಸರದ ಅಂಶಗಳೂ ಇರುತ್ತವೆ. ವಿಶ್ವಾದ್ಯಂತ ವಿವಿಧ ಪ್ರದೇಶಗಳಲ್ಲಿ ವಿಭಿನ್ನವಾದ ಸಂಸ್ಕೃತಿಗಳಿವೆ. ಅಮೆರಿಕ ಮತ್ತು ಬ್ರಿಟನ್‌ಗೆ ಹೋದರೆ ಅಲ್ಲಿ ಬಹುತೇಕ ಎಲ್ಲಾ ರೀತಿಯ ಸಂಸ್ಕೃತಿಗಳನ್ನು ನಾವು ಕಾಣಬಹುದು. ಅದರಲ್ಲೂ ಬ್ರಿಟನ್ ದೇಶ ಬಹಳ ಮುಕ್ತವಾಗಿ ವಿವಿಧ ಸಂಸ್ಕೃತಿಗಳನ್ನು ಸೆಳೆಯುತ್ತದೆ.

ಬೆಂಗಳೂರು ನಗರದ ರೀತಿಯಲ್ಲಿ ಬ್ರಿಟನ್ ದೇಶ ಪಕ್ಕಾ ಕಾಸ್ಮೊಪೊಲಿಟನ್ ದೇಶವಾಗಿದೆ. ಭಾರತೀಯ ಸಮುದಾಯದವರು ಬಹಳ ಸಂಖ್ಯೆಯಲ್ಲಿ ಅಲ್ಲಿದ್ದಾರೆ. ಹೀಗಾಗಿ, ಭಾರತೀಯರಿಗೆ ಬ್ರಿಟನ್‌ನಲ್ಲಿ ಹೊಂದಿಕೊಳ್ಳುವುದು ಕಷ್ಟದ ವಿಷಯವೇನಲ್ಲ. ಅಷ್ಟೇ ಅಲ್ಲ, ಸ್ಥಳೀಯ ಜನರೂ ಕೂಡ ಭಾರತೀಯರೆಂದರೆ ವಿಶೇಷ ಸ್ನೇಹ ತೋರುತ್ತಾರೆ.

ಅಗ್ರಮಾನ್ಯ ಶಿಕ್ಷಣ ಸಂಸ್ಥೆಗಳ ಜನಪ್ರಿಯ ಕೋರ್ಸ್‌ಗಳು

ಅಗ್ರಮಾನ್ಯ ಶಿಕ್ಷಣ ಸಂಸ್ಥೆಗಳ ಜನಪ್ರಿಯ ಕೋರ್ಸ್‌ಗಳು

ಬ್ರಿಟನ್ ದೇಶದಲ್ಲಿ ಹಲವು ಪ್ರಮುಖ ಶಿಕ್ಷಣ ಸಂಸ್ಥೆಗಳಿವೆ. ಆದರೆ, ಕೆಲ ಶಿಕ್ಷಣ ಸಂಸ್ಥೆಗಳಲ್ಲಿನ ನಿರ್ದಿಷ್ಟ ಕೋರ್ಸ್‌ಗಳು ಬಹಳ ಜನಪ್ರಿಯವೆನಿಸುತ್ತವೆ. ಉದಾಹರಣೆಗೆ, ಎಡಿನ್‌ಬರ್ಗ್ ಯೂನಿವರ್ಸಿಟಿಯಲ್ಲಿರುವ ಸ್ಪೇಸ್ ಸೈನ್ಸ್ ಕೋರ್ಸ್ ಬಹಳ ಪ್ರತಿಷ್ಠಿತ ಎನಿಸಿದೆ. ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಮಾಡುವುದು ಹೆಮ್ಮೆಯ ಸಂಗತಿ. ಹೀಗೆ ಇಂಥ ಶಿಕ್ಷಣ ಸಂಸ್ಥೆಗಳು ಹಾಗೂ ಅವುಗಳ ಕೆಲ ಜನಪ್ರಿಯ ಕೋರ್ಸ್‌ಗಳ ವಿವರ ಇಲ್ಲಿದೆ:

1) ಆಕ್ಸ್‌ಫರ್ಡ್ ಯೂನಿವರ್ಸಿಟಿ: ಆರ್ಟ್ಸ್ ಅಂಡ್ ಹ್ಯೂಮಾನಿಟೀಸ್, ಲೈಫ್ ಸೈನ್ಸಸ್ ಅಂಡ್ ಮೆಡಿಸಿನ್, ಸೋಷಿಯಲ್ ಸೈನ್ಸಸ್ ಅಂಡ್ ಮ್ಯಾನೇಜ್ಮೆಂಟ್, ನ್ಯಾಚುರಲ್ ಸೈನ್ಸಸ್, ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ.

2) ಕೇಂಬ್ರಿಡ್ಜ್ ಯೂನಿವರ್ಸಿಟಿ: ಆರ್ಟ್ಸ್ ಅಂಡ್ ಹ್ಯೂಮಾನಿಟೀಸ್, ಲೈಫ್ ಸೈನ್ಸಸ್ ಅಂಡ್ ಮೆಡಿಸಿನ್, ಸೋಷಿಯಲ್ ಸೈನ್ಸಸ್ ಅಂಡ್ ಮ್ಯಾನೇಜ್ಮೆಂಟ್, ನ್ಯಾಚುರಲ್ ಸೈನ್ಸಸ್, ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ.

3) ಇಂಪೀರಿಯಲ್ ಕಾಲೇಜು, ಲಂಡನ್: ಸೈನ್ಸ್, ಎಂಜಿನಿಯರಿಂಗ್, ಬಿಸಿನೆಸ್, ಮೆಡಿಸಿನ್.

4) ಲಂಡನ್ ಯೂನಿವರ್ಸಿಟಿ ಕಾಲೇಜು: ಎಜುಕೇಶನ್, ಆರ್ಕಿಟೆಕ್ಚರ್, ಆರ್ಕಿಯಾಲಜಿ, ಆಂಥ್ರೊಪಾಲಜಿ, ಲೈಫ್ ಸೈನ್ಸಸ್, ಮೆಡಿಸಿನ್, ಡೆಂಟಿಸ್ಟ್ರಿ.

5) ಎಡಿನ್‌ಬರ್ಗ್ ಯೂನಿವರ್ಸಿಟಿ: ಆರ್ಟ್ಸ್ ಅಂಡ್ ಹ್ಯೂಮಾನಿಟೀಸ್, ಮೆಡಿಸಿನ್, ವೆಟೆರಿನರಿ ಮೆಡಿಸಿನ್, ಬಿಸಿನೆಸ್, ಎಂಜಿನಿಯರಿಂಗ್, ಸ್ಪೇಸ್ ಸೈನ್ಸ್.

ಸ್ಕಾಲರ್‌ಶಿಪ್, ಉದ್ಯೋಗಾವಕಾಶ ಇತ್ಯಾದಿ

ಸ್ಕಾಲರ್‌ಶಿಪ್, ಉದ್ಯೋಗಾವಕಾಶ ಇತ್ಯಾದಿ

ಭಾರತಕ್ಕೆ ಹೋಲಿಸಿದರೆ ಬ್ರಿಟನ್‌ನಲ್ಲಿ ವಿದ್ಯಾಭ್ಯಾಸ ಸ್ವಲ್ಪ ದುಬಾರಿ ಎನಿಸಬಹುದು. ಆದರೆ, ಈ ವೆಚ್ಚವನ್ನು ಭವಿಷ್ಯದ ದೃಷ್ಟಿಯಿಂದ ಯೋಚಿಸುವುದು ಉತ್ತಮ. ಹಾಗೆಯೇ, ವಿವಿಧ ರೀತಿಯ ಸ್ಕಾಲರ್‌ಶಿಪ್‌ಗಳು ಸಿಗುತ್ತವೆ. ಬ್ರಿಟಿಷ್ ಕೌನ್ಸಿಲ್ ವೆಬ್‌ಸೈಟ್‌ನಲ್ಲಿ ನಿಮಗೆ ಹಲವು ರೀತಿಯ ಸ್ಕಾಲರ್ಶಿಪ್ ಮಾಹಿತಿ ಸಿಗುತ್ತದೆ.

ವಿದ್ಯಾಭ್ಯಾಸದ ಬಳಿಕ ಬ್ರಿಟನ್‌ನಲ್ಲೇ ಮೊದಲ ಉದ್ಯೋಗ ಹುಡುಕುವ ಅವಕಾಶ ಇರುತ್ತದೆ. ವಿದ್ಯಾಭ್ಯಾಸವಾಗಿ ಎರಡು ವರ್ಷಗಳವರೆಗೆ ಬ್ರಿಟನ್‌ನಲ್ಲಿ ಉಳಿದುಕೊಂಡು ಕೆಲಸ ಹುಡುಕಲು ಅನುಮತಿ ಇರುತ್ತದೆ. ಅದಕ್ಕಾಗಿ ಪದವಿ ಅಥವಾ ಸ್ನಾತಕೋತ್ತರ ಪದವಿ ಬಳಿಕ ಅರ್ಜಿ ಸಲ್ಲಿಸಬೇಕು. ಇಂಥ ವೀಸಾ ಎರಡು ವರ್ಷ ಮಾತ್ರ ಇರುತ್ತದೆ. ಅದನ್ನು ಮೀರಿ ಅಲ್ಲಿ ನೆಲಸಲು ಬರುವುದಿಲ್ಲ.

ಒಂದು ವೇಳೆ ನೀವು ಎರಡು ವರ್ಷದೊಳಗೆ ಕೆಲಸ ಪಡೆದರೆ ವರ್ಕ್ ವೀಸಾ ಅಡಿಯಲ್ಲಿ ಬ್ರಿಟನ್‌ನಲ್ಲಿ ನೆಲಸುವುದನ್ನು ಮುಂದುವರಿಸಬಹುದು. ಹೀಗೆ ನೀವು ಬ್ರಿಟನ್‌ನಲ್ಲಿ ಕನಿಷ್ಠ 5 ವರ್ಷ ನೆಲಸಿದ್ದರೆ ಅನಿರ್ದಿಷ್ಟಾವಧಿಯವರೆಗೆ ಪಿಆರ್ ವೀಸಾ ಸೌಲಭ್ಯ ಪಡೆಯಬಹುದು. ಅಂದರೆ ನಿಮಿಷ್ಟ ಬಂದಷ್ಟು ದಿನ ಬ್ರಿಟನ್‌ನಲ್ಲಿ ವಾಸಿಸಬಹುದು. ಹಾಗೆಯೇ, ಅಲ್ಲಿನ ಪೌರತ್ವ ಪಡೆಯಲೂ ಅವಕಾಶ ಇರುತ್ತದೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+