Get Updates
Get notified of breaking news, exclusive insights, and must-see stories!

ಕೊಪ್ಪಳ; ಹುಲಿಗೆಮ್ಮ ದೇವಾಲಯ ಅಭಿವೃದ್ಧಿಗೆ ಪ್ರಾಧಿಕಾರ ರಚನೆ?

ಕೊಪ್ಪಳ, ಜನವರಿ 04: ಕರ್ನಾಟಕದ ಮುಜರಾಯಿ ಇಲಾಖೆ ವಾರ್ಷಿಕ 25 ಲಕ್ಷ ರೂ. ಆದಾಯ ಇರುವ ದೇವಾಲಯಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಲು ಚಿಂತನೆ ನಡೆಸುತ್ತಿದೆ. ಘಾಟಿ ಸುಬ್ರಮಣ್ಯ ಮತ್ತು ಕೊಪ್ಪಳದ ಶ್ರೀ ಹುಲಿಗೆಮ್ಮ ದೇವಾಲಯಗಳಿಗೆ ಪ್ರಾಧಿಕಾರ ರಚನೆಯಾಗುವ ನಿರೀಕ್ಷೆ ಇದೆ.

2023-24ನೇ ಸಾಲಿ ಬಜೆಟ್‌ನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದರು. ಈಗ ಇನ್ನೂ ಎರಡು ದೇವಾಲಯಗಳನ್ನು ಸೇರಿಸಿಕೊಂಡು ಪ್ರಾಧಿಕಾರ ರಚನೆ ಮಾಡುವ ತೀರ್ಮಾನ ಘೋಷಣೆ ಮಾಡಲಾಗುತ್ತದೆ ಎಂಬ ಸುದ್ದಿ ಇದೆ.

Govt May Set Up Authority For Development Of Koppal Huligemma Temple

ಮುಜರಾಯಿ ಖಾತೆ ಸಚಿವರೂ ಆಗಿರುವ ರಾಮಲಿಂಗಾ ರೆಡ್ಡಿ ಮಾಧ್ಯಮಗಳ ಜೊತೆ ಮಾತನಾಡಿದ್ದು, "ರಾಜ್ಯದಲ್ಲಿ ಮುಜರಾಯಿ ಇಲಾಖೆಯಡಿ ಬರುವ 25 ಲಕ್ಷಕ್ಕಿಂತ ಅಧಿಕ ಆದಾಯ ಇರುವ ಎಲ್ಲಾ ದೇವಾಲಯಗಳಲ್ಲೂ ಅಮೂಲಾಗ್ರ ಬದಲಾವಣೆ ಮಾಡಿ ಎಲ್ಲಾ ರೀತಿಯ ಸೌಕರ್ಯ ಒದಗಿಸಬೇಕು. ಆದ್ಯತೆಯ ಮೇಲೆ ಒಂದೊಂದು ದೇವಸ್ಥಾನಕ್ಕೆ ಪ್ರಾಧಿಕಾರ ರಚನೆ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

ಶ್ರೀ ಹುಲಿಗೆಮ್ಮ ದೇವಾಲಯ: ಸಚಿವ ರಾಮಲಿಂಗಾ ರೆಡ್ಡಿ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಾಲಯಕ್ಕೆ ಡಿಸೆಂಬರ್ 19ರಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದರು. ಅಲ್ಲದೇ ದೇವಾಲಯದ ಆಡಳಿತಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.

ಸಭೆಯಲ್ಲಿ ಮಾತನಾಡಿದ್ದ ಸಚಿವರು, "2022-23ನೇ ಸಾಲಿನಲ್ಲಿ ದೇವಾಲಯಕ್ಕೆ 80 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಪ್ರತಿ ವರ್ಷ ಅಂದಾಜು 90 ಲಕ್ಷ ಭಕ್ತರು ಭೇಟಿ ಕೊಡುತ್ತಾರೆ ಎನ್ನುವುದು ಅಂಕಿ ಸಂಖ್ಯೆಗಳನ್ನು ಗಮನಿಸಿದಾಗ ತಿಳಿಯುತ್ತದೆ. ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಅತ್ಯಗತ್ಯ. ಅಭಿವೃದ್ಧಿಗಾಗಿ ದೇವಾಲಯದಲ್ಲಿಯೇ ಸಾಕಷ್ಟು ಅನುದಾನವಿದೆ" ಎಂದು ಹೇಳಿದ್ದರು.

koppal-temple

"ಶ್ರೀ ಹುಲಿಗೆಮ್ಮ ದೇವಾಲಯದಲ್ಲಿ ನಿಶ್ಚಿತ ಠೇವಣಿ ಒಟ್ಟು 55.83 ಕೋಟಿ ರೂ. ಇದ್ದು, ಅಭಿವೃದ್ಧಿ ಮಾಡುವುದಕ್ಕೆ ಹಣಕಾಸಿನ ಕೊರತೆಯೇ ಇಲ್ಲ. ಸಮಗ್ರ ಅಭಿವೃದ್ಧಿಯ ಪರಿಷ್ಕೃತ ಮಾಸ್ಟರ್ ಪ್ಲಾನ್ ಪ್ರತಿಯನ್ನು ಇಲಾಖೆಗೆ ಸಲ್ಲಿಸಿದಲ್ಲಿ ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದು ಕಳುಹಿಸಲಾಗುವುದು" ಎಂದು ಸಚಿವರು ತಿಳಿಸಿದ್ದರು.

ಕೊಪ್ಪಳದ ಶ್ರೀ ಹುಲಿಗೆಮ್ಮ ದೇವಾಲಯಕ್ಕೆ ಉತ್ತರ ಕರ್ನಾಟ ಸೇರಿದಂತೆ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತರಿಂದಲೇ ದೇವಾಲಯಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತದೆ. ಅಂಕಿ ಅಂಶಗಳ ಮಾಹಿತಿಯಂತೆ ದೇವಾಲಯದಲ್ಲಿ 55.83 ಕೋಟಿ ರೂ. ನಿಶ್ಚಿತ ಠೇವಣಿ ಇದೆ. 2018-19ರಲ್ಲಿ 7.47 ಕೋಟಿ ರೂ., 2019-20ರಲ್ಲಿ 9.28 ಕೋಟಿ ರೂ., 2020-21ರಲ್ಲಿ 4.33 ಕೋಟಿ ರೂ., 2021-22ರಲ್ಲಿ 7.11 ಕೋಟಿ ರೂ., ಮತ್ತು 2022-23ರಲ್ಲಿ 14.27 ಕೋಟಿ ರೂ. ನಷ್ಟು ಆದಾಯ ದೇವಾಲಯದಲ್ಲಿ ಸಂಗ್ರಹಣೆಯಾಗಿದೆ.

ಸುಮಾರು 800 ವರ್ಷಗಳ ಇತಿಹಾಸವನ್ನು ಶ್ರೀ ಹುಲಿಗೆಮ್ಮ ದೇವಾಲಯ ಹೊಂದಿದೆ. ಹೊಸ್ತಿಲು ಹುಣ್ಣಿಮೆ ದಿನ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ದೇವಾಲಯಕ್ಕೆ ಸೇರಿದ 30 ಎಕರೆ ಜಮೀನು ಇದೆ. ಆದರೆ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯ ಮೂಲಕ ಸೌಕರ್ಯ ಇಲ್ಲ ಎಂದು ಜನರು ಆರೋಪ ಮಾಡುತ್ತಿದ್ದಾರೆ.

ಸಚಿವ ರಾಮಲಿಂಗಾ ರೆಡ್ಡಿ ಮುಂದೆಯೇ ಹುಲಗಿ ಗ್ರಾಮ ಪಂಚಾಯತಿಯ ಕೆಲವು ಸದಸ್ಯರು ಮತ್ತು ಅಲ್ಲಿನ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕೆಲಸ ಆಗುತ್ತಿಲ್ಲ ಎಂದು ಆರೋಪವನ್ನು ಮಾಡಿದ್ದರು.

ಪ್ರತಿ ಮಂಗಳವಾರ ಕನಿಷ್ಟ 60 ಸಾವಿರ ಜನರು ದೇವಾಲಯಕ್ಕೆ ಬರುತ್ತಾರೆ. ಪ್ರತಿ ಹುಣ್ಣಿಮೆಗೆ ಲಕ್ಷಗಟ್ಟಲೇ ಜನರು ಸೇರುತ್ತಾರೆ. ಅಗತ್ಯ ಸಂಖ್ಯೆಯಲ್ಲಿ ಸ್ನಾನಗೃಹಗಳು ಮತ್ತು ಶೌಚಾಲಯಗಳು ಇಲ್ಲದ ಕಾರಣ ಜನರು ಎಲ್ಲೆಂದರಲ್ಲಿ ಶೌಚಕ್ಕೆ ತೆರಳಿ ಮಲೀನ ಮಾಡುತ್ತಾರೆ. ದೇವಸ್ಥಾನದ ಸುತ್ತಲು ಶುಚಿತ್ವ ಇಲ್ಲದೇ ಇರುವುದರಿಂದ ನೋಣದ ಸಮಸ್ಯೆ ಉಂಟಾಗಿದೆ. ಸುತ್ತಲು ಆರೋಗ್ಯಕರ ಪರಿಸರ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಸಚಿವರು ಮಾತನಾಡಿ, "ಹುಲಿಗಿ ದೇವಸ್ಥಾನದ ಬಗ್ಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ಗಮನಿಸಿದ್ದೇನೆ. ದೇವಸ್ಥಾನದ ಜಾಗ ಬಿಟ್ಟು 30 ಎಕರೆ ಜಮೀನು ಖರೀದಿಸಲಾಗಿದೆ ಎನ್ನುವ ಮಾಹಿತಿ ಇದೆ. ಅಧಿಕಾರಿಗಳು ಕಾಳಜಿ ವಹಿಸಿ ಕೆಲಸ ಮಾಡಬೇಕು. ಜಾಗದ ವ್ಯವಸ್ಥೆ ಇದ್ದರೆ ಹಂತಹಂತವಾಗಿ ಎಲ್ಲವನ್ನು ಮಾಡಬಹುದು. ಗುಣಮಟ್ಟದ ಕೆಲಸ ಕಾರ್ಯಗಳಾಗಲು ಗ್ರಾಮ ಪಂಚಾಯತಿ ಸದಸ್ಯರು ಸಹಕಾರ ನೀಡಬೇಕು" ಎಂದು ಹೇಳಿದ್ದರು.

ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಅರವಿಂದ ಸುತಗುಂಡಿ ಮಾತನಾಡಿ, " ಪುರುಷರು ಬಟ್ಟೆ ಬದಲಾಯಿಸುವ ಸ್ಥಳ, ಮಹಿಳೆಯರ ಸ್ನಾನಗೃಹ ಮತ್ತು ಶೌಚಾಲಯ, ಮಹಿಳೆಯರು ಬಟ್ಟೆ ಬದಲಾಯಿಸುವ ಸ್ಥಳ, ತ್ಯಾಜ್ಯ ವಿಂಗಡನಾ ಸ್ಥಳ, ಕ್ಯಾಂಟಿನ್ ನಿರ್ಮಾಣ, ಎಸ್‌ಟಿಪಿ ಸೇರಿದಂತೆ ಹಲವಾರು ಅಂಶಗಳನ್ನು ಒಳಗೊಂಡು ದೇವಸ್ಥಾನದ ಸಮಗ್ರ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ" ಎಂದು ತಿಳಿಸಿದ್ದರು.

ಹುಲಿಗೆಮ್ಮ ದೇವಿ ದೇವಸ್ಥಾನದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ಕಲ್ಲಿನಿಂದ ಕಟ್ಟಡ ಕಟ್ಟುವ ಬಗ್ಗೆ, ದೇವಸ್ಥಾನದ ಸುತ್ತಲು ಚಂದ್ರಶಾಲೆ ನಾಲ್ಕು ದಿಕ್ಕಿನಲ್ಲಿ ಗೋಪುರಗಳನ್ನು ನಿರ್ಮಾಣ ಮಾಡುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿತ್ತು. 2022-23ನೇ ಸಾಲಿನಲ್ಲಿ ದೇವಸ್ಥಾನಕ್ಕೆ 14 ಕೋಟಿ ರೂ. ಆದಾಯ ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+