Get Updates
Get notified of breaking news, exclusive insights, and must-see stories!

ಕೊಪ್ಪಳ; ದೇಶದಲ್ಲೇ ದೊಡ್ಡ ಆಟಿಕೆ ತಯಾರಿಕಾ ಘಟಕ ನಿರ್ಮಾಣ

ಕೊಪ್ಪಳ, ಆಗಸ್ಟ್ 27: ಭಾರತದಲ್ಲಿಯೇ ದೊಡ್ಡದಾದ ಆಟಿಕೆ ಉತ್ಪಾದನಾ ಘಟಕ ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ. ಈ ಘಟಕ ಉತ್ಪಾದನೆಯನ್ನು ಆರಂಭಿಸಿದರೆ ಸುಮಾರು 40 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ.

Recommended Video

      ಮೈಸೂರಿನ ರಾಜಮನೆತನದ Yaduveer Krishnadatta ರಾಜಕೀಯದ ಬಗ್ಗೆ ಮಹತ್ವದ ನಿರ್ಧಾರ | Oneindia Kannada

      ಕೊಪ್ಪಳದಲ್ಲಿ 400 ಎಕರೆ ಜಾಗದಲ್ಲಿ ಆಕ್ವಾಸ್ ಏರೋಸ್ಪೆಸ್ ಆಟಿಕೆ ತಯಾರಿಕಾ ಘಟಕವನ್ನು ನಿರ್ಮಾಣ ಮಾಡಲಿದೆ. ರಾಷ್ಟ್ರೀಯ ಹೆದ್ದಾರಿ 63ರ ಸಮೀಪದಲ್ಲಿಯೇ ಈ ಘಟಕ ನಿರ್ಮಾಣವಾಗಲಿದ್ದು, ಸಾರಿಗೆ ಸಂಚಾರಕ್ಕೂ ಅನುಕೂಲವಾಗಲಿದೆ.

      ಈ ಘಟಕ ನಿರ್ಮಾಣಕ್ಕೆ ಸುಮಾರು 5 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ನವೆಂಬರ್ ವೇಳಗೆ ಪ್ರಾಥಮಿಕ ಹಂತದ ಚಟುವಟಿಕೆ ಆರಂಭವಾಗಲಿದೆ. ಈ ಘಟಕದಿಂದಾಗಿ ಸುಮಾರು 40 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ಅಂದಾಜಿಸಲಾಗಿದೆ.

      Indias Largest Toy Cluster To Come Up In Koppal

      ಸೋಮವಾರ ಕಂಪನಿಯ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಪರೆನ್ಸ್ ಮೂಲಕ ಕರ್ನಾಟಕ ಸರ್ಕಾರದ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಆಟಿಕೆಗಳ ಮಾರಾಟದಲ್ಲಿ ದೇಶದಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದ್ದು ವಾರ್ಷಿಕ ಸುಮಾರು 1,200 ಕೋಟಿ ರೂ. ವಹಿವಾಟು ನಡೆಯಲಿದೆ.

      ಆಕ್ವಾಸ್ ಏರೋಸ್ಪೆಸ್ ಬೆಳಗಾವಿ ವಿಶೇಷ ಆರ್ಥಿಕ ವಲಯದಲ್ಲಿ ಈಗಾಗಲೇ ಒಂದು ಘಟಕ ನಿರ್ಮಾಣ ಮಾಡಿದೆ. ಬೆಂಗಳೂರು, ಧಾರವಾಡ, ಕೊಪ್ಪಳದಲ್ಲಿ ಘಟಕಗಳನ್ನು ಸ್ಥಾಪಿಸಲು ಕೆಲವು ಕಂಪನಿಗಳು ಮುಂದೆ ಬಂದಿದ್ದು, ರಾಜ್ಯ ಸರ್ಕಾರ ಮಾತುಕತೆ ನಡೆಸುತ್ತಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+