ಕಲ್ಯಾಣ ಕರ್ನಾಟಕದ 2 ರೈಲು ಯೋಜನೆಗಳ ಕುರಿತು ಅಪ್‌ಡೇಟ್‌

ಕೊಪ್ಪಳ, ಏಪ್ರಿಲ್ 16: ಕಲ್ಯಾಣ ಕರ್ನಾಟಕ ಭಾಗದ ಎರಡು ಪ್ರಮುಖ ರೈಲು ಯೋಜನೆಗಳ ಕುರಿತು ಅಪ್‌ಡೇಟ್ ಸಿಕ್ಕಿದೆ. ಗದಗ-ವಾಡಿ ಮತ್ತು ಮುನಿರಾಬಾದ್-ಮಹೆಬೂಬನಗರ ರೈಲ್ವೆ ಯೋಜನೆಗಳು ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲಿವೆ ಎಂದು ನಿರೀಕ್ಷೆ ಮಾಡಲಾಗಿದೆ. ಈ ಯೋಜನೆಗಳು ಪೂರ್ಣಗೊಂಡರೆ ಮುಂಬೈ-ಕರ್ನಾಟಕದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ನೇರವಾಗಿ ರೈಲು ಸಂಪರ್ಕ ಸಿಗಲಿದ್ದು, ಜನರ ಪ್ರಯಾಣ, ಸರಕು ಸಾಗಣೆಗೆ ಸಹ ಸಹಾಯಕವಾಗಲಿದೆ.

ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ, ಕೊಪ್ಪಳ ಸಂಸದ ಕೆ. ರಾಜಶೇಖರ ಬಸಬವರಾಜ ಹಿಟ್ನಾಳ ಹುಬ್ಬಳ್ಳಿ-ಕುಷ್ಟಗಿ ರೈಲು ಆರಂಭವಾಗಲಿರುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಆಗ ಪ್ರಮುಖ ರೈಲು ಯೋಜನೆಗಳ ಕುರಿತು ಮಾಹಿತಿ ಕೊಟ್ಟರು.

Gadag Wadi And Munirabad Mahabubnagar Railway Line Update

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, "ನಮ್ಮ ಕಲ್ಯಾಣ ಕರ್ನಾಟಕ ಭಾಗದ ಗದಗ-ವಾಡಿ ಮತ್ತು ಮುನಿರಾಬಾದ್-ಮಹೆಬೂಬನಗರ ರೈಲ್ವೆ ಯೋಜನೆಗಳು ಮುಂಬರುವ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ" ಎಂದು ಹೇಳಿದರು.

ರೈಲು ಯೋಜನೆಗಳ ವಿವರ: ಬಸವರಾಜ ರಾಯರಡ್ಡಿ ಮಾತನಾಡಿ, "ಗದಗ-ವಾಡಿ ರೈಲ್ವೆ ಯೋಜನೆ, ಉತ್ತರ ಕರ್ನಾಟಕ ಭಾಗದ ಮಹತ್ವದ ರೈಲ್ವೆ ಮಾರ್ಗಗಳಲ್ಲಿ ಒಂದಾಗಿದ್ದು, ಇದು ಮುಂಬೈ ಕರ್ನಾಟಕದಿಂದ ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ನೇರವಾಗಿ ರೈಲು ಸಂಪರ್ಕ ಕಲ್ಪಿಸುವ ಯೋಜನೆಯಾಗಿದೆ. ಇದಲ್ಲದೆ ಹುಬ್ಬಳ್ಳಿ, ಗದಗ, ಯಲಬುರ್ಗಾ, ಕುಕನೂರು, ಕುಷ್ಟಗಿ, ಮುದಗಲ್, ಲಿಂಗಸೂರು, ಹಟ್ಟಿ ಚಿನ್ನದ ಗಣಿ, ಸುರಪುರ, ಶಹಪುರದಿಂದ ವಾಡಿ ವರೆಗಿನ ಈ ಮಾರ್ಗವು ಮುಂದಿನ ದಿನಮಾನಗಳಲ್ಲಿ ಉತ್ತಮವಾದ ವಾಣಿಜ್ಯ ವಹಿವಾಟಿಗೆ ಸಂಪರ್ಕ ಕೊಂಡಿಯಾಗಲಿದೆ" ಎಂದರು.

"ಭವಿಷ್ಯದಲ್ಲಿ ರೈಲುಗಳು ಗೋವಾದಿಂದ ಹೈದರಾಬಾದ್, ಗೋವಾದಿಂದ ದೆಹಲಿಗೆ ವಯಾ ಇದೇ ಮಾರ್ಗವಾಗಿ ಸಂಚರಿಸಲು ಅನುಕೂಲವಾಗಲಿದೆ. ಹುಬ್ಬಳ್ಳಿ-ಸೋಲಾಪುರ, ಹುಬ್ಬಳ್ಳಿ-ಬೀದರ್ ರೈಲ್ವೆ ಮಾರ್ಗಕ್ಕೆ ಇದು ಪರ್ಯಾಯ ಮಾರ್ಗ ಆಗಲಿದ್ದು, ಇದರಿಂದ ನಮ್ಮ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಈ ಹಿಂದೆ ನಾನು ಲೋಕಸಭಾ ಸದಸ್ಯನಾಗಿದ್ದ ಸಂದರ್ಭದಲ್ಲಿ ಮುನಿರಾಬಾದ್-ಮಹೆಬೂಬ್ ನಗರ ಮತ್ತು ಗದಗ-ವಾಡಿ ಎರಡು ರೈಲ್ವೆ ಯೋಜನೆಗಳಿಗೆ ಶಿಫಾರಸು ಮಾಡಿದ್ದೆ. ಮಲ್ಲಿಕಾರ್ಜುನ ಖರ್ಗೆ ಅವರು ಅಂದು ರೈಲ್ವೆ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಎರಡು ಮಾರ್ಗಗಳನ್ನು ಸೇರಿಸುವಲ್ಲಿ ಅವರ ಪ್ರಯತ್ನವು ಇದ್ದು, ಈ ಸಂದರ್ಭದಲ್ಲಿ ನಾವು ಅವರನ್ನು ನೆನಪಿಸಿಕೊಳ್ಳಬೇಕಿದೆ" ಎಂದು ತಿಳಿಸಿದರು.

"ಮುನಿರಾಬಾದ್-ಗಂಗಾವತಿಗೆ ಹೋಗುವ ಮಾರ್ಗದಲ್ಲಿ ಗುಡ್ಡಗಳಿರುವುದರಿಂದ ಅಲ್ಲಿ ಸುರಂಗ ಮಾರ್ಗಕ್ಕೆ ತೊಂದರೆಯಾದ ಕಾರಣದಿಂದ ಮುನಿರಾಬಾದ್-ಮಹೆಬೂಬ್ ನಗರ ರೈಲ್ವೆ ಮಾರ್ಗಕ್ಕೆ ಮುನಿರಾಬಾದ್ ಬದಲಿಗೆ ಗಿಣಿಗೇರಾವನ್ನು ಸೇರಿಸಲಾಯಿತು. ಗಿಣಿಗೇರಾ-ಮಹೆಬೂಬ್ ನಗರ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದಲ್ಲಿ ಕಾಮಗಾರಿಯು ಪೂರ್ಣಗೊಂಡಿದೆ. ನಮ್ಮ ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಿಧಾನವಾಗಿ ನಡೆಯುತ್ತಿರುವುದರಿಂದ ವಿಳಂಬವಾಗಿದೆ" ಎಂದರು.

"ಭೂ ಸ್ವಾಧೀನ ವಿವಾದ ಶೀಘ್ರದಲ್ಲಿಯೇ ಇತ್ಯರ್ಥವಾಗಲಿದೆ. ಈ ರೈಲ್ವೆ ಮಾರ್ಗ ವಯಾ ಗಂಗಾವತಿ, ಸಿಂಧನೂರು, ಮಾನ್ವಿ, ರಾಯಚೂರು ಮಾರ್ಗವಾಗಿ ಹೋಗಲಿದ್ದು, ಇದರಿಂದ ಜನರ ಪ್ರಯಾಣದ ಜೊತೆಗೆ ಈ ಭಾಗದ ವಾಣಿಜ್ಯ ವ್ಯವಹಾರಗಳಿಗೆ ಅನುಕೂಲವಾಗಲಿದೆ. ಗದಗ-ವಾಡಿ ಹಾಗೂ ಗಿಣಿಗೇರಾ-ಮಹೆಬೂಬನಗರ ರೈಲ್ವೆ ಮಾರ್ಗವು ನಮ್ಮ ಭಾಗದ ದೊಡ್ಡ ರೈಲ್ವೆ ಯೋಜನೆಗಳು ಆಗಲಿವೆ. ಈ ಮಾರ್ಗಗಳು ಪೂರ್ಣಗೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ" ಎಂದು ಬಸವರಾಜ ರಾಯರಡ್ಡಿ ಹೇಳಿದರು.

ಬಸವರಾಜ ರಾಯರಡ್ಡಿ, "ಗದಗ-ವಾಡಿ ರೈಲ್ವೆ ಮಾರ್ಗದ ತಳಕಲ್‌ನಿಂದ ಕುಕನೂರು, ಯಲಬುರ್ಗಾ, ಕುಷ್ಟಗಿ ತನಕ ಸುಮಾರು 58 ಕಿ. ಮೀ. ವರೆಗೆ ಕಾಮಗಾರಿಯು ಪೂರ್ಣಗೊಂಡಿದೆ. ವಾಡಿ-ಶಹಾಪುರ ತನಕ ಕಾಮಗಾರಿ 3 ರಿಂದ 6 ತಿಂಗಳಲ್ಲಿ ಮುಕ್ತಾಯವಾಗಲಿದ್ದು, ಇದರಿಂದ ಒಟ್ಟು 106 ಕಿ. ಮೀ. ವರೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರ ಮಧ್ಯದಲ್ಲಿರುವ 165 ಕಿ. ಮೀ. ಕಾಮಗಾರಿಗೆ ರಾಜ್ಯ ಸರ್ಕಾರವು ಪತ್ರ ಬರೆದಿದ್ದು, ಕೇಂದ್ರ ಸರ್ಕಾರವು ಸಿಂಗಲ್ ಟೆಂಡರ್ ಕರೆದಿದೆ. ಇದಕ್ಕೆ ರಾಜ್ಯ ಸರ್ಕಾರವು ಹಣ ನೀಡಲಿದೆ" ಎಂದರು.

"ಗದಗ-ವಾಡಿ ರೈಲ್ವೆ ಮಾರ್ಗದ ಪೂರ್ಣಗೊಂಡಿರುವ 58 ಕಿ. ಮೀ. ರೈಲ್ವೆ ಮಾರ್ಗದಲ್ಲಿ ಹುಬ್ಬಳ್ಳಿಯಿಂದ ರೈಲು ಆರಂಭಿಸಬೇಕೆಂದು ರಾಜ್ಯ ಸರ್ಕಾರದಿಂದ ಕೇಂದ್ರ ರೈಲ್ವೆ ಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಇದರ ಜೊತೆಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಜೊತೆಗೂ ಚರ್ಚಿಸಿದ್ದು, ಬರುವ ಮೇ ತಿಂಗಳಿನ 15ರೊಳಗಾಗಿ ಹುಬ್ಬಳ್ಳಿ-ಕುಷ್ಟಗಿ ರೈಲು ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ" ಎಂದು ವಿವರಣೆ ನೀಡಿದರು.

ಕೊಪ್ಪಳ ಸಂಸದ ಕೆ. ರಾಜಶೇಖರ ಬಸಬವರಾಜ ಹಿಟ್ನಾಳ ಮಾತನಾಡಿ, "ಗದಗ-ವಾಡಿ ರೈಲು ಮಾರ್ಗ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಇದರಿಂದ ಎಲ್ಲಾ ಭಾಗಗಳ ತ್ವರಿತ ಅಭಿವೃದ್ಧಿಯಾಗಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ 50ರಷ್ಟು ಅನುದಾನವನ್ನು ನೀಡಿದೆ. ಈಗಾಗಲೇ ಗದಗ-ವಾಡಿ ರೈಲ್ವೆ ಯೋಜನೆ ಕಾಮಗಾರಿ ತಳಕಲ್‌ನಿಂದ ಕುಷ್ಟಗಿ ತನಕ ಮುಗಿದಿದ್ದು, ರೈಲು ಪ್ರಾಯೋಗಿಕವಾಗಿ ಸಂಚರಿಸಿದೆ. ಆದಷ್ಟು ಬೇಗನೆ ಇದರ ಉದ್ಘಾಟನೆಯನ್ನು ನೆರವೇರಿಸಲಾಗುವುದು" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+