ಒಂದೊಮ್ಮೆ ನನಗೆ ಕೊರೊನಾ ಬಂದರೆ ಮಮತಾ ಬ್ಯಾನರ್ಜಿಯನ್ನು ಅಪ್ಪಿಕೊಳ್ಳುತ್ತೇನೆ: ಬಿಜೆಪಿ ಮುಖಂಡ

ಕೊಲ್ಕತ್ತ, ಸೆಪ್ಟೆಂಬರ್ 28: ಒಂದೊಮ್ಮೆ ನನಗೆ ಕೊರೊನಾ ಸೋಂಕು ತಗುಲಿದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ತಬ್ಬಿಕೊಳ್ಳುತ್ತೇನೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿಕೆ ನೀಡಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಹೊಸದಾಗಿ ನೇಮಕಗೊಂಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ ಹೇಳಿಕೆ ನೀಡಿದ್ದಾರೆ.

ನಮ್ಮ ಪಕ್ಷದ ಕಾರ್ಯಕರ್ತರು ಕೊರೊನಾಗಿಂತಲೂ ದೊಡ್ಡ ಶತ್ರುವಾಗಿರುವ ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುತ್ತಿದ್ದಾರೆ. ಒಂದು ವೇಳೆ ನನಗೆ ಕೊರೊನಾವೈರಸ್ ತಗುಲಿದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿದರು.

Will Hug Mamata Banerjee If I Have Covid-19

ಕೊವಿಡ್-19 ರೋಗಿಗಳ ಕುಟುಂಬಗಳ ನೋವನ್ನು ಅರ್ಥಪಡಿಸಲು ಈ ರೀತಿ ಮಾಡುವುದಾಗಿ ದಕ್ಷಿಣ 24 ಪರಗಣದ ಬರುಯಿಪುರದಲ್ಲಿ ಭಾನುವಾರ ಸಂಜೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹಜ್ರಾ ನೀಡಿರುವ ಹೇಳಿಕೆ ವಿರುದ್ಧ ಸಿಲಿಗುರಿಯಲ್ಲಿ ಟಿಎಂಸಿ ಪೊಲೀಸ್ ದೂರು ದಾಖಲಿಸಿದೆ.

ಅನುಪಮ್ ಹಜ್ರಾ ಅವರ ಹೇಳಿಕೆಯನ್ನು ಖಂಡಿಸಿರುವ ಹಿರಿಯ ಟಿಎಂಸಿ ಮುಖಂಡ ಸೌಗಾತೊ ರಾಯ್, ಇದು ಬಿಜೆಪಿಯ ಮನಸ್ಥಿತಿಯನ್ನು ತೋರುತ್ತದೆ ಎಂದಿದ್ದಾರೆ.

ಕೊವಿಡ್ -19 ರೋಗಿಗಳ ಶವಗಳನ್ನು ರಾಜ್ಯದಲ್ಲಿ ಅಂತ್ಯಕ್ರಿಯೆ ನಡೆಸುವ ರೀತಿ ಕರುಣಾಜನಕವಾಗಿದೆ. ಮೃತದೇಹಗಳನ್ನು ಸೀಮೆಎಣ್ಣೆಯಿಂದ ಸುಡಲಾಗುತ್ತಿದೆ. ಕೊವಿಡ್-19 ನಿಂದ ಮೃತಪಟ್ಟ ಪೋಷಕರ ಮುಖಗಳನ್ನು ಮಕ್ಕಳಿಗೆ ತೋರಿಸುತ್ತಿಲ್ಲ.ನಾವು ಸತ್ತ ಬೆಕ್ಕುಗಳು ಅಥವಾ ನಾಯಿಗಳನ್ನು ಸಹ ಆ ರೀತಿ ನಡೆಸುಕೊಳ್ಳುವುದಿಲ್ಲ ಎಂದು ಅವರು ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+