ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಹಿರೇಬಣಕಲ್‌ಗೆ ಸ್ಥಾನ
ನವದೆಹಲಿ, ಮೇ 21: ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನೆಸ್ಕೋ ವತಿಯಿಂದ ತಯಾರಾಗುತ್ತಿರುವ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯ ಹಿರೇಬಣಕಲ್ ಸ್ಥಾನ ಪಡೆದಿದೆ.
ಕರ್ನಾಟಕದ ಕೊಪ್ಪಳ ಜಿಲ್ಲೆಯ ಹಿರೇಬಣಕಲ್ ಸೇರಿದಂತೆ ಭಾರತದ ಇತರ ಆರು ಐತಿಹಾಸಿಕ ಸ್ಥಳಗಳು ಜಾಗ ಪಡೆದಿವೆ. ಭಾರತದ ಪ್ರಾಚ್ಯವಸ್ತುಗಳ ಇಲಾಖೆ (ಎಎಸ್‌ಐ) ಒಟ್ಟು 9 ಸ್ಥಾನಗಳ ವಿವರಗಳನ್ನು ಹಾಗೂ ಅವುಗಳ ಮಹತ್ವವನ್ನು ದಾಖಲಿಸಿ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಯುನೆಸ್ಕೋಗೆ ಮನವಿ ಮಾಡಿತ್ತು.
ಅವುಗಳಲ್ಲಿ 6 ಸ್ಥಳಗಳನ್ನು ಯುನೆಸ್ಕೋ ಆಯ್ಕೆ ಮಾಡಿಕೊಂಡಿದ್ದು, ಈ ಮೂಲಕ ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಒಟ್ಟು ಪಾರಂಪರಿಕ ಸ್ಥಳಗಳ ಸಂಖ್ಯೆ 48ಕ್ಕೇರಿದೆ.

ಹಿರೇಬಣಕಲ್ ವಿಶೇಷವೇನು?
ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಪಶ್ಚಿಮಕ್ಕೆ ಸುಮಾರು 10 ಕಿ.ಮೀ ದೂರದಲ್ಲಿ ಹಿರೇಬಣಕಲ್ ಇದೆ. ಇದೊಂದು ಗುಡ್ಡಗಾಡು ಪ್ರದೇಶವಾಗಿದ್ದು, ಮನುಷ್ಯನ ವಿಕಾಸ ಹಂತದ ಪ್ರಮುಖ ಘಟ್ಟವಾದ ಶಿಲಾಯುಗದ ಅಂತಿಮ ಹಂತ ನವಶಿಲಾಯುಗದ ಕಾಲಘಟ್ಟದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕಾಗಿ ಈ ಜಾಗವನ್ನು ಬಳಸಿರುವ ಕುರುಹುಗಳಿವೆ ಎಂದು ತಿಳಿದುಬಂದಿದೆ.
ಇದಕ್ಕೆ ಸಂಬಂಧಪಟ್ಟಂತೆ ಅತೀ ದೊಡ್ಡ ಸ್ಮಶಾನವೊಂದು ಇದ್ದು, 1955ರಿಂದಲೇ ಭಾರತೀಯ ಪ್ರಾಚ್ಯವಸ್ತು ಇಲಾಖೆಯ (ಧಾರವಾಡ ವೃತ್ತ) ಸುಪರ್ದಿಯಲ್ಲಿರುವ ಈ ಪ್ರದೇಶ, ದಕ್ಷಿಣ ಭಾರತದಲ್ಲಿ ಪತ್ತೆಯಾದ 2000ಕ್ಕೂ ಹೆಚ್ಚು ನವಶಿಲಾಯುಗದ ಸ್ಮಶಾನಗಳಲ್ಲೇ ಅತೀ ದೊಡ್ಡದು ಎಂದು ಹೇಳಲಾಗಿದೆ.

ಬೆಟ್ಟದ ವೈಶಿಷ್ಟ್ಯವೇನು?
- 7 ಗುಡ್ಡ ಪ್ರದೇಶದ ಗುಹೆಗಳಲ್ಲಿ ಆದಿ ಮಾನವರು ಚಿತ್ರಿಸಿದ ಗುಹಾಂತರ ಚಿತ್ರಗಳು
- ಮೌರ್ಯರ ಬೆಟ್ಟದಲ್ಲಿ ಶಿಲಾಸಮಾಧಿ
- ಪ್ರವಾಸೋದ್ಯಮಕ್ಕೆ ಅನುಕೂಲ, ಸ್ಥಳೀಯರಿಗೆ ಉದ್ಯೋಗಾವಕಾಶ
ಹೊಸದಾಗಿ ಆಯ್ಕೆಯಾದ ಸ್ಥಳಗಳು
Recommended Video
- ಹಿರೇಬಣಕಲ್ (ಕೊಪ್ಪಳ)
- ಸಾತ್ಪುರ ಹುಲಿ ಮೀಸಲು ಪ್ರದೇಶ (ಮಧ್ಯಪ್ರದೇಶ)
- ವಾರಾಣಸಿಯ ನದಿ ಬಯಲು (ಉತ್ತರ ಪ್ರದೇಶ)
- ಮರಾಠಾ ಮಿಲಿಟರಿ ಪಾರಂಪರಿಕ ಕಟ್ಟಡ (ಮಹಾರಾಷ್ಟ್ರ)
- ನರ್ಮದಾ ನದಿ ಕಣಿವೆಯ ಬೇಡಘಾಟ್ ಲಾಮಾಘಾಟ್ (ಮಧ್ಯಪ್ರದೇಶ)
- ಕಾಂಚೀಪುರಂ ದೇವಸ್ಥಾನಗಳು (ತಮಿಳುನಾಡು)
-
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಏಪ್ರಿಲ್ 9ರ ದರಪಟ್ಟಿ












Click it and Unblock the Notifications