ಮಹಾಮಾರಿ ಕೋವಿಡ್-19 ತಡೆಗಟ್ಟಲು ವಿಟಮಿನ್-ಡಿ ಸಹಕಾರಿಯೇ.?

ಲಂಡನ್, ಮೇ 25: ಮಾರಣಾಂತಿಕ ಕೋವಿಡ್-19 ವಿರುದ್ಧ ಹೋರಾಡಲು ವಿಟಮಿನ್-ಡಿ ಅತ್ಯಗತ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಕೋವಿಡ್-19 ರೋಗವನ್ನು ತಡೆಗಟ್ಟಲು ವಿಟಮಿನ್-ಡಿ ಪರಿಣಾಮಕಾರಿಯೇ.? ಎಂಬ ಪ್ರಶ್ನೆಗೆ ಉತ್ತರ ಕೊಡಲು ವೈಜ್ಞಾನಿಕ ಪುರಾವೆ ಇನ್ನೂ ಲಭ್ಯವಾಗಿಲ್ಲ.

Recommended Video

      ಕುರಿ ಕಳೆದುಕೊಂಡ ಕುಟುಂಬಕ್ಕೆ 50 ಸಾವಿರ ಕೊಟ್ಟ ಕಾಂಗ್ರೆಸ್ ನಾಯಕ | Chitradurga | Oneindia Kannada

      ಆದರೆ ಒಂದಂತೂ ಸತ್ಯ, ಅತಿಯಾದ ವಿಟಮಿನ್-ಡಿ ಸೇವನೆಯಿಂದ ದೇಹಕ್ಕೆ ಸಹಕಾರಿಯಾಗುವುದಿಲ್ಲ. ಬದಲಾಗಿ ಮಾರಕವಾಗುವುದು ಖಂಡಿತ.!

      'ಕೋವಿಡ್-19 ರಿಸ್ಕ್ ನಿಂದ ಬಚಾವ್ ಆಗಲು ವಿಟಮಿನ್-ಡಿ ಸಾಕು' ಎಂಬ ವರದಿಗಳು ಪ್ರಕಟವಾಗುತ್ತಿದ್ದಂತೆಯೇ, ''ಅತಿಯಾಗಿ ವಿಟಮಿನ್-ಡಿ ಸಪ್ಲಿಮೆಂಟ್ಸ್ ಸೇವಿಸಬೇಡಿ'' ಎಂದು ವಿಜ್ಞಾನಿಗಳು ಎಚ್ಚರಿಕೆ ಕೊಟ್ಟಿದ್ದಾರೆ.

      ಯಾವುದೇ ಪುರಾವೆ ಇಲ್ಲ

      ಯಾವುದೇ ಪುರಾವೆ ಇಲ್ಲ

      ''ಕೋವಿಡ್-19 ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ವಿಟಮಿನ್-ಡಿ ಸಹಕಾರಿ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಹೀಗಾಗಿ, ಅತಿಯಾಗಿ ವಿಟಮಿನ್-ಡಿ ಸಪ್ಲಿಮೆಂಟ್ಸ್ ಸೇವಿಸಬೇಡಿ. ಹೈ ಡೋಸೇಜ್ ನಿಂದ ದೇಹಕ್ಕೆ ಹಾನಿಕಾರಕ'' ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

      ''ದೃಢಪಟ್ಟ ವೈಜ್ಞಾನಿಕ ಪುರಾವೆಗಳು ದೊರೆಯುವವರೆಗೆ, ಅತಿಯಾಗಿ (ಹೆಚ್ಚು ಡೋಸೇಜ್) ವಿಟಮಿನ್-ಡಿ ಸಪ್ಲಿಮೆಂಟ್ಸ್ ಸೇವಿಸಬೇಡಿ'' ಎಂದು ಬಿ.ಎಂ.ಜೆ ನ್ಯೂಟ್ರಿಷನ್, ಪ್ರಿವೆನ್ಷನ್ ಅಂಡ್ ಹೆಲ್ತ್ ಎಂಬ ಜರ್ನಲ್ ನಲ್ಲಿ ಪ್ರಕಟವಾದ ವರದಿಯಲ್ಲಿ ವಿಜ್ಞಾನಿಗಳು ಉಲ್ಲೇಖಿಸಿದ್ದಾರೆ.

      ವಿಟಮಿನ್-ಡಿ ಅತ್ಯಗತ್ಯ ಏಕೆ.?

      ವಿಟಮಿನ್-ಡಿ ಅತ್ಯಗತ್ಯ ಏಕೆ.?

      ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಚರ್ಮದಲ್ಲಿ ವಿಟಮಿನ್-ಡಿ ಉತ್ಪತ್ತಿಯಾಗುತ್ತದೆ. ವಿಟಮಿನ್-ಡಿ ಇಂದ ದೇಹದಲ್ಲಿ ಕ್ಯಾಲ್ಸಿಯಮ್ ಮತ್ತು ಫಾಸ್ಪೇಟ್ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಮೂಳೆಗಳು, ಹಲ್ಲುಗಳು ಮತ್ತು ಸ್ನಾಯುಗಳು ಆರೋಗ್ಯವಾಗಿರಲು ವಿಟಮಿನ್-ಡಿ ಅತ್ಯಗತ್ಯ.

      ವಿಟಮಿನ್-ಡಿ ಅತಿಯಾದರೆ.?

      ವಿಟಮಿನ್-ಡಿ ಅತಿಯಾದರೆ.?

      ''ಮನುಷ್ಯ ಆರೋಗ್ಯವಾಗಿರಲು ದೇಹದಲ್ಲಿ ನಿರ್ದಿಷ್ಟ ಪ್ರಮಾಣದ ವಿಟಮಿನ್-ಡಿ ಇರಲೇಬೇಕು. ಒಂದು ವೇಳೆ ವಿಟಮಿನ್-ಡಿ ನಿರ್ದಿಷ್ಟ ಪ್ರಮಾಣಕ್ಕಿಂತ ಕಡಿಮೆಯಿದ್ದರೆ, ರಿಕೆಟ್ಸ್ ಮತ್ತು ಆಸ್ಟಿಯೋಪೊರೋಸಿಸ್ ಸಮಸ್ಯೆ ಉಂಟಾಗುತ್ತದೆ. ದೇಹದಲ್ಲಿ ಅಪ್ಪಿ-ತಪ್ಪಿ ವಿಟಮಿನ್-ಡಿ ಅಂಶ ಅತಿಯಾದರೂ ಸಮಸ್ಯೆ ತಪ್ಪಿದ್ದಲ್ಲ. ವಿಟಮಿನ್-ಡಿ ಹೆಚ್ಚಾದರೆ, ರಕ್ತದಲ್ಲಿ ಕ್ಯಾಲ್ಸಿಯಮ್ ಮಟ್ಟ ಮಿತಿಮೀರುತ್ತದೆ. ಇದರಿಂದ ಜೀವಕ್ಕೆ ಹಾನಿ ಕಟ್ಟಿಟ್ಟಬುತ್ತಿ'' ಎಂದು ಯು.ಕೆನಲ್ಲಿನ ಸರ್ರೆ ವಿಶ್ವವಿದ್ಯಾನಿಲಯದ ಸ್ಯೂ ಲನ್ಹಾಮ್ ಹೇಳಿದ್ದಾರೆ.

      ವೈದ್ಯರ ಮಾರ್ಗದರ್ಶನ ಮುಖ್ಯ

      ವೈದ್ಯರ ಮಾರ್ಗದರ್ಶನ ಮುಖ್ಯ

      ''ದೇಹಕ್ಕೆ ಹೆಚ್ಚಿನ ವಿಟಮಿನ್-ಡಿ ಸಿಗುವುದು ಸೂರ್ಯನ ಬೆಳಕಿನಿಂದ. ಆದರೆ ಲಾಕ್ ಡೌನ್ ನಿಂದಾಗಿ ನ್ಯಾಚುರಲ್ ಆಗಿ ವಿಟಮಿನ್-ಡಿ ಪಡೆಯುವುದು ಸವಾಲಾಗಿರಬಹುದು. ಹೀಗಾಗಿ, ವಿಟಮಿನ್-ಡಿ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಹುದು. ಆದರೆ, ಅದಕ್ಕೂ ಮುನ್ನ ವೈದ್ಯರ ಮಾರ್ಗದರ್ಶನ ಮುಖ್ಯ'' ಎಂದು ಬರ್ಮಿಂಗ್ ಹ್ಯಾಮ್ ಯೂನಿವರ್ಸಿಟಿಯ ವಿಜ್ಞಾನಿ ಕ್ಯಾರೋಲಿನ್ ಗ್ರೇಗ್ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+