'ಬ್ರೆಕ್ಸಿಟ್' ಗದ್ದಲ: ವಿಶ್ವಾಸಮತ ಗೆದ್ದ ತೆರೇಸಾ ಮೇ
ಲಂಡನ್, ಡಿಸೆಂಬರ್ 13: 'ಬ್ರೆಕ್ಸಿಟ್' ಪರಿಣಾಮದಿಂದ ಸರ್ಕಾರ ಪತನದ ಭೀತಿಯಲ್ಲಿಯೇ ವರ್ಷ ಕಳೆದ ಬ್ರಿಟಿಷ್ ಪ್ರಧಾನಿ ತೆರೇಸಾ ಮೇ ಅವರಿಗೆ ಕೊನೆಗೂ ನೆಮ್ಮದಿ ದೊರಕಿದೆ.
ಕನ್ಸರ್ವೇಟಿವ್ ಪಕ್ಷದ ನಾಯಕಿ ತೆರೇಸಾ ಮೇ ಸಂಸತ್‌ನಲ್ಲಿ 83 ಮತಗಳ ಅಂತರದಿಂದ ವಿಶ್ವಾಸ ಮತ ಗೆಲ್ಲುವ ಮೂಲಕ ಸರ್ಕಾರ ಉಳಿಸಿಕೊಂಡಿದ್ದಾರೆ. 200 ಮತಗಳಿಗೆ ವಿರುದ್ಧವಾಗಿ ತೆರೇಸಾ 117 ಮತಗಳನ್ನು ಪಡೆದುಕೊಂಡರು.
ಒಟ್ಟಾರೆ ಮತಗಳಲ್ಲಿ ಕನ್ಸರ್ವೇಟಿವ್ ಪಕ್ಷದ ಸಂಸದರ ಶೇ 63ರಷ್ಟು ಮತಗಳು ಮೇ ಅವರ ಪರವಾಗಿ ಬಿದ್ದರೆ, ಶೇ 37ರಷ್ಟು ಮತಗಳು ಅವರ ವಿರುದ್ಧವಾಗಿದ್ದವು.

ಬಳಿಕ ಮಾತನಾಡಿದ ಮೇ, ಜನರು ಮತ ಹಾಕಿದ 'ಬ್ರೆಕ್ಸಿಟ್' ಅನ್ನು ಜಾರಿಗೊಳಿಸಲು ಬದ್ಧರಾಗಿರುವುದಾಗಿ ಹೇಳಿದರು. ಆದರೆ, ತಮ್ಮ ವಿರುದ್ಧ ಮತ ಚಲಾಯಿಸಿದ ಸಂಸದರ ಕಳವಳಗಳನ್ನೂ ಆಲಿಸುವುದಾಗಿ ತಿಳಿಸಿದರು.
'ಬ್ರೆಕ್ಸಿಟ್' ವಿಚಾರದಲ್ಲಿ ಮುಂದುವರಿಯುವಂತೆ ಅವರ ಬೆಂಬಲಿಗರು ಪಕ್ಷವನ್ನು ಒತ್ತಾಯಿಸಿದ್ದಾರೆ. ಆದರೆ, ಅವರ ಟೀಕಾಕಾರರು ಮೂರನೇ ಒಂದರಷ್ಟು ಸಂಸದರ ಬೆಂಬಲ ಕಳೆದುಕೊಂಡಿರುವುದು ವಿನಾಶಕಾರಿ ಎಂದು ಹೇಳಿದ್ದಾರೆ.
'ಬ್ರೆಕ್ಸಿಟ್' ನೀತಿ ವಿರುದ್ಧ ಸಿಡಿದೆದ್ದ 48 ಸಂಸದರು ಮೇ ವಿರುದ್ಧ ಅವಿಶ್ವಾಸಮತ ಮಂಡಿಸಿದ್ದರು. ಬ್ರೆಕ್ಸಿಟ್ ನೀತಿಯು 2016ರ ಸಾರ್ವತ್ರಿಕ ಫಲಿತಾಂಶವನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದರು.
ಅವಿಶ್ವಾಸ ಮತದ ಫಲಿತಾಂಶದ ಬಳಿಕ ಮಾತನಾಡಿದ ಮೇ, ಯುರೋಪಿಯನ್ ಒಕ್ಕೂಟದ ಸಮ್ಮೇಳನದಲ್ಲಿ ತಮ್ಮ ಬ್ರೆಕ್ಸಿಟ್ ಒಪ್ಪಂದದಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸುವುದಾಗಿ ತಿಳಿಸಿದರು.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಬೇರ್ಪಡುವ 'ಬ್ರೆಕ್ಸಿಟ್' ನಿರ್ಧಾರದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು. ಬ್ರೆಕ್ಸಿಟ್ ಪರವಾಗಿ ಹೆಚ್ಚು ಮತಗಳು ಬಿದ್ದಿದ್ದವು. ಜನಾದೇಶದ ಬಳಿಕ ಪ್ರಧಾನಿ ಹುದ್ದೆಗೆ ಡೇವಿಡ್ ಕ್ಯಾಮರೂನ್ ರಾಜೀನಾಮೆ ನೀಡಿದ್ದರು. ಆ ಸ್ಥಾನವನ್ನು ತುಂಬಿದ್ದ ತೆರೇಸಾ ಮೇ ಬ್ರೆಕ್ಸಿಟ್ ಪ್ರಕ್ರಿಯೆಗೆ ಚಾಲನೆ ನೀಡಿದ್ದರು.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications