ಕೊಪ್ಪಳ; ಅಂಜನಾದ್ರಿ ಬೆಟ್ಟದ ಆದಾಯದಲ್ಲಿ ಭಾರೀ ಏರಿಕೆ

ಕೊಪ್ಪಳ, ಮಾರ್ಚ್ 04: ವಿಶ್ವ ಪರಂಪರೆ ತಾಣ ಹಂಪಿಯ ಸಮೀಪದಲ್ಲಿನ ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ದೇವಾಲಯದ ಆದಾಯದಲ್ಲಿಯೂ ಗಣನೀಯ ಏರಿಕೆ ಕಂಡು ಬಂದಿದೆ.

ಪುರಾತನ ಇತಿಹಾಸ ಹೊಂದಿರುವ ಅಂಜನಾದ್ರಿ ಆಂಜನೇಯ ದೇವಾಲಯಕ್ಕೆ ಎರಡು ವರ್ಷಗಳಲ್ಲಿ 2 ಕೋಟಿ ರೂ. ಆದಾಯ ಬಂದಿದೆ. ದೇವಾಲಯಕ್ಕೆ ಆಗಮಿಸುವ ಗಣ್ಯರ ಸಂಖ್ಯೆಯೂ ಹೆಚ್ಚಾಗಿದೆ.

ಇತ್ತೀಚೆಗೆ ರಾಜ್ಯಪಾಲ ವಜುಭಾಯಿ ವಾಲಾ, ನಟ ಪುನೀತ್ ರಾಜ್ ಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿದಂತೆ ಹಲವಾರು ಗಣ್ಯರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

 Anjanadri Hill Temple Income increased

ರಾಮಭಕ್ತನಾದ ಹನುಮಂತ ಜನಿಸಿದ ಸ್ಥಳವಿದು ಎಂದು ಇತಿಹಾಸ ಹೇಳುತ್ತದೆ. ಹಂಪಿಗೆ ಸಮೀಪದಲ್ಲಿರುವ ಈ ಪ್ರದೇಶಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದ್ದರಿಂದ, ಆದಾಯದಲ್ಲಿಯೂ ಏರಿಕೆಯಾಗಿದೆ.

ಅಂಜನಾದ್ರಿ ಬೆಟ್ಟ, ದೇವಾಲಯ ಖಾಸಗಿ ಒಡೆತನದಲ್ಲಿತ್ತು. ಕರ್ನಾಟಕ ಸರ್ಕಾರ 2018ರಲ್ಲಿ ಮುಜರಾಯಿ ಮತ್ತು ಕಂದಾಯ ಇಲಾಖೆ ವ್ಯಾಪ್ತಿಗೆ ಬೆಟ್ಟ ಮತ್ತು ದೇವಾಲಯವನ್ನು ಪಡೆದಿವೆ.

ಖಾಸಗಿ ಟ್ರಸ್ಟ್‌ನಿಂದ ಸರ್ಕಾರಕ್ಕೆ ಹಸ್ತಾಂತರವಾಗುವಾಗ ಕೇವಲ 247 ರೂ. ಕಾಣಿಕೆ ಹುಂಡಿಯಲ್ಲಿತ್ತು. ಎರಡು ವರ್ಷಗಳಲ್ಲಿ ದೇವಾಲಯದ ಹುಂಡಿ, ಪಾರ್ಕಿಂಗ್ ಶುಲ್ಕ, ಲಾಡು ಮತ್ತು ತೀರ್ಥ ಮಾರಾಟದಿಂದ ಸುಮಾರು 2 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

2019ರ ಏಪ್ರಿಲ್ 1 ರಿಂದ 2020ರ ಮಾರ್ಚ್ 31ರ ತನಕ 1,12,62,404 ರೂ. ಆದಾಯ, 2020ರ ಏಪ್ರಿಲ್ 1 ರಿಂದ 2021 ಫೆಬ್ರವರಿ 28ರ ತನಕ 57,27,187 ರೂ. ಆದಾಯ ಸಂಗ್ರಹವಾಗಿದೆ. ಭಕ್ತರ ಅನುಕೂಲಕ್ಕಾಗಿ ವಿವಿಧ ಕಾಮಗಾರಿಗಳನ್ನು ಆಡಳಿತ ಮಂಡಳಿ ಕೈಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+