ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪಳ; ಜಲ ಜೀವನ್ ಮಿಷನ್ ಯೋಜನೆಯ ಯಶೋಗಾಥೆ

|
Google Oneindia Kannada News

ಕೊಪ್ಪಳ, ನವೆಂಬರ್ 16; ಪ್ರತಿ ಮನೆಗೆ ಶುದ್ಧ ಕುಡಿಯುವ ನೀರನ್ನು ನಲ್ಲಿಗಳ ಮೂಲಕ ಪೂರೈಕೆ ಮಾಡಲು ಸರ್ಕಾರ ಆರಂಭಿಸಿದ ಯೋಜನೆ ಜಲ ಜೀವನ್ ಮಿಷನ್. 2024ರ ವೇಳೆಗೆ ಪ್ರತಿ ಮನೆಗೆ ನೀರು ತಲುಪಿಸಬೇಕು ಎಂದು ಯೋಜನೆ ಗುರಿಯನ್ನು ಹೊಂದಿದೆ.

ಜಿಲ್ಲಾ ಪಂಚಾಯಿತಿ ಮೂಲಕ ಸರ್ಕಾರದ ಮಹತ್ವದ ಜಲ ಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೊಪ್ಪಳ ಜಿಲ್ಲಾ ಪಂಚಾಯತಿ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಈಗಾಗಲೇ ಕಾಮಗಾರಿ ಮುಗಿದ ಹಲವಾರು ಗ್ರಾಮಗಳಲ್ಲಿ ನಿತ್ಯ ಜಲೋತ್ಸವ ಕಂಡು ಬರುತ್ತಿದ್ದು, ಜನರು ಸಹ ಸಂತಸಗೊಂಡಿದ್ದಾರೆ.

ಗದಗ: ದೀಪಾವಳಿ ಸಂಭ್ರಮ ಕಸಿದ ಭೂಕುಸಿತ, ಮನೆಯೊಳಗೆ ಉಕ್ಕುತ್ತಿರುವ ಜಲ ಗದಗ: ದೀಪಾವಳಿ ಸಂಭ್ರಮ ಕಸಿದ ಭೂಕುಸಿತ, ಮನೆಯೊಳಗೆ ಉಕ್ಕುತ್ತಿರುವ ಜಲ

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಹಲವು ವರ್ಷಗಳಿಂದಲೇ ಅಂತರ್ಜಲ ಪ್ರಮಾಣ ಕುಸಿದು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ದಿನಬಳಕೆಯ ನೀರಿನ ಬವಣೆಯಂತೂ ಹೇಳತೀರದಂತಿತ್ತು. ಇಂತಹ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ.

ಜಲ ಜೀವನ್ ಮಿಷನ್ ಅನುಷ್ಠಾನ ರಾಜ್ಯಕ್ಕೆ ಗದಗ ನಂಬರ್ 1ಜಲ ಜೀವನ್ ಮಿಷನ್ ಅನುಷ್ಠಾನ ರಾಜ್ಯಕ್ಕೆ ಗದಗ ನಂಬರ್ 1

Jal Jeevan Mission Success Story Of Koppal

ಕೊಪ್ಪಳ ಜಿಲ್ಲಾ ಪಂಚಾಯತಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದು, ಗ್ರಾಮೀಣ ಜನರ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಜಿಲ್ಲಾ ಪಂಚಾಯಿತಿ ಸಿಇಓ ಬಿ. ಫೌಜಿಯಾ ತರನ್ನುಮ್ ಯೋಜನೆಯ ಕುರಿತು ಪ್ರತಿನಿತ್ಯ ಮೇಲ್ವಿಚಾರಣೆ ಕೈಗೊಂಡಿದ್ದಾರೆ.

ಹೆಚ್.ಡಿ.ಕೋಟೆ ವ್ಯಾಪ್ತಿಯ ಜಲಾಶಯಗಳಲ್ಲೀಗ ಜಲ ನರ್ತನ ಹೆಚ್.ಡಿ.ಕೋಟೆ ವ್ಯಾಪ್ತಿಯ ಜಲಾಶಯಗಳಲ್ಲೀಗ ಜಲ ನರ್ತನ

ಮನೆ ಬಾಗಿಲಿಗೆ ಬಂತು ನದಿಯ ನೀರು; ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ಬಿ. ಫೌಜಿಯಾ ತರುನ್ನುಮ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಇನ್ನಿತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ನಿರ್ದೇಶನಗಳನ್ನು ನೀಡುತ್ತಿದ್ದರು.

ಗ್ರಾಮಸ್ಥರ ಹಲವಾರು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಬೇಕು-ಬೇಡಿಕೆಗಳ ಬಗ್ಗೆ ಪಟ್ಟಿ ಮಾಡಿ ವಿಶೇಷ ಕಾಳಜಿ ವಹಿಸಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದಾರೆ. ಯೋಜನೆಯ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದರಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನಲ್ಲಿಯ ಸಂಪರ್ಕ ಸಿಗುವಂತಾಗಿದೆ. ದೂರದ ನದಿಯ ನೀರು ಜನರ ಮನೆ ಬಾಗಿಲಿಗೆ ಬಂದಿದೆ.

Jal Jeevan Mission Success Story Of Koppal

ಯೋಜನೆ ಕುರಿತು ಪ್ರತಿಕ್ರಿಯೆ ನೀಡಿದ ಸಿಇಓ, "ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಸಿಗಬೇಕು. ಅತ್ಯಗತ್ಯವಾದ ನೀರಿನ ಸೌಕರ್ಯವು ಎಲ್ಲರಿಗೂ ಸಿಗಬೇಕು ಎನ್ನುವ ಆಶಯದೊಂದಿಗೆ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ" ಎಂದು ಹೇಳಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಯಲಬುರ್ಗಾ ತಾಲೂಕಿನ ಗೆದಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಗಳೂರು ಗ್ರಾಮಸ್ಥರು ಯೋಜನೆಯಿಂದ ಸಂತಸಗೊಂಡಿದ್ದಾರೆ. ಸುಮಾರು 52 ಕುಟುಂಬಗಳನ್ನು ಹೊಂದಿರುವ ಗ್ರಾಮವಿದು. ಮೊದಲು ಜನರು ನೀರಿಗಾಗಿ ಹಳ್ಳ, ಬಾವಿ, ಕೆರೆ ಹುಡುಕಬೇಕಿತ್ತು. ಮಹಿಳೆಯರು, ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದರು. ಈಗ ಮನೆ ಬಾಗಿಲಿಗೆ ನೀರು ಬಂದಿದೆ. ಕಲುಷಿತ ನೀರು ಕುಡಿದು ಅನಾರೋಗ್ಯಕ್ಕೆ ಒಳಗಾಗುವುದು ತಪ್ಪಿದೆ.

ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೂ ಗಂಗೆ ಹರಿದುಬಂದಿದ್ದಾಳೆ. ಗ್ರಾಮದ ಕಟ್ಟಕಡೆಯ ವ್ಯಕ್ತಿಯ ಮನೆಗೂ ನಲ್ಲಿಯ ಮೂಲಕ ನೀರು ಹರಿದುಬಂದಿದೆ. ಗ್ರಾಮದ ಮಹಿಳೆಯರು, ವಿಕಲಚೇತನರು, ಮಕ್ಕಳು, ಹಿರಿಯರು, ವಿಕಲಚೇತನರು ಯೋಜನೆಗೆ ಮತ್ತು ಜಿಲ್ಲಾ ಪಂಚಾಯಿತಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಜಿಲ್ಲಾ ಪಂಚಾಯತಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ಕೊಪ್ಪಳ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಇದರಿಂದಾಗಿ ಜನರು ಸಂತಸ ಪಡುವಂತಾಗಿದೆ.

ನೀರಿನ ಸಮಸ್ಯೆ ಬಗೆಹರಿದ ಮೇಲೆ ಲಗಳೂರು ಗ್ರಾಮದಲ್ಲಿ ಗರ್ಭಿಣಿಯರು, ವಯೋವೃದ್ಧರು, ಸಣ್ಣ ಮಕ್ಕಳು ಕುಡಿಯುವ ನೀರಿಗಾಗಿ ಪ್ರತಿ ದಿನ ಹಳ್ಳ, ಬಾವಿ, ಕೆರೆಗಳಿಗೆ ತೆರಳಿ ನೀರು ತುಂಬಿಕೊಂಡು ಬರುವ ದುಸ್ಥಿತಿ ಇತ್ತು. ಈಗ ಯೋಜನೆ ಅನುಷ್ಠಾನಗೊಂಡ ಬಳಿಕ ಜನರ ಕಷ್ಟದೂರವಾಗಿದ್ದು, ಮಹಿಳೆಯರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

English summary
Jal Jeevan Mission success story of Koppal zilla panchayat. Mission aim is to supply drinking water to individual household with tap connections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X