ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿ ಪಟೇಲ್ ಕೈಲಿ ಅಸ್ಸಾಂಜೆ ಭವಿಷ್ಯ, ಆಸೀಸ್ ನೆರವು ದಕ್ಕಲಿಲ್ಲ

|
Google Oneindia Kannada News

ಲಂಡನ್ , ಏಪ್ರಿಲ್ 21: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ಯುನೈಟೆಡ್ ಸ್ಟೇಟ್ಸ್‌ಗೆ ಹಸ್ತಾಂತರಿಸುವುದನ್ನು ಆಸ್ಟ್ರೇಲಿಯಾ ಪ್ರಶ್ನಿಸುವುದಿಲ್ಲ ಮತ್ತು ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸ ಹೊಂದಿದೆ ಎಂದು ಸರ್ಕಾರದ ಹಿರಿಯ ಸಚಿವರು ಗುರುವಾರ ಹೇಳಿದ್ದಾರೆ. ಹೀಗಾಗಿ, ಈಗ ಅಸ್ಸಾಂಜೆ ಪರ ವಕೀಲರು ಕಾನೂನು ಹೋರಾಟ ಮುಂದುವರೆಸಲು ಯೋಜಿಸಿದ್ದಾರೆ. ಆದರೆ, ಕಳೆದ ತಿಂಗಳು ಸುಪ್ರೀಂಕೋರ್ಟ್ ಮೇಲ್ಮನವಿ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಅಸ್ಸಾಂಜೆಗೆ ಹಿನ್ನಡೆಯಾಗಲಿದೆ. ಒಂದು ವೇಳೆ ಅಮೆರಿಕದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದರೆ 175 ವರ್ಷಗಳ ಕಾಲದ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

"ಬ್ರಿಟಿಷ್ ನ್ಯಾಯ ವ್ಯವಸ್ಥೆಯ ಸ್ವಾತಂತ್ರ್ಯ ಮತ್ತು ಸಮಗ್ರತೆಯ ಬಗ್ಗೆ ನಮಗೆ ವಿಶ್ವಾಸವಿದೆ" ಎಂದು ಆಸ್ಟ್ರೇಲಿಯಾದ ಸೆನೆಟರ್ ಸೈಮನ್ ಬರ್ಮಿಂಗ್ಹ್ಯಾಮ್ ರಾಷ್ಟ್ರೀಯ ಪ್ರಸಾರಕ ಎಬಿಸಿಗೆ ಗುರುವಾರ ತಿಳಿಸಿದರು.

ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆಯನ್ನು ಅಮೆರಿಕಕ್ಕೆ ಗಡಿಪಾರು ಮಾಡಲು ಬ್ರಿಟನ್ ನ್ಯಾಯಾಲಯ ಆದೇಶ ಹೊರಡಿಸಿದೆ.ಆಂತರಿಕ ವ್ಯವಹಾರ ಖಾತೆ ಸಚಿವೆ(Home Secretary) ಪ್ರೀತಿ ಪಟೇಲ್ ಗಡಿಪಾರು ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಗಡಿಪಾರಿಗೆ ಅನುಮೋದನೆ ನೀಡಿದರೆ, ಅಸ್ಸಾಂಜೆ ಪರ ವಕೀಲರು ನ್ಯಾಯಾಲಯದಲ್ಲಿ ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಬ್ರಿಟಿಷ್ ನ್ಯಾಯಾಲಯದ ಆದೇಶದ ನಂತರ, ಅಸ್ಸಾಂಜೆಯ ವಕೀಲರು ಬ್ರಿಟನ್‌ನ ಆಂತರಿಕ ಸಚಿವ ಪ್ರೀತಿ ಪಟೇಲ್‌ಗೆ ಅರ್ಜಿ ಸಲ್ಲಿಸಲು ಮೇ 18 ರವರೆಗೆ ಕಾಲಾವಕಾಶವಿದೆ.

British Home Secretary Priti Patel will now decide WikiLeaks founder Julian Assange extradition

ಇರಾಕ್ ಮತ್ತು ಅಘ್ಫಾನಿಸ್ತಾನದ ಯುದ್ಧಗಳಿಗೆ ಸಂಬಂಧಿಸಿದಂತೆ ರಹಸ್ಯ ಕಡತಗಳನ್ನು ಬಹಿರಂಗಪಡಿಸಿದ ಪ್ರಕರಣದ ವಿಚಾರಣೆಗಾಗಿ ಜೂಲಿಯನ್ ಅಸ್ಸಾಂಜೆ ಅಮೆರಿಕದಲ್ಲಿ ವಿಚಾರಣೆ ಎದುರಿಸಬೇಕಿದೆ. ಅಮೆರಿಕ ಬೇಹುಗಾರಿಕೆ ಕಾನೂನಿನ ಉಲ್ಲಂಘನೆ ಸೇರಿದಂತೆ 18 ಪ್ರಕರಣಗಳನ್ನು ಅಸ್ಸಾಂಜೆ ವಿರುದ್ಧ ದಾಖಲು ಮಾಡಲಾಗಿದೆ.

ಆಸ್ಟ್ರೇಲಿಯಾ ಮೂಲದ ಜೂಲಿಯನ್ ಅಸಾಂಜೆ 2012ರಲ್ಲಿ ಸ್ವೀಡನ್ ಗೆ ಹಸ್ತಾಂತರವಾಗುವ ಭಯದಿಂದ ಈಕ್ವೆಡಾರ್ ರಾಯಭಾರಿ ಕಚೇರಿ ಪ್ರವೇಶಿಸಿ ಆಶ್ರಯ ಪಡೆದಿದ್ದರು. ಅವರ ಮೇಲೆ ಸ್ವೀಡನ್ನಿನಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಆದರೆ ಅಸಾಂಜೆಗೆ ಸ್ವೀಡನ್ ಗಿಂತ ಹೆಚ್ಚಾಗಿ ಅಮೆರಿಕಾದ ಭಯವಿತ್ತು. ಸೇನೆ ಮತ್ತು ರಾಜತಾಂತ್ರಿಕ ದಾಖಲೆಗಳನ್ನು ವಿಕಿಲೀಕ್ಸ್ ನಲ್ಲಿ ಪ್ರಕಟಿಸಿದ್ದಕ್ಕಾಗಿ ಅಲ್ಲಿ ವಿಚಾರಣೆ ಎದುರಿಸಬೇಕಾಗಿ ಬರಬಹುದು ಎಂಬ ಭಯದಿಂದ ಈಕ್ವೆಡಾರ್ ಆಶ್ರಯ ಪಡೆದುಕೊಂಡಿದ್ದರು.

British Home Secretary Priti Patel will now decide WikiLeaks founder Julian Assange extradition

2017 ವರ್ಷವಷ್ಟೇ ಸ್ವೀಡನ್ ಅಸಾಂಜೆ ಮೇಲಿದ್ದ ಅತ್ಯಾಚಾರ ಪ್ರಕರಣವನ್ನು ಕೈಬಿಟ್ಟಿತ್ತು. ಆದರೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಂಧಿಸುವುದಾಗಿ ಬ್ರಿಟನ್ ಹೇಳಿದ್ದರಿಂದ ಅಸಾಂಜೆ ಇನ್ನೂ ರಾಯಭಾರ ಕಚೇರಿಯಲ್ಲೇ ಆಶ್ರಯ ಪಡೆದಿದ್ದರು. ಆದರೆ, ನಂತರ ಲಂಡನ್ ಪೊಲೀಸರು ಬಂಧಿಸಿ ವಿಚಾರಣೆಗಾಗಿ ಯುಕೆಗೆ ಕರೆ ತಂದಿದ್ದರು. ಈಗ ಅಮೆರಿಕಕ್ಕೆ ಗಡೀಪಾರು ಆದೇಶ ಹೊರ ಬಂದಿದ್ದು, ಕಾನೂನು ಹೋರಾಟ ಮುಂದುವರೆಯಲಿದೆ.

ಅಸ್ಸಾಂಜೆ ಗಡೀಪಾರು ಆದೇಶವನ್ನು ಖಂಡಿಸಿರುವ ಪತ್ರಕರ್ತರು ಹಾಗೂ ಮಾನವ ಹಕ್ಕುಗಳ ಸಂಘಟನೆಗಳ ಒಕ್ಕೂಟ, 'ಪತ್ರಿಕಾ ಸ್ವಾತಂತ್ರ್ಯಕ್ಕೆ ಮಾರಕ ಕ್ರಮ' ಎಂದು ಹೇಳಿವೆ.

English summary
A U.K. court on Wednesday issued a formal order to extradite WikiLeaks founder Julian Assange to the U.S. to face trial over the publication of secret files relating to the Iraq and Afghanistan wars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X