Kushtagi Elections: ಕುಷ್ಟಗಿ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ
ಕೊಪ್ಪಳ, ಮಾರ್ಚ್ 24: ಕೊಪ್ಪಳ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರ ಕುಷ್ಟಗಿ. ಇದು ಕಾಂಗ್ರೆಸ್ ಹಿಡಿತದಲ್ಲಿರುವ ಕ್ಷೇತ್ರವಾಗಿದ್ದು, ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸಭಾ ಚುನಾವಣೆಗೆ ಇಲ್ಲಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ ನಂತರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಬಗ್ಗೆ ತಿಳಿಯೋಣ.
ಕುಷ್ಟಗಿ ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕುಷ್ಟಗಿಯ ಪಟ್ಟಣದಲ್ಲಿ ಬುತ್ತಿ ಬಸವೇಶ್ವರ ದೇವಸ್ಥಾನ ಮತ್ತು ಅಡವಿರಾಯ ದೇವಸ್ಥಾನಗಳಿವೆ. ಇಲ್ಲಿನ ಜನರ ಪ್ರಮುಖ ಕಸುಬು ಕೃಷಿ. ಇಲ್ಲಿ ದಾಳಿಂಬೆ ಮತ್ತು ಪಪ್ಪಾಯ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಹನಮಸಾಗರ, ಹನಮನಾಳ ಮತ್ತು ತಾವರಗೇರಾ ಇಲ್ಲಿನ ಹೋಬಳಿಗಳು. ಈ ತಾಲ್ಲೂಕಿನ ದೊಣ್ಣೆಗುಡ್ಡ ದುಗಾ೯ದೇವಿ ದೇವಸ್ಥಾನವು ಯಾತ್ರಾಸ್ಥಳಕ್ಕೆ ಪ್ರಸಿದ್ಧಿ ಪಡಿದಿದೆ. ಕುಷ್ಟಗಿ ತಾಲ್ಲೂಕಿನ ದೋಟಿಹಾಳದಲ್ಲಿ ಶ್ರೀಅವದೂತ ಶುಕಮುನಿ ತಾತನ ದೇವಸ್ಥಾನ ಮತ್ತು ಪುರ ಗ್ರಾಮದಲ್ಲಿ ಐತಿಹಾಸಿಕ ಲಿಂಗಗಳು ಇರುವ ದೇವಸ್ಥಾನಗಳಿವೆ.

ಕುಷ್ಟಗಿ ತಾಲೂಕಿನಲ್ಲಿ ಒಟ್ಟು 177 ಹಳ್ಳಿಗಳಿವೆ. ಅವುಗಳಲ್ಲಿ 164 ಜನವಸತಿ ಇರುವ ಗ್ರಾಮಗಳು. 13 ಜನವಸತಿ ಇಲ್ಲದ್ ಗ್ರಾಮಗಳು ಇವೆ. ಅದರಂತೆ ನಾಲ್ಕು ಕಂದಾಯ ಹೋಬಳಿಗಳು ಇವೆ. ಕುಷ್ಟಗಿಯು ಇಲಕಲ್, ಹೊಸಪೇಟೆ, ಗಜೇಂದ್ರಗಡ, ಕೊಪ್ಪಳ ಎಂಬ ಪ್ರಮುಖವಾದ ನಗರಗಳ ಮಧ್ಯಭಾಗದಲ್ಲಿ ಅಂದರೆ 100ಕಿ.ಮೀ. ಒಳಗೆ ಇದೆ. ಇಲ್ಲಿಗೆ 28 ಗ್ರಾಮಪಂಚಾಯತಿಗಳು ಒಳಪಡುತ್ತವೆ.
ಕುಷ್ಟಗಿ ವಿಧಾನಸಭಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಹಿಡಿತದಲ್ಲಿರುವ ಕ್ಷೇತ್ರ. ಆದರೆ ಇತ್ತೀಚೆಗೆ ಬಿಜೆಪಿಯ ದೊಡ್ಡನಗೌಡ ಪಾಟೀಲ್ ಅವರು ಪ್ರಭಾವಿ ಅಭ್ಯರ್ಥಿಯಾಗಿ ಇಲ್ಲಿ ಬೆಳಕಿಗೆ ಬಂದಿದ್ದಾರೆ. ಇವರು 2004 ಹಾಗೂ 2013ರ ಚುನಾವಣೆಯಲ್ಲಿ ಜಯ ಸಾಧಿಸಿದ್ದರು. ಆದರೆ ಕಳೆದ 2018ರ ಚುನಾವಣೆಯಲ್ಲಿ ಅವರನ್ನು ಸೋಲಿಸಿರುವ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಇಲ್ಲಿ ಕಳೆದ 2008 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ ಜಯ ಸಾಧಿಸುತ್ತಾ ಬಂದಿದ್ದಾರೆ. ಕುಷ್ಟಗಿ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 2,36,270 ಮತದಾರರಿದ್ದು, ಇವರಲ್ಲಿ ಲಿಂಗಾಯತ ಸಮುದಾಯದ ಮತಗಳೇ ನಿರ್ಣಯಕ. ಲಿಂಗಾಯತ ಸಮುದಾಯ ಮತದಾರರು ಇಲ್ಲಿ 48,000 ಇದ್ದಾರೆ. ಇವರನ್ನು ಬಿಟ್ಟರೆ ಅತಿ ಹೆಚ್ಚು ಕುರುಬ ಸಮುದಾಯದ ಮತಗಳು ಇವರು 45,000 ಜನಸಂಖ್ಯೆ ಇದೆ.
ಇನ್ನು ಪರಿಶಿಷ್ಟ ಸಮುದಾಯದ ಮತಗಳು 30,000, ಪರಿಶಿಷ್ಟ ಪಂಗಡದ ಮತದಾರರ ಸಂಖ್ಯೆ 15,000 ಇದೆ. ಅಲ್ಲದೆ ಬ್ರಾಹ್ಮಣ ಮತದಾರರ ಸಂಖ್ಯೆ 10,000 ಇದೆ. ನೇಕಾರ ಸಮುದಾಯದ ಜನಸಂಖ್ಯೆ 8,000 ಹಾಗೂ ಇತರರು 35,000 ಜನಸಂಖ್ಯೆ ಇದೆ. ಕ್ಷೇತ್ರದಲ್ಲಿ ಇದುವರೆಗೂ 1957ರಿಂದಲೂ ಕ್ಷೇತ್ರ ಇದೆ. ಇಲ್ಲಿ ಒಟ್ಟು 14 ಬಾರಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಕ್ಷೇತ್ರದಲ್ಲಿ 9 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇನ್ನು ಬಿಜೆಪಿ 2 ಬಾರಿ ಗೆಲುವು ಸಾಧಿಸಿದೆ. ಇತರೆ ಪಕ್ಷಗಳು ಮೂರು ಬಾರಿ ಜಯ ಸಾಧಿಸಿದೆ.

ಕ್ಷೇತ್ರದಲ್ಲಿ ಬಿಜೆಪಿಯೂ ಮುನ್ನೆಲೆಗೆ
ಸದ್ಯ ಕಾಂಗ್ರೆಸ್ ಹಿಡಿತವಿರುವ ಈ ಕ್ಷೇತ್ರದಲ್ಲಿ ಬಿಜೆಪಿಯೂ ಮುನ್ನೆಲೆಗೆ ಬಂದು ಸೆಣೆಸಲು ನಿಂತಿದೆ. ದೊಡ್ಡನಗೌಡ ಪಾಟೀಲ್ ಅವರು ವಿಧಾನಸಭಾ ಅಖಾಡಕ್ಕೆ ಇಳಿದು ಭಾರಿ ಪ್ರಚಾರವನ್ನು ಕೈಗೊಂಡಿದ್ದಾರೆ. ಆದರೆ ಸಂಪ್ರಾದಾಯಿಕವಾಗಿ ಕಾಂಗ್ರೆಸ್ ಕೂಡ ಯಥಾವತ್ತಾಗಿ ಪ್ರಚಾರ ನಡೆಸುತ್ತಿದೆ. ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆ ಎಂದು ಸುದ್ದಿ ಕೇಳಿ ಬಂದಾಗಿನಿಂದ ಅಖಾಡ ಕಳೆಗಟ್ಟಿದೆ. ಕುರುಬ ಸಮುದಾಯದ ಮುಖಂಡರು ತಮ್ಮ ಗ್ರೌಂಡ್‌ಲೇವರ್ ವರ್ಕ್ ಆರಂಭಿಸಿದ್ದಾರೆ. ಆದರೆ ಕ್ಷೇತ್ರದಲ್ಲಿ ಗೆಲ್ಲುಲು ಎಲ್ಲ ಸಮುದಾಯಗಳ ಮತದಾರರು ಅವಶ್ಯಕವಾಗಿದ್ದಾರೆ.
ಹಿಂದುಳಿದ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ
ಸಿದ್ದರಾಮಯ್ಯ ಅವರು ಅಂತಿಮ ಕ್ಷಣದಲ್ಲಿ ನಿಂತರೂ ಅವರ ಕೈಹಿಡಿಯಲು ಎಸ್‌ಸಿ, ಎಸ್‌ಟಿ ಸಮುದಾಯದ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ರಾಜ್ಯದಾದ್ಯಂತ ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವು ಹಿಂದುಳಿದ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಇಲ್ಲಿ ಸುಲಭವಾಗಿ ಗೆಲ್ಲಬಹುದು ಎಂದು ಅವರು ಭಾವಿಸಿದ್ದಾರೆ. ಈ ಹಿಂದೆ ಕುರುಬ ಮತದಾರರನ್ನೇ ನಂಬಿಕೊಂಡಿದ್ದ ಸಿದ್ದರಾಮಯ್ಯ ಅವರು 1991ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಜನನತಾದಳದ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. ಹಾಗಾಗಿ ಎಲ್ಲ ಸಮುದಾಯದವರ ಓಲೈಕೆಗೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಕ್ಷೇತ್ರ ಬಿಟ್ಟುಕೊಡಲು ಸಿದ್ದರಿಲ್ಲ
ಕ್ಷೇತ್ರದ ಹಾಲಿ ಶಾಸಕರಾಗಿರುವ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಡಲು ಸಿದ್ದರಿಲ್ಲ ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ತಮ್ಮದೇ ಆದ ಉತ್ತಮ ಕೆಲಸಗಳನ್ನು ಮಾಡಿ ಹೆಸರು ಮಾಡಿರುವ ಅವರು ಸಿದ್ದರಾಮಯ್ಯರಿಗಾಗಿ ಕ್ಷೇತ್ರ ಬಿಡಲು ಮುಕ್ತ ಮನಸ್ಸಿನಿಂದ ನಿಂತಿಲ್ಲ. ಅವರು ಕ್ಷೇತ್ರದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಓಡಾಟ ಮುಂದುವರೆಸಿದ್ದಾರೆ, ಕಾರಣ ಸಿದ್ದರಾಮಯ್ಯ ಇಲ್ಲಿ ನಿಲ್ಲದಿದ್ದರೆ ಅವರೇ ಅಂತಿಮ ಎಂದು ಸಂದರ್ಭವಿದೆ. ಕೊರೋನಾ ಸೇರಿದಂತೆ ಹಲವು ಸಂದರ್ಭದಲ್ಲಿ ಕ್ಷೇತ್ರದ ಜನತೆ ಜೊತೆ ಅವರು ಸಂಪರ್ಕ ಹೊಂದಿದ್ದಾರೆ. ಸಿದ್ದರಾಮಯ್ಯನವರೇ ಕ್ಷೇತ್ರಕ್ಕೆ ಬಂದಿದ್ದಾಗ ನಡೆದಿದ್ದ ಕಾಂಗ್ರೆಸ್ ಸಮ್ಮೇಳನದಲ್ಲಿ ಅಮರೇಗೌಡ ಬಯ್ಯಾಪುರ ಅವರನ್ನು ಬೆಂಬಲಿಸಿ ಎಂದು ಬಹಿರಂಗವಾಗಿ ಜನರಲ್ಲಿ ಕೇಳಿಕೊಂಡಿದ್ದರು. ಬಯ್ಯಾಪುರ ಕುಷ್ಟಗಿಯಿಂದ ಸಿದ್ದರಾಮಯ್ಯ ಅವರು ನಿಲ್ಲುವುದಿಲ್ಲ ಎಂದು ಹೇಳಿದ್ದು, ತಾವೇ ಅಭ್ಯರ್ಥಿ ಎಂದು ತಿಳಿಸಿದ್ದಾರೆ. ಈ ಮೂಲಕ ರಕ್ಷಣಾತ್ಮಕ ರಾಜಕೀಯ ಮಾಡಲು ಹೊರಟಿದ್ದಾರೆ.
ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಲವರು
ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಇಲ್ಲವೇ ಬಯ್ಯಾಪುರ ಯಾರೇ ನಿಂತರೂ ಅವರಿಗೆ ಪ್ರತಿಸ್ಫರ್ಧಿಯಾಗಿ ಬಿಜೆಪಿಯಿಂದ ಕುರುಬ ಸಮುದಾಯಕ್ಕೆ ಸೇರಿರುವ ಅಮರಗೌಡ ಪಾಟೀಲ್ ನಿಲ್ಲುತ್ತಾರೆ ಎಂದು ಹೇಳಲಾಗುತ್ತಿದೆ. ಇವರಲ್ಲದೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಶರಣು ತಳ್ಳಿಕೇರಿ ಅವರು ಇದ್ದಾರೆ. ಇವರು ಹಿಂದೆ ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುರಿ ಮೇಕೆ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. ಈ ಹಿನ್ನೆಲೆಯಲ್ಲಿ ಕುಷ್ಟಗಿ ಕ್ಷೇತ್ರದಲ್ಲಿ ಈ ಬಾರಿ ಪ್ರಬಲ ಪೈಪೋಟಿ ಇದೆ. ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಪ್ರಬಲ ರಾಜಕೀಯ ತಂತ್ರ ಬಳಸಿ ಅಧಿಕ ಮತವಿರುವ ಸಮುದಾಯಗಳ ವಿಶ್ವಾದ ಗಳಿಸಿ ಚುನಾವಣೆ ಗೆಲ್ಲಬೇಕಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications