Breaking: ಬೀಡಾಡಿ ದನ ಇರಿದು ಮಹಿಳೆ ಸಾವು- ಶವವಿಟ್ಟು ಪ್ರತಿಭಟನೆ
ಕೊಪ್ಪಳ, ನ. 21: ಕೊಪ್ಪಳದಲ್ಲಿ ಬೀಡಾಡಿ ದನ ಇರಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ನಗರಸಭೆ ಮುಂದೆ ಮಹಿಳೆಯ ಮೃತದೇಹವಿಟ್ಟು ಪ್ರತಿಭಟನೆ ನಡೆಸಲಾಗಿದೆ.
ನ್ಯಾಯಕ್ಕಾಗಿ ಆಗ್ರಹಿಸಿರುವ ಪ್ರತಿಭಟನಾಕಾರರು ನಗರಸಭೆ ಮುಂದೆ ಮಹಿಳೆಯ ಮೃತದೇಹ ಇಟ್ಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದ ದೇವರಾಜ ಅರಸ್ ಕಾಲೋನಿಯಲ್ಲಿ ನಿನ್ನೆ ರಾತ್ರಿ ನಡೆದಿದ್ದ ಘಟನೆಯಲ್ಲಿ 38 ವರ್ಷದ ರಮೀಜಾ ಬೇಗಂ ಹುಸೇನ್ ಸಾಬ್ ಸಾವನ್ನಪ್ಪಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಬೀಡಾಡಿ ದನ ರಮೀಜಾ ಬೇಗ್ಂ ಅವರಿಗೆ ಇರಿದಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ರಮೀಜಾ ಬೇಗ್ಂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ದೇವರಾಜ ಅರಸ್ ಕಾಲೋನಿ ನಿವಾಸಿಯಾಗಿರುವ ರಮೀಜಾ ಬೇಗ್ಂ ಸಾವಿಗೆ ನಗರಸಭೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಸಾರ್ವಜನಿಕರು, ನಗರಸಭೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬೀಡಾಡಿ ದನಗಳನ್ನು ನಿಯಂತ್ರಣ ಮಾಡುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಆರೋಪ ವ್ಯಕ್ತಪಡಿಸಿದರು. ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications