ರೈಲಿನಲ್ಲಿ ಕನ್ನಡ ಮಾತನಾಡಿ ಅಂದಿದ್ದಕ್ಕೆ ಪಯಾಣಿಕನ ಮೇಲೆ ಟಿಸಿ ಹಲ್ಲೆ; ಮುಂದೇನಾಯ್ತು?
ಕೊಪ್ಪಳ, ಏಪ್ರಿಲ್ 26: ರಾಜ್ಯದಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗಿಬಿಟ್ಟಿದೆ. ಅವರು ನಮ್ಮಂತೆ ಮನುಷ್ಯರು, ಜೀವನ ಸಾಗಿಸಿಕೊಂಡು ಹೋಗುತ್ತಾರೆ ಅಂದುಕೊಂಡರೆ ಕನ್ನಡಿಗರ ವಿರುದ್ಧವೇ ಬಾಲ ಬಿಚ್ಚುತ್ತಿದ್ದಾರೆ. ಇಂತಹ ಘಟನೆಗಳು ನಡೆಯುತ್ತಲೇ ಇವೆ. ಹಾಗೆಯೇ ಇದೀಗ ರೈಲಿನಲ್ಲಿ ಟಿಸಿಯೊಬ್ಬರು ದರ್ಪ ಮೆರೆದು ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಇತ್ತೀಚೆಗಷ್ಟೇ ಕನ್ನಡ ಮಾತಾನಾಡು ಅಂದಿದಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಲಾಗಿತ್ತು. ಈ ಘಟನೆ ಭಾರೀ ಕಾರಣವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಕೆಲ ದಿನಗಳ ಹಿಂದೆ ಬೆಂಗಳೂರಲ್ಲಿ ವಿಂಗ್ ಕಮಾಂಡರ್ ಕನ್ನಡಿನ ಮೇಲೆ ಹಲ್ಲೆ ಮಾಡಿದ್ದರು. ಇದೀಗ ಅದೇ ರೀತಿಯ ಘಟನೆ ರಾಜ್ಯದಲ್ಲಿ ನಡೆದಿದೆ.

ರೈಲಿನಲ್ಲಿ ಕನ್ನಡ ಮಾತಾಡಿ ಅಂದಿದ್ದಕ್ಕೆ ಟಿಸಿ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಹೀಗೆ ಕರ್ನಾಟಕದಲ್ಲಿದ್ದುಕೊಂಡೇ ಕನ್ನಡಿಗರ ಮೇಲೆ ಹಲ್ಲೆ, ದಬ್ಬಾಳಿಕೆ ಮಾಡುತ್ತಿರುವುದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ. ಸಾಮಾನ್ಯವಾಗಿ ಕರ್ನಾಟಕದಲ್ಲೇ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಲೇ ಇವೆ. ದೇಶದ ಎಲ್ಲಾ ರಾಜ್ಯಗಳ ಜನರು ಕೂಡ ಕರ್ನಾಟಕಕ್ಕೆ ಉದ್ಯೋಗ ಹರಸಿ ಬರುತ್ತಲೇ ಇದ್ದಾರೆ. ಆದರೆ, ಇವರಲ್ಲಿ ಕೆಲವರು ಕನ್ನಡ ಭಾಷೆಯೇ ಮೇಲೆ ದರ್ಪ ತೋರುವ ಮೂಲಕ ಬಾಲ ಬಿಚ್ಚುತ್ತಿದ್ದಾರೆ.
ಕರ್ನಾಟಕದಲ್ಲಿದ್ದುಕೊಂಡೇ ಕೆಲವರು ಕನ್ನಡ ಭಾಷೆಯ ಮೇಲೆ ದರ್ಪ ತೋರುತ್ತಿದ್ದಾರೆ. ಈ ಕುರಿತು ಸಾಕಷ್ಟು ವಿಡಿಯೋಗಳು ಸಹ ವೈರಲ್ ಆಗಿದ್ದು, ಬಳಿಕ ಕ್ರಮ ಕೈಗೊಂಡ ಮೇಲೆ ಕ್ಷಮೆ ಕೇಳಿರುವ ಘಟನೆಗಳು ನಡೆದಿವೆ. ಇಷ್ಟಾದರೂ ಕೂಡ ಮತ್ತೆ ಮತ್ತೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದು, ಕನ್ನಡಿಗರ ಶಾಂತ ಸ್ವಭಾವವನ್ನು ಕೆರಳಿಸುತ್ತಿವೆ.
ಇದೀಗ ರೈಲಿನಲ್ಲಿ ಕೊಪ್ಪಳದ ಪ್ರಯಾಣಿಕ ಕನ್ನಡ ಮಾತಾಡು ಅಂದಿದ್ದಕ್ಕೆ ಟಿಸಿ ಹಲ್ಲೆ ಮಾಡಿದ್ದಾರೆ. ಹಂಪಿ ಎಕ್ಸಪ್ರೆಸ್ ರೈಲಿನಲ್ಲಿ ಏಪ್ರಿಲ್ 24ರಂದು ಮೈಸೂರಿನಿಂದ ಕೊಪ್ಪಳಕ್ಕೆ ಪ್ರಯಾಣ ಮಾಡುವಾಗ ಈ ಘಟನೆ ನಡೆದಿದೆ. ಈ ವೇಳೆ ರೈಲು ಯಲಹಂಕ ಸಮೀಪ ತಲುಪಿದೆ.
ಟಿಸಿ ಎಲ್ಲರ ಟಿಕೆಟ್ ತಪಾಸಣೆ ಮಾಡುತ್ತಿದ್ದರು. ಈ ವೇಳೆ ರೈಲಿನಲ್ಲಿದ್ದ ಕೊಪ್ಪಳ ಮೂಲದ ಪ್ರಯಾಣಿಕ ಮೊಹಮದ್ ಭಾಷಾ ಎಂಬುವವರು ಟಿಸಿಗೆ ಕನ್ನಡ ಮಾತಾನಾಡಿ ಎಂದು ಹೇಳಿದ್ದಾರೆ. ಆಗ ಸಿಟ್ಟಿನಿಂದ ಟಿಸಿ ಕೂಡಲೇ ಮಹಮ್ಮದ್ ಭಾಷಾ ಅವರ ಮೊಬೈಲ್ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಹಮ್ಮದ್ ಭಾಷಾ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಕಲೆಕ್ಟರ್ಗೆ ನಾನು ಕನ್ನಡ ಮಾತಾಡಿ ಎಂದು ಹೇಳಿದೆ. ಆಗ ಅವರು ಕನ್ನಡ ಬರಲ್ಲ ಎಂದರು. ಅಷ್ಟಕ್ಕೆ ಸುಮ್ಮನಾಗಲಿಲ್ಲ ಅವರು ನನ್ನ ಬಳಿಯಿದ್ದ ಮೊಬೈಲ್ ಫೋನ್ ಕಿತ್ತುಕೊಂಡು, ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಹೇಳಿದ್ದಾರೆ.
ಮಹಮದ್ ಭಾಷಾ ಕೆಲಸದ ನಿಮಿತ್ಯ ಮೈಸೂರಿಗೆ ಹೋಗಿದ್ದರು. ಹಿಂದಿರುಗುವಾಗ ಈ ಘಟನೆ ನಡೆದಿದ್ದು, ವಿಡಿಯೋ ಭಾರೀ ವೈರಲ್ ಆಗಿತ್ತು. ಇನ್ನು ಕನ್ನಡಿಗನ ಮೇಲಿನ ದೌರ್ಜನ್ಯ ಖಂಡಿಸಿ ಕೊಪ್ಪಳ ರೈಲ್ವೆ ನಿಲ್ದಾಣದ ಬಳಿ ಕನ್ಮಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿ, ದೌರ್ಜನ್ಯ ಎಸಗಿದ ಟಿಸಿ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಟಿಸಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪ್ರಯಾಣಿಕ ಮಹಮದ್ ಭಾಷಾ ಕೂಡ ಭಾಗಿಯಾಗಿದ್ದು, ಪ್ರಯಾಣಿಕನ ಮೇಲೆ ದೌರ್ಜನ್ಯ ನಡೆಸಿದ ಟಿಸಿ ಅವರನ್ನು ಅಮಾನತ್ತು ಮಾಡುವಂತೆ ಹಿರಿಯ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.












Click it and Unblock the Notifications