ಮದುವೆ ಆಮಂತ್ರಣದಲ್ಲಿ ಮೋದಿ ಪರ ಪ್ರಚಾರ ಮಾಡಿದ ಕೊಪ್ಪಳದ ಯುವಕ

ಕೊಪ್ಪಳ, ಮಾರ್ಚ್ 05: ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರ ಅಭಿಮಾನಿಗಳು ಮೋದಿ ಅವರ ಫೋಟೋ ಹಾಕಿ 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಮತ ನೀಡುವಂತೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವುದು ಹೆಚ್ಚಾಗಿ ಕಂಡುಬರುತ್ತಿದೆ.

ಅಂತೆಯೇ ಇಂತಹುದೇ ಒಂದು ಪ್ರಸಂಗ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.ಯುವಕನೊಬ್ಬ ತನ್ನ ಮದುವೆ ಆಮಂತ್ರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರ ನಡೆಸಿದ್ದಾನೆ. 2019 ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅವರಿಗೆ ಮತ ನೀಡಿದರೆ ಅದೇ ನನ್ನ ಮದುವೆಗೆ ನಿಜವಾದ ಉಡುಗೊರೆ ನೀಡಿದಂತೆ ಎನ್ನುವ ಸಂದೇಶ ಸಾರಿದ್ದಾನೆ. ಈ ಮೂಲಕ ಚುನಾವಣಾ ಪ್ರಚಾರ ಲಗ್ನ ಪತ್ರಿಕೆಗೂ ಲಗ್ಗೆ ಇಟ್ಟಂತಾಗಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ರ‌್ಯಾವಣಿಕಿ ಗ್ರಾಮದ ಯುವಕ ಅಮರೇಶ ಪ್ರಧಾನಿ ಮೋದಿಯ ಅಪ್ಪಟ ಅಭಿಮಾನಿ. ಹೀಗಾಗಿ ತನ್ನ ವಿವಾಹ ಆಮಂತ್ರಣದಲ್ಲಿ ಮೋದಿ ಭಾವಚಿತ್ರ ಮುದ್ರಿಸಿದ್ದಾನೆ. ಈ ಮೂಲಕ ಮೋದಿಯನ್ನು ಮತ್ತೊಮ್ಮೆ ಬೆಂಬಲಿಸಬೇಕು ಎನ್ನುವ ಸಂದೇಶ ಸಾರಿದ್ದಾನೆ.

Amaresh campaigned for Modi in the wedding invitation

ಮೇ.7 ರಂದು ಯಲಬುರ್ಗಾ ತಾಲೂಕಿನ ಮಾರನಾಳ ಗ್ರಾಮದ ಯವತಿ ಅನ್ನಪೂರ್ಣಳ ಜೊತೆ ಅಮರೇಶನ ವಿವಾಹ ನಿಶ್ಚಯವಾಗಿದೆ. ಅಮರೇಶನಿಗೆ ಮತ್ತೊಮ್ಮೆ ಮೋದಿ ದೇಶದ ಪ್ರಧಾನಿಯಾಗಬೇಕೆನ್ನು ಆಸೆ. ಹೀಗಾಗಿ ಹೆಣ್ಣಿನ ಮನೆ ಕಡೆಯವರಿಗೂ ಒಪ್ಪಿಸಿ ತನ್ನ ಮದುವೆಯ ನೆಪದಲ್ಲಿ ಮೋದಿ ಪರ ಪ್ರಚಾರಕ್ಕೆ ಮುಂದಾಗಿದ್ದಾನೆ.ಈತನ ಲಗ್ನ ಪತ್ರಿಕೆಯಲ್ಲಿ ಮತ್ತೊಮ್ಮೆ ಮೋದಿ ಎನ್ನುವ ಟ್ಯಾಗ್ ಲೈನ್ ಜನರನ್ನು ಆಕರ್ಷಿಸುವಂತಿದೆ.

ಮೋದಿ ಆಡಳಿತ ಹಾಗೂ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿದ ಮೋದಿ ನಡೆ ಅಮರೇಶನಿಗೆ ಮೋದಿ ಬಗೆಗೆ ಇನ್ನಷ್ಟು ಅಭಿಮಾನ ಹೆಚ್ಚಲು ಕಾರಣವಾಗಿದೆಯಂತೆ.ಹೆಚ್ಚು ಕಡಿಮೆ 2 ಸಾವಿರಕ್ಕೂ ಅಧಿಕ ಲಗ್ನ ಪತ್ರಿಕೆಗಳನ್ನು ಅಮರೇಶ ಮುದ್ರಣ ಮಾಡಿಸಿದ್ದಾನೆ.

Amaresh campaigned for Modi in the wedding invitation

ಸಂಬಂಧಿಕರಿಗೆ, ಹಿತೈಷಿಗಳಿಗೆ, ಸ್ನೇಹಿತರಿಗೆ ಲಗ್ನ ಪತ್ರಿಕೆ ಕೊಡುವ ಜೊತೆಗೆ ಮೋದಿಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾನೆ. ಒಟ್ಟಿನಲ್ಲಿ ಅಮರೇಶನ ಈ ಕಾರ್ಯ ಸದ್ಯ ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+