• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಂಡನ್ನಿನಲ್ಲಿ ಭಾರತೀಯ ಮೂಲದ ಗರ್ಭಿಣಿ ಹತ್ಯೆ,ಪವಾಡದಂತೆ ಬದುಕಿದ ಶಿಶು!

|

ಲಂಡನ್, ನವೆಂಬರ್ 14: ಭಾರತೀಯ ಮೂಲದ ತುಂಬು ಗರ್ಭಿಣಿಯೊಬ್ಬರನ್ನು ಆಕೆಯ ಮಾಜಿ ಪ್ರೇಮಿ ಎಂದು ಶಂಕಿಸಲಾದ ವ್ಯಕ್ತಿಯೊಬ್ಬ ಬಾಣ ಹೊಡೆದು ಕೊಂದ ಹೃದಯವಿದ್ರಾವಕ ಘಟನೆ ಲಂಡನ್ನಿನಲ್ಲಿ ನಡೆದಿದೆ.

ಅದೃಷ್ಟವಶಾತ್, ಪವಾಡ ಎಂಬಂತೆ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಶಿಶು ಬದುಕುಳಿದಿದೆ! ಸೋಮವಾರ ಸಂಜೆ ಪೂರ್ವ ಲಂಡನ್ನಿನ ಐಫೋರ್ಡ್ ಪ್ರದೇಶದಲ್ಲಿ ದೇವಿ ಉನ್ಮತ್ತಾಲೆಗಡೂ ಎಂಬ ಭಾರತೀಯ ಮೂಲದ ಯುವತಿ ಇಮ್ತಿಯಾಜ್ ಎಂಬುವವರನ್ನು ಮದುವೆಯಾಗಿ ಸನಾ ಮೊಹಮ್ಮದ್ ಎಂದು ಹೆಸರು ಬದಲಿಸಿಕೊಂಡಿದ್ದರು.

ನೋಡುಗರ ಮನ ಕಲಕುವಂತಿತ್ತು ತಾಯಿಯ ಜೊತೆ ಸಾವಿಗೆ ಶರಣಾದ ಕಂದಮ್ಮನ ದೃಶ್ಯ

ಅವರಿಗೆ ಐವರು ಮಕ್ಕಳಿದ್ದರು. ಈ ಐವರು ಮಕ್ಕಳು ಮತ್ತು ಪತಿ ಇಮ್ತಿಯಾಜ್ ಎದುರಲ್ಲೇ ರಾಮಾನೊಡ್ಗೆ ಉನ್ಮತ್ತಾಲೆಗಡೂ ಎಂಬ ವ್ಯಕ್ತಿ ಸನಾ ಅವರ ಮೇಲೆ ಬಾಣ ಪ್ರಯೋಗಿಸಿದ್ದಾರೆ. ಅವರು ಪ್ರಯೋಗಿಸಿದ ಬಾಣ ನೇರವಾಗಿ ಸನಾ ಅವರ ಹೃದಯ ಭಾಗಕ್ಕೆ ಬಿದ್ದಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಆದರೆ ಆಕೆಯ ಹೊಟ್ಟೆಯಲ್ಲಿದ್ದ ಶಿಶುವನ್ನು ತುರ್ತು ಸಿಸೆರಿಯನ್ ಮೂಲಕ ಬದುಕಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ರಾತ್ರೋ ರಾತ್ರಿ ಪುಟ್ಟ ಕಂದಮ್ಮಗಳನ್ನು ಹೂತುಹಾಕಿದ ಡ್ರೈವರ್

ಸನಾ ಅವರಿಗೆ ಚುಚ್ಚಿದ್ದ ಬಾಣವನ್ನು ತೆಗೆದರೆ ತೀವ್ರ ರಕ್ತಸ್ರಾವ ಉಂಟಾಗಿ, ಮಗುವೂ ಸಾಯುವ ಸಾಧ್ಯತೆ ಇದ್ದ ಕಾರಣ, ಆ ಬಾಣವನ್ನು ಹಾಗೆಯೇ ಇಟ್ಟು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮಗುವನ್ನು ಬದುಕಿಸಿದ್ದಾರೆ.

ಬಾಡಿಗೆ ತಾಯಿಯೂ ಇಲ್ಲ, ಮಗುವೂ ಇಲ್ಲ, ಹೀಗೊಂದು ವಿಚಿತ್ರ ಘಟನೆ

ಆರೋಪಿ ರಾಮಾನೊಡ್ಗೆ ಉನ್ಮತ್ತಾಲೆಗಡೂ ಸನಾ ಅವರ ಮಾಜಿ ಪ್ರಿಯತಮನಾಗಿದ್ದ ಎನ್ನಲಾಗುತ್ತಿದ್ದು, ಆತನನ್ನು ಪೊಲಿಸರು ಬಂಧಿಸಿದ್ದಾರೆ. ಘತನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

English summary
A pregnant Indian-origin woman has been killed after an arrow pierced through her abdomen in a crossbow attack in London.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X