200 Unit Free Electricity: ಬಿಲ್ ಕೇಳಿದ ಜೆಸ್ಕಾಂ ಸಿಬ್ಬಂದಿ ಮೇಲೆ ಚಪ್ಪಲಿಯಿಂದ ಹಲ್ಲೆ
ಬೆಂಗಳೂರು, ಮೇ 24: ಉಚಿತ ಘೋಷಣೆಗಳ ಸಹಿತ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ 200 ಯುನಿಟ್ ಉಚಿತ ವಿದ್ಯುತ್ ಭರವಸೆ ಜಾರಿ ತರುವ ಮುನ್ನವೇ ಜನರು ವಿದ್ಯುತ್ ಬಿಲ್ ಪಾವತಿಸಲು ನಿರಾಕರಿಸುತ್ತಿದ್ದಾರೆ. ಇದೇ ವಿಚಾರವಾಗಿ ವಿದ್ಯುತ್ ಬಿಲ್ ಕೇಳಲು ಬಂದ ಸಿಬ್ಬಂದಿಯೊಬ್ಬರಿಗೆ ಗ್ರಾಹಕರೊಬ್ಬರಿಂದ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಜೆಸ್ಕಾಂ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಜಿಲ್ಲೆಯ ಕೂಕನಪಳ್ಳಿ ಗ್ರಾಮದಲ್ಲಿ ಘಟನೆ. ಗ್ರಾಮದ ನಿವಾಸಿ ಚಂದ್ರಶೇಖರ್ ಹಿರೇಮಠ ಎಂಬುವವರು ಜೆಸ್ಕಾಂ ಸಿಬ್ಬಂದಿ (ಲೈನ್‌ಮ್ಯಾನ್) ಮಂಜುನಾಥ್ ಎಂಬುವವರು ಬಾಕಿ ವಿದ್ಯುತ್ ಬಿಲ್ ಕೇಳಲು ಬಂದಾಗ ಹಲ್ಲೆ ನಡೆದಿದೆ.

ಚಂದ್ರಶೇಖರ್ ಹಿರೇಮಠ ಅವರು ಸುಮಾರು ಆರು ತಿಂಗಳ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಒಟ್ಟು 9990 ರೂಪಾಯಿ ವಿದ್ಯುತ್ ಬಿಲ್ ಬಾಕಿ ಹಣವನ್ನು ಕೇಳಲು ಲೈನ್‌ಮ್ಯಾನ್ ಅವರ ಮನೆಗೆ ಆಗಮಿಸಿದ್ದರು.
ಸರ್ಕಾರದ ಉಚಿತ ಘೋಷಣೆ: ಬಿಲ್ ಕಟ್ಟದ ಜನ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ವಿದ್ಯುತ್ ಬಿಲ್ ವಿಚಾರದಲ್ಲಿ ಲೈನ್‌ಮ್ಯಾನ್ ಮತ್ತು ಜನಸಾಮಾನ್ಯರ ನಡುವೆ ಜಟಾಪಟಿಗಳು ನಡೆಯುತ್ತಿದೆ. ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ಎಂದು ಕಾಂಗ್ರೆಸ್ ಪಕ್ಷ ಮತ್ತದರ ನಾಯಕರು ಘೋಷಿಸಿದ್ದರು. ಸದ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹೀಗಾಗಿ ನಾವು ಬಿಲ್ ಕಟ್ಟುವುದಿಲ್ಲ ಎಂದು ಜನ ಹೇಳುತ್ತಿದ್ದಾರೆ.
ಅದೇ ರೀತಿ ಮಂಜುನಾಥ್ ಅವರಿಗೆ ಚಂದ್ರಶೇಖರ್ ಬಾಯಿ ಮಾತಿನಿಂದ ಹೇಳಲಿಲ್ಲ. ವಿದ್ಯುತ್ ಉಚಿತ ಇದೆ ಎಂದು ಹೇಳುತ್ತಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತಿಗೆ ಮಾತು ಬೇಳೆದು ಚಂದ್ರಶೇಖರ್ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಘಟನೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ವಿದ್ಯುತ್ ಬಿಲ್ ಕೇಳುವ ಸಿಬ್ಬಂದಿಗೆ ಹಲ್ಲೆ ಮಾಡುವ ಮಟ್ಟಕ್ಕೆ ಜನ ಇಳಿದಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಇಂತಹ ಘಟನೆಗಳಿಗೆ ಕಾರಣವೇನು?
ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತಾವು ಹೇಳಿದ್ದ ಉಚಿತ ವಿದ್ಯುತ್ ಬಿಲ್ ಯೋಜನೆಯನ್ನು ಇನ್ನು ಜಾರಿ ಮಾಡಿಲ್ಲ. ಜಾರಿ ಮಾಡಿದ ಬಳಿಕ ಉಚಿತ ವಿದ್ಯುತ್, ಅಲ್ಲಿಯವರೆಗೆ ವಿದ್ಯುತ್ ಬಿಲ್ ಕಟ್ಟಬೇಕಿದೆ. ನೀವು ಬಾಕಿ ಉಳಿಸಿಕೊಂಡಿರುವ ಆರು ತಿಂಗಳ ಬಿಲ್ ನೀಡುವಂತೆ ಲೈನ್‌ಮ್ಯಾನ್ ಕೇಳಿದ್ದಾರೆ. ಇದಕ್ಕೆ ಒಪ್ಪದ ಚಂದ್ರಶೇಖರ್ ಅವರಿಂದ ಹಲ್ಲೆ ನಡೆದಿದೆ.
ಗ್ರಾಹಕ ಚಂದ್ರಶೇಖರ್ ವಿರುದ್ಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಲೈನ್‌ಮ್ಯಾನ್ ದೂರು ನೀಡಿದ್ದಾರೆ. ಸದ್ಯ ಆರೋಪಿ ಮೇಲೆ FIR ದಾಖಲಾಗಿದೆ. ಕೇವಲ ಇದೊಂದೆ ಘಟನೆ ಮಾತ್ರವಲ್ಲ ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬರುವ ಭರದಲ್ಲಿ ಮಾಡಿದ ಐದು ಉಚಿತ ಘೋಷಣೆಗಳಲ್ಲಿ 200ಯುನಿಟ್ ಉಚಿತ ವಿದ್ಯುತ್ ಪೂರೈಕೆ ಸಹ ಒಂದು. ಅಲ್ಲದೇ ಅಧಿಕಾರಕ್ಕೆ ಬಂದ ಮೊದಲ ಸಂಪುಟದಲ್ಲೇ ಈ ಬಗ್ಗೆ ತೀರ್ಮಾನಿಸಿ ಆದೇಶ ಹೊರಡಿಸಲಾಗುವುದು ಎಂದು ಹೇಳಿತ್ತು. ಆದರೆ ಈಗ ಸಂಪುಟ ವಿಸ್ತರಣೆಯ ಕಸರತ್ತು ಆರಂಭಿಸಿದ್ದಾರೆ. ಇತ್ತಿ ವಿದ್ಯುತ್ ಬಿಲ್ ಬಾಕಿ ಕೇಳಲು ಹೋದ ಸಿಬ್ಬಂದಿ ಜೊತೆಗೆ ಸಾರ್ವಜನಿಕರು ನಿತ್ಯವು ಜಗಳವಾಡುತ್ತಿದ್ದಾರೆ.












Click it and Unblock the Notifications