ಕೊಪ್ಪಳ : ವಿದ್ಯುತ್ ಸ್ಪರ್ಶ, ಹಾಸ್ಟೆಲ್‌ನಲ್ಲಿ 5 ವಿದ್ಯಾರ್ಥಿಗಳು ಬಲಿ
ಕೊಪ್ಪಳ, ಆಗಸ್ಟ್ 18 : ವಿದ್ಯುತ್ ಸ್ಪರ್ಶದಿಂದಾಗಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಕೊಪ್ಪಳದ ಹಾಸ್ಟೆಲ್‌ನಲ್ಲಿ ನಡೆದಿದೆ. ಕೊಪ್ಪಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕೊಪ್ಫಳ ನಗರದಲ್ಲಿರುವ ದೇವರಾಜ ಅರಸು ಬಿಸಿಎಂ ಹಾಸ್ಟೆಲ್‌ನಲ್ಲಿ ಭಾನುವಾರ ಬೆಳಗ್ಗೆ ಈ ಅವಘಡ ನಡೆದಿದೆ. ಸ್ವಾತಂತ್ರ ದಿನಾಚರಣೆಗೆ ಬಾವುಟ ಹಾರಿಸಲು ನೆಟ್ಟಿದ್ದ ಕಬ್ಬಿಣದ ಕಂಬ ತೆರವು ಮಾಡುವಾಗ ಈ ಘಟನೆ ನಡೆದಿದೆ.
ಸರ್ಕಾರಿ ಕಟ್ಟಡ ಲಭ್ಯವಿಲ್ಲದ ಕಾರಣ ಬಾಡಿಗೆ ಕಟ್ಟಡದಲ್ಲಿ ಬಿಸಿಎಂ ಹಾಸ್ಟೆಲ್ ನಡೆಸಲಾಗುತ್ತಿತ್ತು. ಗುರುವಾರ ಧ್ವಜಾರೋಹಣ ಮಾಡಲು ಕಬ್ಬಿಣದ ಕಂಬವನ್ನು ನೆಡಲಾಗಿತ್ತು. ಇಂದು ಬೆಳಗ್ಗೆ ವಿದ್ಯಾರ್ಥಿಗಳು ಅದನ್ನು ತೆರವುಗೊಳಿಸುತ್ತಿದ್ದರು.

ಮೃತಪಟ್ಟ ವಿದ್ಯಾರ್ಥಿಗಳನ್ನು ಮೆಟಗಲ್ ನಿವಾಸಿ ಮಲ್ಲಿಕಾರ್ಜುನ, ಲಿಂಗದಹಳ್ಳಿ ನಿವಾಸಿ ಬಸವರಾಜ, 9ನೇ ತರಗತಿಯ ಹಲಗೇರಿಯ ದೇವರಾಜ, ಹೈದರ್ಣೇನಗರದ ಕುಮಾರ್ಶ, 8ನೇ ತರಗತಿಯ ಲಾಚನಕೇರಿಯ ಗಣೇಶ್ ಎಂದು ಗುರುತಿಸಲಾಗಿದೆ.
ಮೊದಲು ಒಬ್ಬ ವಿದ್ಯಾರ್ಥಿಗೆ ವಿದ್ಯುತ್ ಸ್ಪರ್ಶಿಸಿತು ಆತನನ್ನು ರಕ್ಷಣೆ ಮಾಡಲು ಹೋದ ಉಳಿದ ನಾಲ್ವರು ಸಹ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಹಾಸ್ಟೆಲ್ ಬಳಿ ನೂರಾರು ಜನರು ಸೇರಿದ್ದು, ಕೊಪ್ಪಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications